ಬೆಳಗಾವಿ ಜಿಲ್ಲೆಯಲ್ಲಿ ಮೃತಪಟ್ಟ ಜಾನುವಾರುಗಳಿಗೆ ಪರಿಹಾರ: ಪ್ರಭು ಚವ್ಹಾಣ್ ಯುವ ಭಾರತ ಸುದ್ದಿ ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಚರ್ಮಗಂಟು ರೋಗದಿಂದ ಜಾನುವಾರುಗಳು ಮೃತಪಟ್ಟ ಪ್ರಕರಣದಲ್ಲಿ ಮಾಲೀಕರುಗಳಿಗೆ ಆಗುವ ಆರ್ಥಿಕ ನಷ್ಟ ತಪ್ಪಿಸಲು ಪರಿಹಾರ ನೀಡಲಾಗಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ತಿಳಿಸಿದರು. ಬೆಳಗಾವಿ ತಾಲ್ಲೂಕಿನ ಖನಗಾವಿ ಬಿ.ಕೆ, ಖನಗಾವಿ ಕೆ.ಹೆಚ್ ಮತ್ತು ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮಗಳಲ್ಲಿ ಚರ್ಮಗಂಟು ರೋಗ ಪೀಡಿತ ಜಾನುವಾರುಗಳನ್ನು ಪರಿಶೀಲನೆ ನಡೆಸಿ ಮಾತನಾಡಿದರು. …
Read More »ಪ್ರಾ. ಬಿ.ಎಸ್. ಗವಿಮಠರಿಗೆ ಕುವೆಂಪು ಪುರಸ್ಕಾರ ಪ್ರದಾನ
ಪ್ರಾ. ಬಿ.ಎಸ್. ಗವಿಮಠರಿಗೆ ಕುವೆಂಪು ಪುರಸ್ಕಾರ ಪ್ರದಾನ ಯುವ ಭಾರತ ಸುದ್ದಿ ಬೆಂಗಳೂರು : ಕರ್ನಾಟಕ ರಾಜಕೀಯವಾಗಿ ಏಕೀಕರಣ ಆಗಿದೆ. ಆದರೆ ಭಾವನಾತ್ಮಕವಾಗಿ ಆಗಿಲ್ಲ. ರಾಜಧಾನಿ ಜನ ಉತ್ತರ ಕರ್ನಾಟಕದ ಪ್ರತಿಭೆಗಳನ್ನು ಗುರುತಿಸುತ್ತಿಲ್ಲ. ಕರ್ನಾಟಕ ಏಕೀಕರಣಕ್ಕೆ ಉತ್ತರ ಕರ್ನಾಟಕದವರು ಹೋರಾಟ ಮಾಡಿದ್ದಾರೆ, ತ್ಯಾಗ ಮಾಡಿದ್ದಾರೆ. ಬೆಳಗಾವಿ ಸಲುವಾಗಿ ಇಡೀ ಕರ್ನಾಟಕ ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದು ಪ್ರಾಚಾರ್ಯ ಬಿ.ಎಸ್. ಗವಿಮಠ ನುಡಿದರು. ಬೆಂಗಳೂರಿನಲ್ಲಿ ಕನ್ನಡ ಜನ ಶಕ್ತಿ ಕೇಂದ್ರ ಕುವೆಂಪು …
Read More »ಅಲೆಮಾರಿ ಅಭಿವೃದ್ಧಿ ನಿಗಮ : ಸಂಜೀವಕುಮಾರ ದಶವಂತ ಸ್ವಾಗತ
ಅಲೆಮಾರಿ ಅಭಿವೃದ್ಧಿ ನಿಗಮ : ಸಂಜೀವಕುಮಾರ ದಶವಂತ ಸ್ವಾಗತ ಯುವ ಭಾರತ ಸುದ್ದಿ ಇಂಡಿ : ರಾಜ್ಯ ಸರ್ಕಾರ ಪಜಾ,ಪಪಂ.ದ ಅಲೆಮಾರಿಗಳ ಸಮಗ್ರ ಅಭಿವೃದ್ದಿಗೆ ಪ್ರತ್ಯೇಕ ನಿಗಮ ಸ್ಥಾಪಿಸಿದಕ್ಕೆ ಇಲ್ಲಿನ ಅಲೆಮಾರಿ, ಅರೆ ಅಲೆಮಾರಿ ಚನ್ನದಾಸರ ಸಮುದಾಯದ ಜಿಲ್ಲಾಧ್ಯಕ್ಷ ಸಂಜೀವಕುಮಾರ ದಶವಂತ ರಾಜ್ಯ ಬಿಜೆಪಿ ಸರ್ಕಾರಕ್ಕೆ ಅಭಿನಂದಿಸಿದ್ದಾರೆ. ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ,ಅಲೆಮಾರಿಗಳ ನೋವು,ಸಂಕಷ್ಟ,ಆರ್ಥಿಕ ಹಿನ್ನಡೆಯನ್ನು ಅನುಸರಿಸುತ್ತಿದ್ದು,ಲಕ್ಷಾಂತರ ದಮನಿತ ಅಲೆಮಾರಿ ಜನರು ಇಂದಿಗೂ ಅತಂತ್ರವಾಗಿ ಸಾಮಾಜಿಕ ತ್ರಿಶಂಕು ಪರಿಸ್ಥಿತಿಯನ್ನು ಕಣ್ಣಾರೆ …
Read More »ಡಿಕೆಶಿ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ
ಡಿಕೆಶಿ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ ಯುವ ಭಾರತ ಸುದ್ದಿ ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಇದೀಗ ಮತ್ತೆ ಸಂಕಷ್ಟ ಎದುರಾಗಿದೆ. ಇಡಿ, ಐಟಿ ದಾಳಿ ನಂತರ ಇದೀಗ ಅವರಿಗೆ ಸೇರಿರುವ ನ್ಯಾಷನಲ್ ಎಜುಕೇಶನ್ ಸೊಸೈಟಿಯ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ಇಂದು ದಾಳಿ ನಡೆಸಿದೆ. ಡಿಕೆಶಿ ಮಾಲಿಕತ್ವದ ಶಿಕ್ಷಣ ಸಂಸ್ಥೆಗಳು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿದ್ದು ಡಿಕೆಶಿ ಅಧ್ಯಕ್ಷರಾಗಿದ್ದು ಪುತ್ರಿ ಐಶ್ವರ್ಯಾ ಕಾರ್ಯದರ್ಶಿಯಾಗಿದ್ದಾರೆ. ಬೆಳಗ್ಗೆ …
Read More »ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಕಟ್ಟಡ ಉದ್ಘಾಟನೆ ಬುಧವಾರ
ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಕಟ್ಟಡ ಉದ್ಘಾಟನೆ ಬುಧವಾರ ಯುವ ಭಾರತ ಸುದ್ದಿ ಬೆಳಗಾವಿ : ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ನೂತನ ಕಟ್ಟಡದ ಉದ್ಘಾಟನೆಯ ಕಾರ್ಯಕ್ರಮವನ್ನು ದಿನಾಂಕ 21-12-2022 ರಂದು ಬೆಳಗಿನ 10:೦೦ ಗಂಟೆಗೆ ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೂತನ ಕಟ್ಟಡ ಉದ್ಘಾಟನೆ ಮಾಡಲಿದ್ದಾರೆ. ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಸಚಿವ ಗೋವಿಂದ …
Read More »ಬೆಳಗಾವಿ ಸುವರ್ಣ ಸೌಧದ ಮುಂದೆ ಧರಣಿ ಸತ್ಯಾಗ್ರಹ- ಅಧ್ಯಕ್ಷ ಚಂದ್ರಶೇಖರ ಹೊಸಮನಿ!
