ಚಾಲಕರಿಗೆ ಹಾಗೂ ಕಲಾವಿದರಿಗಾಗಿ ಉಚಿತ ಆನ್‌ಲೈನ್ ಸೇವಾ ಅಭಿಯಾನ.!
ಯುವ ಭಾರತ ಸುದ್ದಿ, ಗೋಕಾಕ: ರಾಜ್ಯ ಸರಕಾರದಿಂದ ಕೋವಿಡ್ ಸಂಕಷ್ಟದಲ್ಲಿರುವ ಬಡ ಕೂಲಿಕಾರ್ಮಿಕ ಜನರಿಗಾಗಿ ಸಿಎಂ ಬಿಎಸ್‌ವೈರವರು 1250 ಕೋಟಿ ರೂ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದು, ಫಲಾನುಭವಿಗಳಿಗೆ ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಅವರು ಉಚಿತ ಆನ್‌ಲೈನ್ ಅರ್ಜಿ ಸೇವಾ ಅಭಿಯಾನವನ್ನು ಸೋಮವಾರದಿಂದ ಚಾಲನೆ ನೀಡಲಿದ್ದಾರೆ.

ಆರ್ಥಿಕ ಸಂಕಷ್ಟದಲ್ಲಿರುವ ಕ್ಷೇತ್ರದ ಜನರಿಗಾಗಿ ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಕೋವಿಡ್ ವಿಶೇಷ ಸಹಾಯಧನ ಆಟೋ, ಟ್ಯಾಕ್ಸಿ, ಕ್ಯಾಬ್ ಚಾಲಕರಿಗೆ ಹಾಗೂ ಕಲಾವಿದರಿಗೆ ತಮ್ಮ ವೈಯಕ್ತಿಕವಾಗಿ ಫಲಾನುಭವಿಗಳಿಗೆ ಉಚಿತ ಆನ್‌ಲೈನ್ ಅರ್ಜಿ ಸೇವಾ ಅಭಿಯಾನ ನಗರದ ನಗರಸಭೆ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದು ಕ್ಷೇತ್ರದ ಎಲ್ಲ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು.
ಈ ಉಚಿತ ಆನ್‌ಲೈನ್ ಅರ್ಜಿ ಸೇವಾ ಅಭಿಯಾನ ನಿರಂತರವಾಗಿ ನಡೆಯಲಿದೆ. ಸೋಮವಾರದಂದು ಬೆಳಿಗ್ಗೆ 11 ಗಂಟೆಗೆ ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಸೇವಾ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆಂದು. ಸುರೇಶ ಸನದಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
YuvaBharataha Latest Kannada News