Breaking News

ಮೋದಿ ವಿಷಪೂರಿತ ಹಾವಿದ್ದಂತೆ : ಭಾರೀ ವಿವಾದ ಸೃಷ್ಟಿಸಿತು ಖರ್ಗೆ ಹೇಳಿಕೆ !

Spread the love

ಮೋದಿ ವಿಷಪೂರಿತ ಹಾವಿದ್ದಂತೆ : ಭಾರೀ ವಿವಾದ ಸೃಷ್ಟಿಸಿತು ಖರ್ಗೆ ಹೇಳಿಕೆ !

ಯುವ ಭಾರತ ಸುದ್ದಿ ಗದಗ :
ಪ್ರಧಾನಿ ನರೇಂದ್ರ ಮೋದಿ ವಿಷಪೂರಿತ ಹಾವಿದ್ದಂತೆ, ನೆಕ್ಕಿದರೆ ಸತ್ತೇ ಹೋಗುತ್ತಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿರುವುದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.
‘ಮೋದಿ ವಿಷಪೂರಿತ ಹಾವಿದ್ದಂತೆ. ಇದು ವಿಷವೋ ಅಲ್ಲವೋ ಎಂದು ನೀವು ಭಾವಿಸಿ ಅದನ್ನು ನೆಕ್ಕಿದರೆ, ನೀವು ಸತ್ತು ಹೋಗ್ತೀರಿ. ನೀವು ಯೋಚಿಸಬಹುದು. ಮೋದಿ ಒಬ್ಬ ಒಳ್ಳೆಯ ಮನುಷ್ಯ. ಅವರು ಪ್ರಧಾನಿ, ಇದು ವಿಷವೇ? ಅವರು ಕೊಟ್ಟಿದ್ದಾರೆ ಎಂದು ಭಾವಿಸಿ ಮೋದಿ ಕೊಟ್ಟಿದನ್ನು ನೀವು ನೆಕ್ಕಿದರೆ ನೀವು ಸಂಪೂರ್ಣವಾಗಿ ಮಲಗುತ್ತೀರಿ ಎಂದು ಖರ್ಗೆ ಹೇಳಿದ್ದಾರೆ.