ಬೆಳಗಾವಿ ಸುವರ್ಣ ಸೌಧದ ಮುಂದೆ ಧರಣಿ ಸತ್ಯಾಗ್ರಹ- ಅಧ್ಯಕ್ಷ ಚಂದ್ರಶೇಖರ ಹೊಸಮನಿ! ಯುವ ಭಾರತ ಸುದ್ದಿ ಇಂಡಿ: ಸಾಮಾಜಿಕ ನ್ಯಾಯಕ್ಕಾಗಿ ಡಿ.೨೧ ರಂದು ಬೆಳಗಾವಿ ಚಲೋ ಕಾರ್ಯಕ್ರಮ ಹಮ್ಮಿಕೊಂಡು ಅಂದು ಬೆಳಗಾವಿ ಸುವರ್ಣ ಸೌಧದ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು,ತಾಲೂಕಿನ ಎಲ್ಲಾ ಮೂಲ ದಲಿತರು ಭಾಗಿಯಾಗಬೇಕು ಎಂದು ಕರ್ನಾಟಕ ಪ್ರದೇಶ ಮಾದಿಗರ ಸಂಘದ ತಾಲೂಕ ಅಧ್ಯಕ್ಷ ಚಂದ್ರಶೇಖರ ಹೊಸಮನಿ ಹೇಳಿದರು. ಅವರು ಸೋಮವಾರ ಪಟ್ಟಣದ ಡಾ. ಬಾಬು ಜಗಜಿವನ …
Read More »ಕೇಂದ್ರ ಹಾಗೂ ರಾಜ್ಯ ಸರಕಾರ ಕೈಗೊಂಡಿರುವ ಜನಪರ ಯೋಜನೆಗಳನ್ನು ಜನರ ಮನೆಮನಗಳಿಗೆ ತಲುಪಿಸಿ-ರಾಜೇಂದ್ರ ಗೌಡಪ್ಪಗೋಳ.!
ಕೇಂದ್ರ ಹಾಗೂ ರಾಜ್ಯ ಸರಕಾರ ಕೈಗೊಂಡಿರುವ ಜನಪರ ಯೋಜನೆಗಳನ್ನು ಜನರ ಮನೆಮನಗಳಿಗೆ ತಲುಪಿಸಿ-ರಾಜೇಂದ್ರ ಗೌಡಪ್ಪಗೋಳ.! ಗೋಕಾಕ: ಕೇಂದ್ರ ಹಾಗೂ ರಾಜ್ಯ ಸರಕಾರ ಕೈಗೊಂಡಿರುವ ಜನಪರ ಯೋಜನೆಗಳನ್ನು ಜನರ ಮನೆಮನಗಳಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಬಿಜೆಪಿ ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಹೇಳಿದರು. ಅವರು, ಸೋಮವಾರದಂದು ನಗರದ ಶಾಸಕರ ಗೃಹ ಕಚೇರಿಯಲ್ಲಿ ಗೋಕಾಕ ನಗರ ಮತ್ತು ಗ್ರಾಮೀಣ ಮಂಡಲಗಳ ಕಾರ್ಯಕಾರಿಣಿ ಸಭೆಯನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಬಿಜೆಪಿ …
Read More »ವಿದ್ಯಾರ್ಥಿಗಳು ಸರಕಾರದ ಸೌಲಭ್ಯಗಳನ್ನು ಸದುಪಯೋಗದಿಂದ ಪ್ರತಿಭಾವಂತರಾಗಿ-ರಮೇಶ ಜಾರಕಿಹೊಳಿ.!
