Breaking News

ಗಾಂಧಿಯವರು ಸತ್ಯ ಮತ್ತು ಅಹಿಂಸಾತ್ಮಕ ಹೋರಾಟದ ಮೂಲಕ ಜಗತ್ತಿಗೆ ಹೊಸ ಬೆಳಕು ನೀಡಿದ್ದಾರೆ-ಜಾರಕಿಹೊಳಿ.!

Spread the love

ಗಾಂಧಿಯವರು ಸತ್ಯ ಮತ್ತು ಅಹಿಂಸಾತ್ಮಕ ಹೋರಾಟದ ಮೂಲಕ ಜಗತ್ತಿಗೆ ಹೊಸ ಬೆಳಕು ನೀಡಿದ್ದಾರೆ-ಜಾರಕಿಹೊಳಿ.!

 

ಯುವ ಭಾರತ ಸುದ್ದಿ,
ಗೋಕಾಕ: ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಸತ್ಯ ಮತ್ತು ಅಹಿಂಸಾತ್ಮಕ ಹೋರಾಟದ ಮೂಲಕ ಜಗತ್ತಿಗೆ ಹೊಸ ಬೆಳಕು ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಅವರು, ಶುಕ್ರವಾರದಂದು ನಗರದ ತಮ್ಮ ಗೃಹ ಕಚೇರಿಯಲ್ಲಿ ಬಿಜೆಪಿ ನಗರ ಹಾಗೂ ಗ್ರಾಮೀಣ ಘಟಕದಿಂದ ಆಯೋಜಿಸಲಾದ ೧೫೧ ನೇ ಮಹಾತ್ಮಾ ಗಾಂಧಿ ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಜಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಹಾತ್ಮಾ ಗಾಂಧಿಜಿ ಹಾಗೂ ಶಾಸ್ತ್ರಿಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಸರಳ ವ್ಯಕ್ತಿತ್ವ ದೃಢ ನಿರ್ಧಾರದಿಂದ ನಮ್ಮ ಮನಸ್ಸುಗಳಲ್ಲಿ ನೆಲೆಯೂರಿದ್ದಾರೆ. ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಭರತ ಭೂಮಿ ಕಂಡ ಶ್ರೇಷ್ಠ ಮಹಾಪುರುಷರು. ಇವರ ಆದರ್ಶಪ್ರಾಯವಾದ ಜೀವನ ನಮಗೆಲ್ಲ ಮಾದರಿ. ಈ ಇಬ್ಬರು ಮಹಾಪುರುಷರನ್ನು ಸದಾ ಸ್ಮರಿಸೋಣ ಎಂದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಟಿ ಆರ್ ಕಾಗಲ, ಮಡ್ಡೆಪ್ಪ ತೋಳಿನವರ, ಯುವ ಧುರೀಣರಾದ ಕಾಂತು ಎತ್ತಿನಮನಿ, ಹನಮಂತ ದುರ್ಗನ್ನವರ, ಸುರೇಶ ಸನದಿ, ಅಶೋಕ ಗೋಣಿ, ಬಿಜೆಪಿ ನಗರಾಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ನಗರಸಭೆ ಸದಸ್ಯರಾದ ಜಯಾನಂದ ಹುಣಶ್ಯಾಳ, ಅಬ್ಬಾಸ ದೇಸಾಯಿ, ಹರೀಶ್ ಬೂದಿಹಾಳ, ಬಸವರಾಜ ಆರೆನ್ನವರ, ಯೂಸುಫ್ ಅಂಕಲಗಿ, ಮುಖಂಡರಾದ ಲಕ್ಕಪ್ಪ ತಹಶಿಲ್ದಾರ, ಲಕ್ಷ್ಮಣ ತಳ್ಳಿ, ಬಸವರಾಜ ಹಿರೇಮಠ, ಶಶಿಧರ ಧೇಮಶೆಟ್ಟಿ, ಚಿದಾನಂದ ದೇಮಶೆಟ್ಟಿ, ಶಕೀಲ ಧಾರವಾಡಕರ,ತವನಪ್ಪಾ ಬೆನ್ನಾಡಿ,ಶಹಾನವಾಜ ಧಾರವಾಡಕರ,  ಶಿವು ಹೀರೆಮಠ, ಸುರೇಶ ಬೀರನಗಡ್ಡಿ, ಕುಸುಮಾ ಖನಗಾಂವಿ, ಲಕ್ಷ್ಮೀ ಪಾಟೀಲ, ರಾಜು ಹೀರೆಅಂಬಿಗೇರ, ಕಿರಣ ಡಮಾಮಗರ, ಯೂನುಸ್ ನದಾಫ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಪಶ್ಚಿಮ ಬಂಗಳಾದಲ್ಲಿ ಮಹಿಳೆಯರ ಮೇಲಿನ ಅನ್ಯಾಯ ಖಂಡಿಸಿ ನಗರದ ವಿವಿಧ ಮಹಿಳಾ ಮಂಡಳಗಳ ಪದಾಧಿಕಾರಿಗಳಿಂದ ಪ್ರತಿಭಟನೆ.!

Spread the loveಪಶ್ಚಿಮ ಬಂಗಳಾದಲ್ಲಿ ಮಹಿಳೆಯರ ಮೇಲಿನ ಅನ್ಯಾಯ ಖಂಡಿಸಿ ನಗರದ ವಿವಿಧ ಮಹಿಳಾ ಮಂಡಳಗಳ ಪದಾಧಿಕಾರಿಗಳಿಂದ ಪ್ರತಿಭಟನೆ.! ಗೋಕಾಕ: …

Leave a Reply

Your email address will not be published. Required fields are marked *

fifteen − nine =