ಆರ್ ಸಿಬಿ ಕಪ್ ಗೆಲ್ಲುವ ತನಕ ಸ್ಕೂಲ್ಗೆ ಸೇರುವುದಿಲ್ಲ ಎಂದ ಪೋರ

ಯುವ ಭಾರತ ಸುದ್ದಿ ಬೆಂಗಳೂರು:
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕೆಕೆಆರ್ ಹಾಗೂ ಆರ್‌ಸಿಬಿ ನಡುವಿನ ಪಂದ್ಯದ ವೇಳೆ ಪುಟ್ಟ ಅಭಿಮಾನಿ ಆರ್‌ಸಿಬಿ ಕಪ್ ಗೆಲ್ಲುವ ತನಕ ಶಾಲೆಗೆ ಸೇರಲ್ಲ ಎಂಬ ಪೋಸ್ಟರ್ ಹಿಡಿದುಕೊಂಡು ಪೋಸ್ ನೀಡಿದ್ದ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
‘ಕಪ್ ಗೆಲ್ಲುವವರೆಗೂ ಶಾಲೆಗೆ ಸೇರಲ್ಲ’ ಎಂದಿರುವ RCB ಅಭಿಮಾನಿಯ ಅಭಿಲಾಷೆಯನ್ನು ಟ್ರೋಲ್ ಮಾಡಿದ ನೆಟ್ಟಿಗರು, ‘ಹಾಗಾದರೆ ನೀನು ಈ ಜನ್ಮದಲ್ಲಿ ಶಾಲೆಗೆ ಹೋಗಲ್ಲ’ ಎಂದು ಕಾಲೆಳೆದಿದ್ದಾರೆ.
ಆರ್‌ಸಿಬಿ ತನ್ನ ಮುಂದಿನ ಪಂದ್ಯವನ್ನು ಮೇ 1 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಲಿದ್ದು, ಈ ಪಂದವು ಲಕ್ನೋದ ಏಕಾನ ಸ್ಟೇಡಿಯಂನಲ್ಲಿ ನಡೆಯಲಿದೆ. ಆರ್‌ಸಿಬಿ ಈವರೆಗೆ ಆಡಿರುವ ಎಂಟು ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯ ಸಾಧಿಸಿದ್ದು, ಈ ಬಾರಿಯೂ ತಂಡದ ಸಾಧನೆ ನಿರಾಶಾದಾಯಕವಾಗಿದೆ.
YuvaBharataha Latest Kannada News