ತೀವ್ರ ಕುತೂಹಲ ಕೆರಳಿಸಿತು ಮುಂದಿನ ಸಿಎಂ ಕುರಿತ ಭವಿಷ್ಯ ! ಯುವ ಭಾರತ ಸುದ್ದಿ ಮಂಡ್ಯ : ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಆರ್ಭಟ ತುಸು ಜೋರಾಗಿದೆ. ಈ ನಡುವೆ ಜ್ಯೋತಿಷಿಗಳು ಹಾಗೂ ಚುನಾವಣಾ ಸಮೀಕ್ಷೆಗಳು ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಮತ್ತು ಯಾರೂ ಮುಖ್ಯಮಂತ್ರಿ ಆಗುವ ಯೋಗ ಹೊಂದಿದ್ದಾರೆ ಎಂಬ ಬಗ್ಗೆ ಭವಿಷ್ಯ ನುಡಿಯುತ್ತಿದ್ದಾರೆ. ಈ ನಡುವೆ ಇಲ್ಲೊಂದು ಕುತೂಹಲಭರಿತ ಭವಿಷ್ಯ ಹೊರಬಿದ್ದಿದೆ. ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಚರ್ಚೆ …
Read More »ಮಾಜಿ ಸಚಿವ ಡಿ.ಬಿ.ಇನಾಂದಾರ್ ನಿಧನ
ಮಾಜಿ ಸಚಿವ ಡಿ.ಬಿ.ಇನಾಂದಾರ್ ನಿಧನ ಬೆಂಗಳೂರು : ಮಾಜಿ ಸಚಿವ, ಕಾಂಗ್ರೆಸ್ ಧುರೀಣ ಡಿ.ಬಿ.ಇನಾಂದಾರ್ ನಿಧನರಾಗಿದ್ದಾರೆ. ಹಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಇನಾಂದಾರ್, ಚಿಕಿತ್ಸೆ ಫಲಿಸದೇ ಇಂದು ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 74 ವರ್ಷದ ಇನಾಂದಾರ್ ಅವರು, ಲಂಗ್ಸ್ ಮತ್ತು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಕಿತ್ತೂರು ವಿಧಾನಸಭಾ ಕ್ಷೇತ್ರದಿಂದ ಹಲವು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರು. ಮಾತ್ರವಲ್ಲ, ಕಾಂಗ್ರೆಸ್ ಸರ್ಕಾರದಲ್ಲಿ …
Read More »ಶ್ರೀ ಜಗದ್ಗುರು ದಾರುಕಾಚಾರ್ಯ ಜಯಂತಿ ಯುಗಮಾನೋತ್ಸವ
ಶ್ರೀ ಜಗದ್ಗುರು ದಾರುಕಾಚಾರ್ಯ ಜಯಂತಿ ಯುಗಮಾನೋತ್ಸವ (ಶ್ರೀ ಉಜ್ಜಯಿನಿ ಪೀಠದಲ್ಲಿ ೨೫-೦೪-೨೦೨೩ ರಂದು ಜರುಗುವ ಶ್ರೀ ದಾರುಕಾಚಾರ್ಯ ಜಯಂತಿ ಯುಗಮಾನೋತ್ಸವದ ನಿಮಿತ್ತ ಲೇಖನ) -ನಿರಂಜನ ದೇವರಮನೆ, ಚಿತ್ರದುರ್ಗ ಈ ಜಗತ್ತಿನಲ್ಲಿ ಅನೇಕ ಧರ್ಮಗಳು ಉದಯಿಸಿ, ಅವುಗಳ ತತ್ವ-ಸಿದ್ಧಾಂತಗಳನ್ನು ಜನತೆಗೆ ಬೋಧಿಸಿ ಅವರು