Breaking News

ಕೊಣ್ಣೂರ :ಡಾ.ಸೋಮಶೇಖರ ಪುನ್ನೂರಿಗೆ ಸನ್ಮಾನ

Spread the love

ಕೊಣ್ಣೂರ :ಡಾ.ಸೋಮಶೇಖರ ಪುನ್ನೂರಿಗೆ ಸನ್ಮಾನ

ಯುವ ಭಾರತ ಸುದ್ದಿ ಗೋಕಾಕ :
ಅಮೆರಿಕಾದಲ್ಲಿ ವಿಶೇಷ ಸಾಧನೆಗೈದು ಕೃಷಿ ವಿಜ್ಞಾನ ಕ್ಷೇತ್ರದಲ್ಲಿ ಉನ್ನತ ಡಾಕ್ಟರೇಟ್ ಪದವಿ ಪಡೆದು ರೈತರಿಗೆ ವಿಭಿನ್ನ ಕೃಷಿ ಉತ್ಪಾದನೆ ಮಾಡಲು ವಿಶೇಷ ತಳಿ ಕಂಡು ಹಿಡಿದ ಕೊಣ್ಣೂರ ಪಟ್ಟಣದ ನಿವಾಸಿ ಡಾ.ಸೋಮಶೇಖರ ಪುನ್ನೂರಿ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಹಾಗೂ ಕನ್ನಡ ಪರ ಸಂಘಟನೆಗಳ ಒಕ್ಕೂಟ,ರೈತ ಸಂಘಟನೆಗಳು ಸೇರಿ ಇಂದು ಕೊಣ್ಣೂರ ಪಟ್ಟಣದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ನಂತರ ಸಮಾರಂಭ ಉದ್ದೇಶಿಸಿ ಮಾತನಾಡಿದ ಕಾರ್ಮಿಕ ಧುರೀಣರಾದ ಅಂಬಿರಾವ್ ಪಾಟೀಲ ಅವರು ಡಾ.ಸೋಮಶೇಖರ ಪುನ್ನೂರಿ ಅವರು ಅಮೇರಿಕಾದಲ್ಲಿ ಕೃಷಿ ಕ್ಷೇತ್ರದಲ್ಲಿ ಉನ್ನತ ಡಾಕ್ಟರೇಟ್ ಪದವಿ ಪಡೆದು ಗೋಕಾಕ ತಾಲೂಕಿನ ಕೀರ್ತಿ ಪತಾಕೆಯನ್ನು ವಿದೇಶದಲ್ಲಿ ಹಾರಿಸಿದ್ದಾರೆ. ಅವರು ಇನ್ನು ಹೆಚ್ಚಿನ ಸಾಧನೆ ಮಾಡಲಿ ಎಂದು ಶುಭ ಹಾರೈಸಿದ್ದರು.

ಕೊಣ್ಣೂರ ಪುರಸಭೆಯ ಸದ್ಯಸರಾದ ಪ್ರಕಾಶ ಕರನಿಂಗ,ವಿನೋದ ಕರನಿಂಗ,ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆಂಪಣ್ಣ ಚೌಕಶಿ,ಕರವೇ ಸಂತೋಷ ಅರಳಿಕಟ್ಟಿ ಬಣದ ರಾಜ್ಯಾಧ್ಯಕ್ಷ ಪ್ರಶಾಂತ ಅರಳಿಕಟ್ಟಿ,ಕರವೇ ಸ್ವಾಭಿಮಾನಿ ಬಣದ ಬೆಳಗಾವಿ ಜಿಲ್ಲಾ ಉಸ್ತುವಾರಿ ಅಧ್ಯಕ್ಷ ಸಂತೋಷ ಕಂಡ್ರಿ,ಜಯ ಕರ್ನಾಟಕ ಸಂಘಟನೆಯ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಮಲಿಕಜಾನ ತಲವಾರ,ಕನ್ನಡ ಸೇನೆ ಗೋಕಾಕ ತಾಲೂಕ ಅಧ್ಯಕ್ಷ ಅಪ್ಪಾಸಾಬ ಮುಲ್ಲಾ,ಕರವೇ ಸ್ವಾಭಿಮಾನಿ ಬಣ ಗೋಕಾಕ ತಾಲೂಕ ಅಧ್ಯಕ್ಷ ಬಸವರಾಜ ಬೇಡರಟ್ಟಿ,ಸಮರ ಸೇನೆ ರಾಜ್ಯ ಉಪಾಧ್ಯಕ್ಷ ಕೆ.ಕೆ ಪಟ್ಟಣಶೆಟ್ಟಿ,ಕರ್ನಾಟಕ ಪ್ರಜಾ ಶಕ್ತಿ ಸಮಿತಿ ಬೆಳಗಾವಿ ಜಿಲ್ಲಾಧ್ಯಕ್ಷ ರಾಜು ದೊಡ್ಡಮನಿ, ರಮೇಶ ಪುನ್ನೂರಿ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿರಿದ್ದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

fifteen + nine =