ಕೊನೆಗೂ ಮದುವೆ ನಿರ್ಧಾರಕ್ಕೆ ಬಂದ ರಮ್ಯಾ..!
ಯುವ ಭಾರತ ಸುದ್ದಿ ಮಂಡ್ಯ :
ನಾನು ಮದುವೆಯಾಗಬೇಕು ಅಂದ್ರೆ ನೀವೇ ವರನನ್ನು ಹುಡುಕಿ. ನನಗೆ ಗೌಡರ ಹುಡುಗ ಸಿಕ್ತಾನೆ ಎಂದರೆ ಮದುವೆಗೆ ಸಿದ್ದ. ಎಲ್ಲಿ ಹುಡುಗರೇ ಸಿಕ್ತಾ ಇಲ್ಲ. ನನಗೆ ಹುಡುಗರನ್ನು ನೋಡಿ ನೋಡಿ ಸಾಕಾಯಿತು. ಬೇಕಿದ್ರೆ ನೀವೇ ಸ್ವಯಂವರ ಮಾಡಬಹುದು. ಮದುವೆಯಾಗಲು ನಾನು ಸಿದ್ದ ಎಂದು ಮಂಡ್ಯ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಹೇಳಿದರು.
ಪತ್ರಕರ್ತರು ನಿಮ್ಮ ಮದುವೆ ಯಾವಾಗ ಎಂದು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ನನಗೆ ನೀವೇ ವರನನ್ನು ಹುಡುಕಿ. ಗೌಡರ ಹುಡುಗನನ್ನು ಹುಡುಕಿ. ನಾನು ಮದುವೆಗೆ ಸಿದ್ದ ಎಂದು ಹೇಳಿದರು.
ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ. ಕೆಲವರು ಅಪಪ್ರಚಾರ ಮಾಡಲು ಬಯಸುತ್ತಾರೆ. ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಸಕ್ರಿಯ ರಾಜಕಾರಣಕ್ಕೆ ಮರಳುವ ಬಗ್ಗೆ ಮುಂದೆ ನಿರ್ಧರಿಸುವೆ. ಸದ್ಯಕ್ಕೆ ಸಿನಿಮಾ ನಿರ್ಮಾಣದಲ್ಲಿ ತೊಡಗಿದ್ದೇನೆ. ಮಂಡ್ಯ, ವರುಣಾ, ಮೈಸೂರು, ನಂಜನಗೂಡು ಸೇರಿ ಹಲವೆಡೆ ಕಾಂಗ್ರೆಸ್ ಅಭ್ಯರ್ಥಿಗಳ ಪ್ರಚಾರಕ್ಕೆ ಹೋಗುವೆ. ಸ್ಟಾರ್ ಕ್ಯಾಂಪೇನರ್ ಆಗಿರುವುದರಿಂದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸಪೋರ್ಟ್ ಮಾಡುವೆ. ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಇದುವರೆಗೆ ಯಾವ ನಿರ್ಧಾರವನ್ನು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.