ಗದಗ ಜಿಲ್ಲೆಯ‌ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದಲ್ಲಿ ಭಾಷಣದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್. ಪಾಟೀಲ ಪರ‌ ಮತಯಾಚನೆ ಮಾಡಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ಮೋದಿಯನ್ನು ವಿಷದ ಸರ್ಪಕ್ಕೆ ಹೋಲಿಸಿದ್ದಾರೆ. ಬಿಜೆಪಿಯವರ ಮನೆಯಲ್ಲಿ ದೇಶಕ್ಕಾಗಿ‌ ಒಂದೂ‌ ನಾಯಿ‌ ಕೂಡ ಸತ್ತಿಲ್ಲ. ದೇಶಕ್ಕೆ ಬಿಜೆಪಿಯವರ ಕೊಡುಗೆ ಏನು ಎಂದು ಹೇಳಲಿ ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ಉಚಿತ ಅಕ್ಕಿ ಕೊಡುವ‌ ಕೆಲಸ ಮಾಡಿದ್ದು ಸೋನಿಯಾ ಗಾಂಧಿ ಅವರು. ನರೇಗಾ ಅನುಷ್ಠಾನ ಮಾಡಿದ್ದು ನಾವು. ರಾಜ್ಯದಲ್ಲಿ ಬಿಜೆಪಿ ಮಾಡಿದ ಸಾಧನೆ ಅಂದ್ರೆ 40% ಕಮಿಷನ್ ಪಡೆದದ್ದು​​. ಇಂತಹವರನ್ನು ಮೋದಿ ತನ್ನ ಪಕ್ಕದಲ್ಲಿ ಕೂರಿಸಿಕೊಳ್ಳುತ್ತಾರೆ. ಒಬ್ಬ ಪ್ರಧಾನಿಯಾಗಿ ಹಳ್ಳಿ, ತಾಲೂಕಿಗೆ ಬಂದು ಓಡಾಡುತ್ತಿದ್ದಾರೆ. ಮೋದಿ‌ ಮುಖ ನೋಡಿ‌ ಮತ ಹಾಕಿ ಎಂದು ಹೇಳುತ್ತಾರೆ ಎಮದು ಆಕ್ರೋಶ ವ್ಯಕ್ತಪಡಿಸಿದರು.
ವಿದೇಶದಿಂದ ಕಪ್ಪು ಹಣ ತಂದು ಎಲ್ಲರ ಖಾತೆ 15 ಲಕ್ಷ ಹಾಕುತ್ತೇನೆ ಎಂದು ಭರವಸೆ ನೀಡಿದ್ದರು, ಆದರೆ ಹಾಕಲಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಆದರೆ ಮಾಡಲಿಲ್ಲ. ಹಗಲಿಗೆ ರಾತ್ರಿ, ರಾತ್ರಿಗೆ ಹಗಲು ಎಂದು ಹೇಳುತ್ತಾರೆ. ಡಬಲ್ ಇಂಜಿನ್ ಸರ್ಕಾರ ಎರಡು ಕಡೆ ಫೇಲ್ ಆಗಿದೆ. ಡಬಲ್ ಇಂಜೀನ್ ಯಾಕೆ ಯುವಕರಿಗೆ ನೌಕರಿ ಕೊಡ್ತಿಲ್ಲ. ನಮ್ಮ ಸರ್ಕಾರ ಇದ್ದಾಗ ದೊಡ್ಡ ದೊಡ್ಡ ಡ್ಯಾಂ, ದೊಡ್ಡ ದೊಡ್ಡ ನೀರಾವರಿ ಯೋಜನೆ ಮಾಡಿದ್ದೇವೆ. ಒಂಬತ್ತು ವರ್ಷದಲ್ಲಿ‌ ಮೋದಿ ಏನು ಮಾಡಿದ್ದಾರೆ ಎಂದು ಖರ್ಗೆ ಪ್ರಶ್ನಿಸಿದರು.

ಯೂ ಟರ್ನ್‌ ಹೊಡೆದ ಖರ್ಗೆ :
ತಮ್ಮ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾದ ನಂತರ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉಲ್ಟಾ ಹೊಡೆದಿದ್ದಾರೆ. ತಾನು ಮೋದಿ ವಿಷಪೂರಿತ ಹಾವಿನಂತೆ ಎಂದು ಹೇಳಿಲ್ಲ. ಭಾರತೀಯ ಜನತಾ ಪಕ್ಷ ವಿಷಪೂರಿತ ಹಾವಿನಂತೆ ಎಂದು ಹೇಳಿದ್ದೇನೆ ಎಂದು ಸಮಜಾಯಿಷಿ ನೀಡಿದ್ದಾರೆ. ನಾನು ಅವರ (ಪ್ರಧಾನಿ ಮೋದಿ) ಬಗ್ಗೆ ಮಾತನಾಡಿಲ್ಲನನ್ನ ಪ್ರಕಾರ ಅವರ ಸಿದ್ಧಾಂತ ವಷಪೂರಿತ ಹಾವಿನಂತಿದೆ, ಅದನ್ನು ನೆಕ್ಕಿ ನೋಡಿದರೆ ಸಾವು ಅನಿವಾರ್ಯವಾಗುತ್ತದೆ ಎಂದು ಹೇಳಿದ್ದೇನೆ. ನಾನು ವೈಯಕ್ತಿಕವಾಗಿ ಯಾರ ಬಗ್ಗೆಯೂ ಮಾತನಾಡುವುದಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.

