ಗೋಕಾಕ ಕ್ಷೇತ್ರದ ಅಭಿವೃದ್ಧಿಗಾಗಿ 52 ಕೋಟಿ ರೂ ಬಿಡುಗಡೆ-ಶಾಸಕ ರಮೇಶ ಜಾರಕಿಹೊಳಿ.!
ಯುವ ಭಾರತ ಸುದ್ದಿ ಗೋಕಾಕ: ಗೋಕಾಕ ಮತಕ್ಷೇತ್ರದ ರಸ್ತೆಗಳ ಅಭಿವೃದ್ಧಿಗಾಗಿ 31 ಕೋಟಿ ರೂ. ಅಂತರ್ಜಲ ಹೆಚ್ಚಳ ಮಾಡಲು ಹಾಗೂ ಜಾನುವಾರುಗಳ ಕುಡಿಯುವ ನೀರಿಗಾಗಿ 19 ಕೋಟಿ ಮತ್ತು ಮಠಗಳ ಅಭಿವೃದ್ಧಿಗಾಗಿ 2 ಕೋಟಿ ರೂ.ಗಳು ಸೇರಿ ಒಟ್ಟು 52 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.
ಕ್ಷೇತ್ರದಲ್ಲಿರುವ ಗ್ರಾಮೀಣ ರಸ್ತೆಗಳ ಸುಧಾರಣೆಗಾಗಿ ಪಂಚಾಯತ ರಾಜ್ಯ ಇಲಾಖೆಯ ಒಟ್ಟು 31 ಕೋಟಿ ರೂ, ಗ್ರಾಮೀಣ ಪ್ರದೇಶದಲ್ಲಿ ಅಂತರ್ಜಲ ಪ್ರಮಾಣ ಹೆಚ್ಚಿಸಲು ಮತ್ತು ಜಾನುವಾರುಗಳ ಕುಡಿಯುವ ನೀರಿಗಾಗಿ ಬ್ರೀಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಸಣ್ಣ ನೀರಾವರಿ ಇಲಾಖೆಯಿಂದ ಒಟ್ಟು 19 ಕೋಟಿ ರೂ. ಮುಜರಾಯಿ ಇಲಾಖೆಯಿಂದ ಮಠಗಳ ಅಭಿವೃದ್ಧಿ ಪಡಿಸಲು. ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರತಿ ಮಠಗಳಿಗೆ ತಲಾ 25 ಲಕ್ಷ ರೂಗಳಂತೆ ನಗರದ ಶ್ರೀ ಶೂನ್ಯ ಸಂಪಾದನ ಮಠ, ಶ್ರೀ ಮುಪ್ಪಯ್ಯನ ಮಠ ಮತ್ತು ತಾಲೂಕಿನ ಅಂಕಲಗಿಯ ಶ್ರೀ ಅಡವಿಸಿದ್ದೇಶ್ವರ ಮಠ, ತವಗದ ಶ್ರೀ ಬಾಳಯ್ಯ ಸ್ವಾಮಿ ಮಠ, ಮರಡಿಮಠದ ಶ್ರೀ ಕಾಡಸಿದ್ಧೇಶ್ವರ ಮಠ, ಸುಲಧಾಳ ಶ್ರೀ ಜಡಿಸಿದ್ಧೇಶ್ವರ ಮಠ ಹಾಗೂ ಮಮದಾಪೂರದ ಶ್ರೀ ಚರಮೂರ್ತೇಶ್ವರ ಮಠ ಸೇರಿ ಕ್ಷೇತ್ರದ 8 ಮಠಗಳಿಗೆ ಮುಜರಾಯಿ ಇಲಾಖೆಯಿಂದ ಒಟ್ಟು 2 ಕೋಟಿ ರೂಪಾಯಿ ಅನುದಾನ ಬಿಡುಯಾಗಿದೆ. ಮುಂಬರುವ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಇನ್ನು ಹೆಚ್ಚಿನ ಅನುದಾನ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವದು ಎಂದು ಶಾಸಕ ರಮೇಶ ಜಾರಕಿಹೊಳಿ ಅವರು ಹೇಳಿದ್ದಾರೆ.
ಗೋಕಾಕ ಮತಕ್ಷೇತ್ರದ ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಬ್ರೀಡ್ಜ್ ಕಂ ಬ್ಯಾರೇಜ್ ಹಾಗೂ ಮಠಗಳ ಅಭಿವೃದ್ಧಿಗಾಗಿ ಒಟ್ಟು 52 ಕೋಟಿ ರೂ.ಗಳ ವಿಶೇಷ ಅನುದಾನ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶಾಸಕ ರಮೇಶ ಜಾರಕಿಹೊಳಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.