Breaking News

ಬೆಳಗಾವಿ ಅಧಿವೇಶನದಲ್ಲೇ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022 ಅಂಗೀಕಾರಕ್ಕೆ ನಾಡೋಜ ಡಾ.ಮಹೇಶ ಜೋಶಿ ಆಗ್ರಹ

Spread the love

ಬೆಳಗಾವಿ ಅಧಿವೇಶನದಲ್ಲೇ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022 ಅಂಗೀಕಾರಕ್ಕೆ ನಾಡೋಜ ಡಾ.ಮಹೇಶ ಜೋಶಿ ಆಗ್ರಹ

ಯುವ ಭಾರತ ಸುದ್ದಿ ಬೆಂಗಳೂರು:
ʻಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022 ; ವನ್ನು ಕಾನೂನು ಮಾಡುವ ಎಲ್ಲಾ ಭರವಸೆಯನ್ನು ಸರಕಾರ ನೀಡಿದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕನ್ನಡದ ಬೆಳವಣಿಗೆಗೆ ಅಸ್ತ್ರವಾಗಿರುವ ಕಾನೂನು ಬರಲಿದೆ ಎನ್ನುವ ಭರವಸೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಹೊಂದಿದೆ. ಈ ಹಿನ್ನೆಲೆಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರನ್ನು ಭೆಟ್ಟಿ ಮಾಡಿ ವಿಧೇಯಕದ ಮಹತ್ವವನ್ನು ತಿಳಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

ಈಗಾಗಲೇ ವಿಧಾನ ಸಭೆಯಲ್ಲಿ ಮಂಡನೆ ಮಾಡಲಾಗಿರುವ ʻಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022ʼಅನ್ನು ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಚರ್ಚೆಗೆ ಬಂದು ಉಭಯ ಪಕ್ಷಗಳು ವಿಧಾನ ಸಭೆಯಲ್ಲಿ ವಿಧೇಯಕದ ಸಾಧಕ ಬಾಧಗಳ ಕುರಿತು ಸಮಗ್ರ ಚರ್ಚೆ ನಡೆಸಿ ಸದನದಲ್ಲಿ ಸರ್ವಾನುಮತದ ಒಪ್ಪಿಗೆಯ ಮೇರೆಗೆ ಕಾನೂನು ರಚನೆ ಆಗಲಿದೆ. ಈ ಮೂಲಕ ಕನ್ನಡಿಗರಿಗೆ ಕನ್ನಡ ಉಳಿಸಿಕೊಳ್ಳಲು ಆನೆ ಬಲ ಬಂದಂತಾಗುವುದು ಜೊತೆಗೆ ಶೀಘ್ರವೆ ಈ ಕಾನೂನು ರಚನೆ ಆಗುವುದು ಎಂಬ ನಂಬಿಕೆ ಇದೆ ಎಂಬ ಅಭಿಪ್ರಾಯವನ್ನು ನಾಡೋಜ ಡಾ. ಮಹೇಶ ಜೋಶಿಯವರು ವ್ಯಕ್ತಪಡಿಸಿದರು.

86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಮೊದಲು ʻಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022 ಕಾನೂನಾದರೆ ಅನ್ನಡದ ಅಕ್ಷರ ಜಾತ್ರಗೆ ಒಂದು ಅರ್ಥ ಬರಲಿದೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಎಲ್ಲ ರೀತಿಯಲ್ಲಿ ಕಾನೂನಿನ ಅಗತ್ಯತೆಯನ್ನು ಪ್ರತಿಯೊಬ್ಬ ಜನಪ್ರತಿನಿಧಿಗೂ ಅರ್ಥವಾಗುವಂತೆ ತಿಳಿಸುವ ಪ್ರಯತ್ನವನ್ನು ಮಾಡಿದೆ. ಕನ್ನಡ ಸಾಹಿತ್ಯ ಪರಿಷತ್ತು 12-10-2022 ರಂದು ʻಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022 ; ಕುರಿತಂತೆ ಕನ್ನಡದ ಮಠಗಳು, ನ್ಯಾಯಾಂಗ, ಸಾಹಿತ್ಯ, ಶಿಕ್ಷಣ, ಮಾಧ್ಯಮ, ಕಾನೂನು, ಚಲನಚಿತ್ರ ರಂಗ, ಉದ್ಯೋಗ, ಕೈಗಾರಿಕೆ, ಸೇರಿದಂತೆ ಪ್ರಮುಖ ಕ್ಷೇತ್ರಗಳ ಪರಿಣಿತರನ್ನು ಸೇರಿಸಿ ʻಚಿಂತನಾ ಗೋಷ್ಠಿʼಯನ್ನು ಪರಿಷತ್ತು ಹಮ್ಮಿಕೊಂಡು ಸುದೀರ್ಘವಾಗಿ ಚರ್ಚೆಸಿ, ವಿಧೇಯಕದಲ್ಲಿನ ಕೆಲವು ಕಲಂಗಳು ಪರಿಷ್ಕರಣೆಯಾಗಬೇಕು ಹಾಗೂ ಸಮಗ್ರ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಹಾಗೂ ಎಲ್ಲ ಕನ್ನಡ ಸಂಘಗಳಿಗೆ ಮಾತೃ ಸಂಸ್ಥೆಯಾದ ಮತ್ತು ಸರಕಾರದಿಂದ ʻರಾಜ್ಯ ಸಚಿವ ಸ್ಥಾನಮಾನʼ ಗೌರವವನ್ನು ಹೊಂದಿರುವ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾಯಿತ ಅಧ್ಯಕ್ಷರನ್ನು ʻರಾಜ್ಯಮಟ್ಟದ ಸಮಿತಿಗೆ ಉಪಾಧ್ಯಕ್ಷರಾಗಬೇಕುʼ ಎಂದು ಒಕ್ಕೊರಲಿನಿಂದ ಹೇಳಿ, ಜಿಲ್ಲಾ ಸಮಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕಗಳ ಚುನಾಯಿತ ಅಧ್ಯಕ್ಷರುಗಳು ಇರುವಂತೆ, ತಾಲೂಕು ಮಟ್ಟದ ಸಮಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷರು ಕಾರ್ಯನಿರ್ವಹಿಸಬೇಕು. ಜೊತೆಗೆ ಸರಕಾರಿ ಅಧಿಕಾರೇತರ ಸದಸ್ಯರುಗಳು ಈ ಸಮಿತಿಯಲ್ಲಿ ಇರಬೇಕು ಎಂಬ ಸರ್ವಾನುಮತದ ಸಲಹೆಯನ್ನು ನೀಡಲಾಗಿದೆ.