ಬಿಜೆಪಿ ಪ್ರತಿಕ್ರಿಯೆ :
ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ, ಇದು ಹತಾಶೆ ಹೇಳಿಕೆ ಎಂದು ಹೇಳಿದ್ದಾರೆ. ಕಾಂಗ್ರೆಸ್ಸಿಗೆ ಕರ್ನಾಟಕದಲ್ಲಿ ಸೋಲುವ ಭಯ ಎದುರಾಗಿದೆ ಈ ಹೇಳಿಕೆ ತೋರಿಸುತ್ತದೆ ಎಂದು ಹೇಳಿದ್ದಾರೆ.
“ಈಗ ಕಾಂಗ್ರೆಸ್ ಅಧ್ಯಕ್ಷ ಖರ್ಗೆಯವರು ಪ್ರಧಾನಿ ಮೋದಿಯನ್ನು ‘ವಿಷಪೂರಿತ ಹಾವು’ ಎಂದು ಕರೆಯುತ್ತಾರೆ, ನಿಂದನೆ ಮಾಡುವುದು ಸೋನಿಯಾ ಗಾಂಧಿಯವರ ‘ಮೌತ್ ಕಾ ಸೌದಾಗರ್’ ಹೇಳಿಕೆಯಿಂದ ಪ್ರಾರಂಭವಾಯಿತು ಮತ್ತು ಅದು ಹೇಗೆ ಕೊನೆಗೊಂಡಿತು ಎಂದು ನಮಗೆ ತಿಳಿದಿದೆ. ಈ ಹತಾಶೆ ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿದೆ ಎಂದು ತೋರಿಸುತ್ತದೆ ಎಂದು ಮಾಳವಿಯಾ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ವಿಷ ಸರ್ಪ , ನೆಕ್ಕಿದರೆ ಸತ್ತು ಹೋಗುತ್ತಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ . ಸದ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ . ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯನ್ನೇ ಬಿಜೆಪಿ ನಾಯಕರು ರಾಜಕೀಯ ಅಸ್ತ್ರವಾಗಿಸಿಕೊಳ್ಳುತ್ತಿದ್ದು , ಖರ್ಗೆ ವಿರುದ್ಧ ವಾಗ್ದಾಳಿ ಮಾಡುತ್ತಿದ್ದಾರೆ . ಸದ್ಯ ಚುನಾವಣಾ ಪ್ರಚಾರ ವೇಳೆ ಮಾತನಾಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ , ಕಾಂಗ್ರೆಸ್ ಪಕ್ಷ ಇಂತಹ ನಿರ್ಲಜ್ಜ ಪಕ್ಷವೆಂದರೆ ಮೋದಿ ಸಾವಿನ ಕೂಪಕ್ಕೆ ತಳ್ಳುವ ಆಹ್ವಾನ ನೀಡಿತ್ತು ಎಂದು ಕಿಡಿಕಾರಿದ್ದಾರೆ.

ಬೆಳಗಾವಿ ತಾಲೂಕಿನ ಹಿಂಡಲಗಾದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು , ಈ ಕಾಂಗ್ರೆಸ್ ಪಕ್ಷ ನರೇಂದ್ರ ಮೋದಿಯವರ ಶತಾಯುಷಿ ತಾಯಿ ಬಗ್ಗೆ ಅವಹೇಳನ ಮಾಡಿದ್ದ ಪಕ್ಷ . ನರೇಂದ್ರ ಮೋದಿಯವರ ಸ್ವರ್ಗೀಯ ತಂದೆಯವರ ಅಪಮಾನ ಮಾಡಿದ ನಿರ್ಲಜ್ಜ ಪಕ್ಷ ಕಾಂಗ್ರೆಸ್ . ನಾನು ಮಲ್ಲಿಕಾರ್ಜುನ ಖರ್ಗೆ ಸಾಹೇಬರಿಗೆ ಹೇಳಬಯಸುತ್ತೇನೆ . ನೀವು ಇಂದು ರಾಜಕೀಯ ಪಕ್ಷವೊಂದರ ಅಧ್ಯಕ್ಷರಾಗಿದ್ದೀರಿ . ಆ ರಾಜಕೀಯ ಪಕ್ಷದ ಇತಿಹಾಸ ಹೇಗಿದೆ ಅಂದರೆ ದಲಿತ ನಾಯಕನಾದರೆ ರಾಹುಲ್ ಗಾಂಧಿ ತಮ್ಮ ಚಪ್ಪಲಿ ಅವರಿಂದ ತೆಗೆಸುತ್ತಾರೆ ಎಂದು ಹರಿಹಾಯ್ದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

one × 4 =