ಸಾಧಕ ವಿಕಲ ಚೇತನರು ನಮಗೆಲ್ಲ ಸ್ಪೂರ್ತಿ : ಎನ್.ಕೆ.ಹುಡೇದ ಅಭಿಮತ
ಯುವ ಭಾರತ ಸುದ್ದಿಅಂಕಲಗಿ :
ವಿಶ್ವದ ಸಾಧಕರಲ್ಲಿ ವಿಕಲ ಚೇತನರೂ ಎತ್ತರದ ಸಾಲಿನಲ್ಲಿದ್ದು, ಅವರೆಲ್ಲ ಇಂದಿನ ವಿಕಲ ಚೇತನರಿಗೆ ಸ್ಪೂರ್ತಿ ಯಾಗಿದ್ದಾರೆ ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಎನ್.ಕೆ.ಹುಡೇದ ಹೇಳಿದರು. ಅವರು ಶನಿವಾರ ಅಂಕಲಗಿ- ಅಕ್ಕತಂಗೇರಹಾಳ ಪಟ್ಟಣ ಪಂಚಾಯತಿ ಕಾರ್ಯಾಲಯ ದಲ್ಲಿ ಜಿ.ಪಂ ಬೆಳಗಾವಿ ಹಾಗೂ ತಾ.ಪಂ ಗೋಕಾಕ ಇವುಗಳ ಸಹಯೋಗದಲ್ಲಿಯ ವಿಶ್ವ ವಿಕಲ ಚೇತನರ ದಿನಾಚರಣೆ ಹಾಗೂ ವಿಕಲ ಚೇತನರ ವಿಶೇಷ ಪಟ್ಟ ಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಗತ್ತಿನ ೧೦ ಅಂಗ ವಿಕಲ ಸಾಧಕರಾದ ಸುಧಾ ಚಂದ್ರನ್, ಸೌಮ್ಯ ಕೌತಾರ್ನ್, ಅರುನಿಮಾ ಸಿನ್ಹಾ, ಕ್ರಿಸ್ಟೋಫರ್ ರೀವೆ, ಪ್ರ್ಯಾಂಕಲಿನ್ ರೂಸವೆಲ್ಟ್, ಹೆಲನ್ ಕೆಲರ್,ಜಾನ್ ಮಿಲ್ಟಾನ್, ನೈಕೋಲ್ ಜೇಮ್ಸ್, ಸ್ಟೀಫನ್ ಹಾವ್ಕಿಂಗ್ಸ್ ಇವರೆಲ್ಲಾ ಇಂದಿನ ವಿಕಲ ಜಗತ್ತಿಗೆ ಸಾಧನೆಗಳಿಂದ ಸ್ಪೂರ್ತಿ ಯಾಗಿದ್ದು ನೀವೂ ನಿಮ್ಮಲ್ಲಿಯ ಅದ್ವಿತೀಯ ಶಕ್ತಿ ಬಳಸಿಕೊಂಡು ಇತರರಿಗೆ ಸ್ಪೂರ್ತಿ ಯಾಗಬೇಕು. ಸರ್ಕಾರ ಅಂಗವಿಕಲರಿಗಾಗಿ ವಿಶೇಷ ಸವಲತ್ತುಗಳು, ಸಲಕರಣೆಗಳನ್ನು
ನೀಡುತ್ತಿದ್ದು ಅವುಗಳ ಸದ್ಬಳಕೆಯಿಂದ ಶಕ್ತಿವಂತರಾದಾಗ ಇಂದಿನ ಈ ವಿಕಲ ಚೇತನ ದಿನಾಚರಣೆ ಸಾರ್ಥಕವಾಗುವದು ಎಂದರು.
ಮುಖ್ಯ ಅತಿಥಿಗಳಾಗಿದ್ದ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ದಯಾನಂದ ಹ್ಯಾಗಿ ಮಾತನಾಡಿ, ನಾವೂ ಶಕ್ತಿವಂತರು, ನಮ್ಮ ಋಣಾತ್ಮಕ ಚಿಂತನೆಗಳಿಂದ ದೂರವಿದ್ದು ಪ್ರತಿಯೊಬ್ಬರೂ ಸಾಧಕರಾಗುವಲ್ಲಿ ಶ್ರಮಿಸಬೇಕೆಂದರಲ್ಲದೆ, ಸರ್ಕಾರದ ಸಲಕರಣೆಗಳನ್ನು ಸಮರ್ಥವಾಗಿ ಬಳಸಬೇಕೆಂದರು.
ಅತಿಥಿಗಳಾಗಿದ್ದ ಶಿಕ್ಷಕರಾದ ಆರ್.ಎಮ್.ಕೊಡೊಳ್ಳಿ ಸರ್ವರನ್ನು ಸ್ವಾಗತಿಸಿದರಲ್ಲದೆ, ಕಾರ್ಯಕ್ರಮದ ಕುರಿತು ಸವಿಸ್ತಾರವಾಗಿ ವಿವರಿಸಿದರಲ್ಲದೆ, ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ವಿಕಲ ಚೇತನರಾದ ಯಲ್ಲಪ್ಪಾ ನಾಗರಾಳ, ಮುಜಬುಲ್ ಯರಗಟ್ಟಿ, ಸಿದ್ಧೇಶ್ವರ ಪಟ್ಟಣಶೆಟ್ಟಿ, ಬಸವರಾಜ ಕಟ್ಟೀಮನಿ, ಶೋಭಾ ಪಟ್ಟಣಶೆಟ್ಟಿ,ಅಶ್ವಿನಿ ಭಜಂತ್ರಿ, ಅಲ್ತಾಪ್ ಹವಾಲ್ದಾರ,ಸೇರಿದಂತೆ ಗ್ರಾಮದ ವಿಕಲ ಚೇತನರ ಪಾಲಕರು, ಪೋಷಕರು, ಉಪಸ್ತಿತರಿದ್ದರು.
ಪಟ್ಟಣ ಪಂಚಾಯತಿ ಸಹಾಯಕ ಶಾಂತು ಕುಡಜೋಗಿ, ಶಿಕ್ಷಕರಾದ ಜಿ.ಎ.ಬಾಗೇವಾಡಿ ಆಯೋಜಿಸಿದ್ದರು.