ಅದರೊಂದಿಗೆ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನ ಸಭೆಯ ಸಭಾಪತಿ ವಿಶ್ವೇಶ್ವರ ಹಗಡೆ ಕಾಗೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ.ಸುನಿಲ ಕುಮಾರ್, ವಿರೋಧಿ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೇರಿದಂತೆ ಪ್ರಮುಖ ನಾಯಕರನ್ನು ಭೇಟಿ ಮಾಡಿ ವಿಧೇಯಕವನ್ನು ಕಾನೂನು ಮಾಡುವಂತೆ ಒತ್ತಾಯ ಮಾಡಲಾಗಿದೆ. ನಮ್ಮ ಬೇಡಿಕೆಯನ್ನು ಪಕ್ಷತೀತವಾಗಿ ಎಲ್ಲರೂ ಒಪ್ಪಿಕೊಂಡು ಇದು ಕನ್ನಡ ತಾಯಿಯ ಕೆಲಸ ಎಂದು ಸ್ಪಷ್ಟಾಗಿ ಒಪ್ಪಿ ಕೊಂಡಿದ್ದಾರೆ ಎಂದು ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ʻಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022 ; ವು ಕಾನೂನು ಆದಾಗ ನಾಡಿನಲ್ಲಿ ಕನ್ನಡ ಭಾಷೆ ಕಡೆಗಣಿಸುವವರ ವಿರುದ್ಧ ಸೂಕ್ತ ಕಾನೂನು ಕುಣಿಕೆಯನ್ನು ಹಾಕಬಹುದು. ಆ ಮೂಲಕ ಕನ್ನಡ ಭಾಷೆ ಹಾಗೂ ನಾಡನ್ನು ಕಡೆಗಾಣಿಸುವವರ ಕಾನೂನು ದಂಡ ಪ್ರಯೋಗಕ್ಕೆ ಅವಕಾಶವಾಗಲಿದೆ. ಈ ಮೂಲಕ ಕನ್ನಡ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳುವುದಕ್ಕೆ ಕಾರಣವಾಗಲಿದೆ ಎಂದರು.
ಪ್ರಸಕ್ತ ವಿಧೇಯಕವನ್ನು ಎಲ್ಲರೂ ಒಕ್ಕೊರಲ ಒಮ್ಮತ ನೀಡುವ ಅಂಗೀಕಾರ ಕನ್ನಡಿಗರ ಪಾಲಿನ ವಿಜಯೋತ್ಸವ ಆಗಲಿದೆ. ಆ ವಿಜಯೋತ್ಸವದ ಪ್ರತಿಬಿಂಬ ಎಂಬಂತೆ ಹಾವೆರಿಯಲ್ಲಿ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳ ಜರುಗಲಿದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಈ ಬಾರಿಯ ಅಧಿವೇಶನದ ಮೇಲೆ ಎಲ್ಲ ಸಮಸ್ತ ಕನ್ನಡಿಗರ ದೃಷ್ಟಿ ನೆಟ್ಟಿದೆ. ಕೊಟ್ಟ ಮಾತಿನಂತೆ ಸರಕಾರ ಇನ್ನೆರಡು ದಿನಗಳಲ್ಲಿ ʻಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022 ; ಅನ್ನು ಕಾನೂನಾಗುವ ಭರವಸೆ ನೀಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.


Spread the love

About Yuva Bharatha

Check Also

ಹಿರೇಬೂದನೂರ : ಭಕ್ತರ ಸನ್ಮಾನ

Spread the loveಹಿರೇಬೂದನೂರ : ಭಕ್ತರ ಸನ್ಮಾನ ಮುರಗೋಡ : ಹಿರೇಬೂದನೂರ ಗ್ರಾಮದ ಶ್ರೀ ಸದ್ಗುರು ಸಂತ ಬಾಳುಮಾಮಾ ದೇವಸ್ಥಾನದ …

Leave a Reply

Your email address will not be published. Required fields are marked *

eighteen + 14 =