ತಮ್ಮ ಬದುಕನ್ನು ಬೆಳಗಿಸಿಕೊಂಡು ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸಿವೆ. ಅಂಥ ಧರ್ಮಗಳಲ್ಲಿ ವೀರಶೈವ ಧರ್ಮವೂ ಸಹ ಒಂದಾಗಿ ತನ್ನ ಮಹತ್ವವನ್ನು ವಿಶ್ವದೆಲ್ಲೆಡೆ ವಿಸ್ತರಿಸಿಕೊಂಡಿದೆ. ಪರಶಿವನ ಪಂಚಮುಖಗಳಿಂದ ಶ್ರೀ ಜಗದ್ಗುರು …
Read More »ಕರುನಾಡ ಅರ್ಭಟಕ್ಕೆ ಮೋದಿ
ಕರುನಾಡ ಅರ್ಭಟಕ್ಕೆ ಮೋದಿ ಮಂಗಳೂರು : ಕರ್ನಾಟಕ ವಿಧಾನ ಸಭಾ ಚುನಾವಣಾ ಕಣ ರಂಗೇರಿದೆ. ಬಿರುಸಿನಿಂದ ಚುನಾವಣಾ ತಯಾರಿಗಳು ನಡೆಯುತ್ತಿದೆ. ಈ ನಡುವೆ ಬಿಜೆಪಿ ಸ್ಟಾರ್ ಪ್ರಚಾರಕರಲ್ಲಿ ಕರಾವಳಿ ಜಿಲ್ಲೆಗೆ ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಮೇ 3 ರಂದು ಮುಲ್ಕಿಗೆ ಪ್ರಧಾನಿ ನರೇಂದ್ರ ಮೋದಿ ಬರುತ್ತಾರೆ. ಬಹುತೇಕ ಅವರ ಆಗಮನ ಖಚಿತವಾಗಿದೆ, ಅಂತಿಮ ಮಾಹಿತಿ …
Read More »ಅಂತೂ ಇಂತೂ ಕೊನೆಗೂ ನಾಮಪತ್ರ ಹಿಂಪಡೆದುಕೊಂಡ ಲಕ್ಷ್ಮೀ ಹೆಬ್ಬಾಳಕರ !
ಅಂತೂ ಇಂತೂ ಕೊನೆಗೂ ನಾಮಪತ್ರ ಹಿಂಪಡೆದುಕೊಂಡ ಲಕ್ಷ್ಮೀ ಹೆಬ್ಬಾಳಕರ ! ಯುವ ಭಾರತ ಸುದ್ದಿ ಬೆಳಗಾವಿ : ರಾಜ್ಯದ ಗಮನ ಸೆಳೆದಿರುವ ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದಲ್ಲಿ ಹೆಸರಿನ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಕಂಗ್ರಾಳಿ ಬಿ.ಕೆ.ಗ್ರಾಮದ ನಿವಾಸಿ ಲಕ್ಷ್ಮೀ ಮನೋಹರ ಹೆಬ್ಬಾಳಕರ ಅವರು ಕೊನೆಗೂ ತಮ್ಮ ನಾಮಪತ್ರವನ್ನು ಹಿಂಪಡೆದುಕೊಂಡಿದ್ದಾರೆ. ಅವರು ನಾಮಪತ್ರ ಹಿಂಪಡೆದುಕೊಳ್ಳದೇ ಇದ್ದಲ್ಲಿ ಒಂದೇ ಹೆಸರಿನ ಇಬ್ಬರು ಮಹಿಳೆಯರ ಸ್ಪರ್ಧೆಯಿಂದ ಮತದಾರರಲ್ಲಿ …
Read More »ಸುಧೀರ ಗಡ್ಡೆಗೆ ಶುಭ ಕೋರಿದ ರಾಜು ಸೇಠ
