Breaking News

ಸಾಧಕರ ಸನ್ಮಾನ!

Spread the love

ಸಾಧಕರ ಸನ್ಮಾನ!

ಯುವ ಭಾರತ ಸುದ್ದಿ ಇಂಡಿ: ತಾಲೂಕಿನ ರೂಗಿ ಗ್ರಾಮದ ಸ್ನೇಹಜ್ಯೋತಿ ಪ್ರವಾಸಿ ಸಂಘವು ಗ್ರಾಮದ ಸಾಧಕರಾದ ಪ್ರೌಢ ಶಾಲೆಗಳ ವಿಭಾಗದ ೧೫೦೦ ಮೀಟರ ಓಟದಲ್ಲಿ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದ ಆರತಿ ಮಠಪತಿ ಹಾಗೂ ಕೆಎಸ್‌ಆರ್‌ಟಿಸಿಯಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಶ್ರೀಮಂತ ಜಮಾದಾರ ಹಾಗೂ ಕಾಲಿಗೆ ಕಟ್ಟಿಗೆ ಕಟ್ಟಿಕೊಂಡು (ಮರಗಾಲ)ಶ್ರೀಶೈಲದ ವರೆಗೂ ಪಾದಯಾತ್ರೆ ಮಾಡಿದ ಶಿವಾನಂದ ಗಿಣ್ಣಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಮುಖ್ಯಶಿಕ್ಷಕ ಬಿ.ಎಸ್.ತಳವಾರ, ಈ ಸಂಘವು ಬಡ ವಿದ್ಯಾರ್ಥಿಗಳಿಗೆ ಸಹಾಯಮಾಡುತ್ತಾ, ಪ್ರೊತ್ಸಾಹಿಸುತ್ತಾ ಬಂದಿರುವುದು ಹೆಮ್ಮೆಯ ಸಂಗತಿ. ಗ್ರಾಮಗಳಲ್ಲಿ ಇಂಥ ಸಂಘಗಳು ಇದ್ದರೆ,ಸಾಧಕರನ್ನು ಪ್ರೋತ್ಸಾಹಿಸಿ ಅವರನ್ನು ಹುರುದುಂಬಿಸುವ ಕಾರ್ಯ ಆಗುತ್ತದೆ.ಜನಪರವಾದ ಇಂಥ ಸಂಘಗಳು ಇನ್ನೂ ಹೆಚ್ಚು ಹೆಚ್ಚು ಬೆಳೆಯಲಿ ,ಸಹಾಯ ಮಾಡುತ್ತಾ ಇರಲಿ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಕಾರ್ಯದರ್ಶಿ, ಶಿಕ್ಷಕ ರವಿ ಗಿಣ್ಣಿ,ಸಂಘದ ಉದ್ದೇಶ ಹಾಗೂ ಸಂಘದ ಕಾರ್ಯಚಟುವಟಿಕೆಗಳು ಮತ್ತು ನಿಸ್ವಾರ್ಥದಿಂದ ಮುನ್ನೆಡಿಸಿಕೊಂಡು ಹೋಗುವ ಉದ್ದೇಶ ಹೊಂದಿದ್ದೇವೆ ಎಂದರು.

ಸಂಘದ ಅಧ್ಯಕ್ಷ ಗುರುಪಾದ ದಳವಾಯಿ, ಸದಸ್ಯರಾದ ಮಂಜುನಾಥ ತೇಲಿ,ಮಹೇಶ ಮಡಿವಾಳರ, ಸಾಯಬಣ್ಣ ಗುಂಜುಟಗಿ, ರಾಜಕುಮಾರ ರೋಡಗಿ, ರಾಜಕುಮಾರ ನಿಂಬರಗಿ,ಮಂಜುನಾಥ ಹೊಟಗಿ, ಗಜಾನಂದ ಗಿಣ್ಣಿ, ಶ್ರೀಶೈಲ ಗುನ್ನಾಪೂರ, ಶಿವುಕುಮಾರ ತೇಲಿ, ಸುನೀಲ ರೂಗಿ, ಶಿವಪುತ್ರಯ್ಯ ಮಠಪತಿ, ರವಿ ಕರಜಗಿ, ಆಕಾಶ ಗಿಣ್ಣಿ ಮೊದಲಾದವರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

11 + 4 =