Breaking News

ನಗರಸಭೆ ಕಸ ಸಂಗ್ರಹಿಸುವ ವಾಹನಗಳಿಗೆ ಚಾಲನೆ ನೀಡಿದ ಶಾಸಕ ರಮೇಶ ಜಾರಕಿಹೊಳಿ.!

Spread the love

ನಗರಸಭೆ ಕಸ ಸಂಗ್ರಹಿಸುವ ವಾಹನಗಳಿಗೆ ಚಾಲನೆ ನೀಡಿದ ಶಾಸಕ ರಮೇಶ ಜಾರಕಿಹೊಳಿ.!


ಯುವ ಭಾರತ ಸುದ್ದಿ  ಗೋಕಾಕ: ಗೋಕಾಕ ನಗರಸಭೆ ವತಿಯಿಂದ ಸ್ವಚ್ಛಭಾರತ ಮಿಷನ್ ಯೋಜನೆಯಡಿ ಮನೆ ಮನೆಗೆ ಕಸ ಸಂಗ್ರಹಿಸುವ ನಾಲ್ಕು ವಾಹನಗಳಿಗೆ ಶಾಸಕ ರಮೇಶ ಜಾರಕಿಹೊಳಿ ಅವರು ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ೫.೮೯ ಲಕ್ಷ ರೂಗಳಲ್ಲಿ ಶೇ೨೪.೧೦ರ ಯೋಜನೆಯಡಿಯಲ್ಲಿ ಪೌರಕಾರ್ಮಿಕರ ಸುರಕ್ಷಾ ಸಾಮಗ್ರಿಗಳನ್ನು ವಿತರಣೆ, ೪.೫೫ ಲಕ್ಷ ರೂಗಳಲ್ಲಿ ಶೇ೭.೨೫ರ ಯೋಜನೆಯಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಸತಿ ನಿಗಮ ಗೋಕಾಕ ಇವರಿಗೆ ಕ್ವಾಯರ್ ಬೇಡ್ ಹಾಗೂ ೫.೨೭ ಲಕ್ಷ ರೂಗಳಲ್ಲಿ ಶೇ೫ರ ಅಂಗವಿಕಲರ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಅಂಗವಿಕಲರಿಗೆ ಮೂರು ದ್ವೀಚಕ್ರ ವಾಹನಗಳನ್ನು ಶಾಸಕರು ವಿತರಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಉಪಾಧ್ಯಕ್ಷ ಬಸವರಾಜ ಆರೇನ್ನವರ, ನಗರಸಭೆ ಸದಸ್ಯರಾದ ಅಬ್ಬಾಸ ದೇಸಾಯಿ, ಪ್ರಕಾಶ ಮುರಾರಿ, ವಿಜಯ ಜತ್ತಿ, ದುರ್ಗಪ್ಪ ಶಾಸ್ತಿçಗೊಲ್ಲರ, ದಾದಾಪೀರ ಶಭಾಶಖಾನ, ಬಿಜೆಪಿ ನಗರಾಧ್ಯಕ್ಷ ಭೀಮಶಿ ಭರಮನ್ನವರ, ಬಿಜೆಪಿ ಹಿಂದುಳಿದ ಮೋರ್ಚಾ ಅಧ್ಯಕ್ಷ ಲ.ಭಿ. ಖಡಕಭಾಂವಿ, ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ, ಪರಿಸರ ಅಭಿಯಂತರ ಎಮ್ ಎಚ್ ಗಜಾಕೋಶ, ಜಯೇಶ ತಾಂಬೂಳೆ ಸೇರಿದಂತೆ ನಗರಸಭೆ ಸದಸ್ಯರು ಸಿಬ್ಬಂಧಿಗಳು ಅನೇಕರು ಇದ್ದರು.


Spread the love

About Yuva Bharatha

Check Also

ಗೋಕಾಕನಲ್ಲಿ ಬಿಜೆಪಿಯಿಂದ ಕಾಂಗ್ರೇಸ್ ವಿರುದ್ಧ ಪ್ರತಿಭಟನೆ.!

Spread the loveಗೋಕಾಕನಲ್ಲಿ ಬಿಜೆಪಿಯಿಂದ ಕಾಂಗ್ರೇಸ್ ವಿರುದ್ಧ ಪ್ರತಿಭಟನೆ.! ಗೋಕಾಕ: ವಿಜಯಪುರ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯ ಹಿಂದು ಧಾರ್ಮಿಕ …

Leave a Reply

Your email address will not be published. Required fields are marked *

eighteen + five =