ರಾಷ್ಟ್ರೀಯ ವಿಚಾರ ಸಂಕಿರಣ : ಸಂಶೋಧನಾ ಪ್ರಬಂಧಗಳಿಗೆ ಆಹ್ವಾನ
ಯುವ ಭಾರತ ಸುದ್ದಿ ಕಾಸರಗೋಡು :
ಕೇಂದ್ರೀಯ ವಿಶ್ವವಿದ್ಯಾಲಯ ಕೇರಳ, ಪೆರಿಯ ಕಾಸರಗೋಡು ಇಲ್ಲಿಯ ಕನ್ನಡ ವಿಭಾಗವು ಅನುವಾದ-ಅನುಸಂಧಾನ: ತತ್ವ ಮತ್ತು ಪ್ರಯೋಗ ಎಂಬ ವಿಷಯದ ಕುರಿತು 8 ಮಾರ್ಚ್ 2023 ರಂದು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲು ಉದ್ದೇಶಿಸಲಾಗಿದೆ. ಈ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಅನುವಾದ ಸಾಹಿತ್ಯ ಸಾಧ್ಯತೆ ಮತ್ತು ಹೊಸ ಒಲವುಗಳ ಕುರಿತು ನಾಡಿನ ಖ್ಯಾತ ಅನುವಾದಕರು, ಹಿರಿಯ ಸಂಶೋಧಕರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿಚಾರ ಮಂಡಿಸಲಿದ್ದಾರೆ.
ಸಂಶೋಧನಾ ಪ್ರಬಂಧಗಳಿಗೆ ಆಹ್ವಾನ : ವಿಚಾರ ಸಂಕಿರಣದ ಆಶಯಕ್ಕೆ ಸಂಬಂಧಿಸಿದಂತೆ ಆಸಕ್ತ ವಿಷಯ ತಜ್ಞರು, ಅಧ್ಯಾಪಕರು, ವಿದ್ಯಾರ್ಥಿಗಳಿಂದ ಪ್ರಬಂಧಗಳನ್ನು ಆಹ್ವಾನಿಸಲಾಗಿದೆ. ಪ್ರಬಂಧ ಮಂಡಿಸುವವರು ಪ್ರಬಂಧದ ಪೂರ್ಣಪಾಠವನ್ನು A4 ಅಳತೆಯ ಕಾಗದದಲ್ಲಿ ನುಡಿ ತಂತ್ರಾಂಶದಲ್ಲಿ ಟೈಪ್ ಮಾಡಿ ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ಕಳುಹಿಸಲು ಸೂಚಿಸಲಾಗಿದೆ. praveenap@cukerala.ac.in ಪ್ರಬಂಧ ಕಳುಹಿಸಲು ಕಡೆಯ ದಿನಾಂಕ: 07.03.2023. ಸಂಪರ್ಕ ದೂರವಾಣಿ:
9449258183.
ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸುವವರು ಮತ್ತು ಭಾಗವಹಿಸುವವರು ಈ ಪತ್ರದ ಜೊತೆಗಿರುವ ಗೂಗಲ್ ಫಾರ್ಮ್ ಭರ್ತಿ ಮಾಡಲು ಕೋರಿಕೆ. ವಿಚಾರ ಸಂಕಿರಣಕ್ಕೆ ಯಾವುದೇ ರೀತಿಯ ಪ್ರವೇಶ ಶುಲ್ಕ ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.