ವಿದ್ಯಾರ್ಥಿಗಳು ಸರಕಾರದ ಸೌಲಭ್ಯಗಳನ್ನು ಸದುಪಯೋಗದಿಂದ ಪ್ರತಿಭಾವಂತರಾಗಿ-ರಮೇಶ ಜಾರಕಿಹೊಳಿ.! ಗೋಕಾಕ: ವಿದ್ಯಾರ್ಥಿಗಳು ಸರಕಾರದ ಸೌಲಭ್ಯಗಳನ್ನು ಸದುಪಯೋಗದಿಂದ ಪ್ರತಿಭಾವಂತರಾಗಿ ತಮ್ಮ ಬದುಕನ್ನು ಉಜ್ವಲ ಗೋಳಿಸಿಕೊಳ್ಳುವಂತೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಸೋಮವಾರದಂದು ನಗರದ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ೧ಕೋಟಿ ೯೩ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ಸರಕಾರ ಶೈಕ್ಷಣಿಕ ಕ್ಷೇತ್ರದ ಪ್ರಗತಿಗಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸುಸಜ್ಜಿತ ಕೋಠಡಿಗಳು, ಪಠ್ಯಪುಸ್ತಕಗಳು,ನೋಟಬುಕ್ಕಗಳು …
Read More »ಮಹಾಮೇಳಾವಕ್ಕೆ ಈ ಸಲ ಬ್ರೇಕ್ ಹಾಕಿದ ಬೊಮ್ಮಾಯಿ
ಮಹಾಮೇಳಾವಕ್ಕೆ ಈ ಸಲ ಬ್ರೇಕ್ ಹಾಕಿದ ಬೊಮ್ಮಾಯಿ ಯುವ ಭಾರತ ಸುದ್ದಿ ಬೆಳಗಾವಿ : ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬೆಳಗಾವಿ ಅಧಿವೇಶನದ ಕಾಲಕ್ಕೆ ಪ್ರತಿ ವರ್ಷವೂ ಮಹಾಮೇಳಾವವನ್ನು ತಪ್ಪದೇ ನಡೆಸಿಕೊಂಡು ಬರುತ್ತಿದೆ. ಆದರೆ ಈ ವರ್ಷ ಸರಕಾರ ಅನುಮತಿ ನಿರಾಕರಿಸಿದ್ದರಿಂದ ಕಾರ್ಯಕ್ರಮ ರದ್ದುಗೊಳ್ಳುವಂತಾಯಿತು. ಆದರೆ, ಬೆರಳೆಣಿಕೆ ನಾಯಕರು ಕರ್ನಾಟಕ ಸರ್ಕಾರದ ಧೋರಣೆಗೆ ವಿರೋಧ ವ್ಯಕ್ತಪಡಿಸಿ ಮರಾಠಿಗರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕರ್ನಾಟಕ ಕಸಿದುಕೊಂಡಿದೆ ಎಂದು ದೂರಿದರು. ಕರ್ನಾಟಕ ವಿಧಾನ ಮಂಡಲ …
Read More »26 ರಂದು ನಡೆಯುವ ಸಮಾವೇಶಕ್ಕೆ ಜಾರಕಿಹೊಳಿಯವರಿಗೆ ಆಹ್ವಾನ!
26 ರಂದು ನಡೆಯುವ ಸಮಾವೇಶಕ್ಕೆ ಜಾರಕಿಹೊಳಿಯವರಿಗೆ ಆಹ್ವಾನ! ಯುವ ಭಾರತ ಸುದ್ದಿ ಗೋಕಾಕ : ಎನ್ ಎಸ್ ಎಫ್ ಅತಿಥಿ ಗ್ರಹದಲ್ಲಿ ದಲ್ಲಿ ಮಾಳಿ/ಮಾಲಗಾರ ಸಮಾಜದ ಮುಖಂಡರು ಕೆ ಎಮ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಭೇಟಿಯಾಗಿ ಡಿ. 26 ರಂದು ಮುಗಳಖೋಡದಲ್ಲಿ ಜರಗುತ್ತಿರುವ ಮಾಳಿ ಮಾಲಗಾರ ಸಮಾವೇಶಕ್ಕೆ ಆಹ್ವಾನ ನೀಡಿದರು. ಬಾಲಚಂದ್ರ ಜಾರಕಿಹೊಳಿ ಮಾತನಾಡಿ ಮುಗಳಖೋಡ ದಲ್ಲಿ ಜರಗುತ್ತಿರುವ ರಾಜ್ಯ ಮಟ್ಟದ ಮಾಳಿ …
Read More »