ಸುಧೀರ ಗಡ್ಡೆಗೆ ಶುಭ ಕೋರಿದ ರಾಜು ಸೇಠ ಭಡಕಲ್ ಗಲ್ಲಿ, ಚವಾಟ ಗಲ್ಲಿ, ಖಡಕ್ ಗಲ್ಲಿ ಯುವಕ ಮಂಡಳದಿಂದ ಆಚರಣೆ ಬೆಳಗಾವಿ: ಕಾಂಗ್ರೆಸ್‌ನ ನಿಷ್ಠಾವಂತ, ಅಪ್ಪಟ ಕಾರ್ಯಕರ್ತ ಸುಧೀರ ಗಡ್ಡೆ ಅವರ 43ನೇ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಉತ್ತರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜು ಸೇಠ ಸೇರಿದಂತೆ ಅನೇಕ ಗಣ್ಯಮಾನ್ಯರು ಸುಧೀರ ಗಡ್ಡೆ ಅವರಿಗೆ ಶುಭಾಶಯ ಕೋರಿದರು. ನಗರದ ಭಡಕಲ್ ಗಲ್ಲಿಯಲ್ಲಿರುವ ಗಡ್ಡೆ ಡೆವಲಪರ್ಸ್ ಕಚೇರಿಯಲ್ಲಿ ಅದ್ಧೂರಿಯಾಗಿ ಜನ್ಮದಿನವನ್ನು ಆಚರಿಸಲಾಯಿತು. …
Read More »ಸೌಮ್ಯ ಸ್ವಭಾವದ ಸುಧೀರ ಗಡ್ಡೆಗೆ ಇಂದು 43ನೇ ಜನ್ಮದಿನ
ಸೌಮ್ಯ ಸ್ವಭಾವದ ಸುಧೀರ ಗಡ್ಡೆಗೆ ಇಂದು 43ನೇ ಜನ್ಮದಿನ ಕಾಂಗ್ರೆಸ್ ನ ನಿಷ್ಠಾವಂತ ಚಾಣಕ್ಯನಿಗೆ ಶುಭಾಶಯಗಳ ಮಹಾಪುರ ಯುವ ಭಾರತ ಸುದ್ದಿ ಬೆಳಗಾವಿ : ಸಮಚಿತ್ತ ಭಾವ, ಶಾಂತ-ಸೌಮ್ಯ ಸ್ವಭಾವ, ಸರಳತೆ, ತಾಳ್ಮೆ, ಮಾನವೀಯ ಗುಣವುಳ್ಳ ಮತ್ತು ಸಹನಶೀಲ ವ್ಯಕ್ತಿತ್ವವುಳ್ಳ ಸುಧೀರ ಗಡ್ಡೆ ಅವರಿಗೆ ಇಂದು ಸೋಮವಾರ 43ನೇ ಜನ್ಮದಿನದ ಸುಸಂದರ್ಭ. ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ವರ್ಷಗಳಿಂದ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಸುಧೀರ ಗಡ್ಡೆ ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ …
Read More »ರಾಮದುರ್ಗ : ನಿಟ್ಟುಸಿರು ಬಿಟ್ಟ ಬಿಜೆಪಿ !
ರಾಮದುರ್ಗ : ನಿಟ್ಟುಸಿರು ಬಿಟ್ಟ ಬಿಜೆಪಿ ! ಬೆಳಗಾವಿ : ರಾಮದುರ್ಗ ವಿಧಾನಸಭಾ ಮತಕ್ಷೇತ್ರದಲ್ಲಿ ಬಿಜೆಪಿ ಹಾದಿ ಸುಗಮವಾಗಿದೆ. ಬಿಜೆಪಿ ಅಧಿಕೃತ ಅಭ್ಯರ್ಥಿ ಚಿಕ್ಕ ರೇವಣ್ಣ ಅವರನ್ನು ವಿರೋಧಿಸಿ ನಾಮಪತ್ರ ಸಲ್ಲಿಸಿದ್ದ ಐವರು ಕೊನೆಗೂ ನಾಮಪತ್ರ ಹಿಂಪಡೆದುಕೊಂಡಿದ್ದಾರೆ. ರಾಮದುರ್ಗದ ಹಾಲಿ ಶಾಸಕ ಮಹದೇವಪ್ಪ ಯಾದವಾಡ, ಮಲ್ಲಣ್ಣ ಯಾದವಾಡ, ಪಿ.ಎಫ್. ಪಾಟೀಲ ಮುಂತಾದವರು ಕೊನೆಗೂ ನಾಮಪತ್ರ ಹಿಂಪಡೆಯುವ ನಿರ್ಧಾರ ಮಾಡಿದ್ದಾರೆ. ಇದರಿಂದಾಗಿ ಬಿಜೆಪಿಯ ಅಧಿಕೃತ ಅಭ್ಯರ್ಥಿಯ ತಲೆನೋವು ತುಸು ಕಡಿಮೆಯಾದಂತಾಗಿದೆ.
Read More »ಬಡಿಗೇರರ ಭಾವ ಬಾಂದಳ ಕವನ ಸಂಕಲನ ಲೋಕಾರ್ಪಣೆ
ಬಡಿಗೇರರ ಭಾವ ಬಾಂದಳ ಕವನ ಸಂಕಲನ ಲೋಕಾರ್ಪಣೆ ಇಟಗಿ : ಇಟಗಿ ಗ್ರಾಮದ ಖಾನಾಪುರ ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ವಿ.ವಿ.ಬಡಿಗೇರ ಅವರ ಮೂರನೇ ಕವನ ಕಾದರವಳ್ಳಿಯ ಶ್ರೀ ಅದೃಶ್ಯಾನಂದಾಶ್ರಮ ಸೀಮೀಮಠದಲ್ಲಿ ಲೋಕಾರ್ಪಣೆಗೊಳಿಸಲಾಯಿತು. ಮೂರನೇ ಕವನ ಸಂಕಲನ ಭಾವ ಬಾಂದಳವನ್ನು ಶ್ರೀ ಅದೃಶ್ಯಾನಂದಾಶ್ರಮ ಸೀಮೀಮಠದ ಡಾ.ಶ್ರೀ ಪಾಲಾಕ್ಷ ಶಿವಯೋಗೀಶ್ವರರು ಲೋಕಾರ್ಪಣೆಗೊಳಿಸಿದರು. ರುದ್ರಪ್ಪ ಹುಣಶೀಕಟ್ಟಿ, ಬಸವರಾಜ ನಾವಲಗಟ್ಟಿ, ಮಹಾರುದ್ರ ಬೈಲವಾಡ ಹಾಗೂ ಇತರರು ಉಪಸ್ಥಿತರಿದ್ದರು.
Read More »ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ ಕಡಾಡಿ ವಿರುದ್ಧ ಗ್ರಾಮಸ್ಥರು ಬೀದಿಗಿಳಿದದ್ದು ಯಾಕೆ ?
ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ ಕಡಾಡಿ ವಿರುದ್ಧ ಗ್ರಾಮಸ್ಥರು ಬೀದಿಗಿಳಿದದ್ದು ಯಾಕೆ ? ಗೋಕಾಕ : ಗೋಕಾಕ ಮತಕ್ಷೇತ್ರದ ರಾಜನಗಟ್ಟಿ, ಕಡಬಗಟ್ಟಿ ಮತ್ತು ಗಡ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ ಎಂದು ಅಪಪ್ರಚಾರ ನಡೆಸಿದ್ದ ಕಾಂಗ್ರೆಸ್ ಅಭ್ಯರ್ಥಿ ಡಾ. ಮಹಾಂತೇಶ ಕಡಾಡಿ ಅವರ ವಿರುದ್ಧ ಈ ಗ್ರಾಮಗಳ ನಾಗರಿಕರು ಇದೀಗ ಸಿಡಿದೆದ್ದಿದ್ದಾರೆ. ಚುನಾವಣಾ ಪ್ರಚಾರದ ಭರಾಟೆಯಲ್ಲಿ ಮಹಾಂತೇಶ ಕಡಾಡಿ ಅವರು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ ಎಂದು ಅಪಪ್ರಚಾರ ನಡೆಸಿದ್ದಾರೆ, ಈ …
Read More »