Breaking News

|ಸ್ನೇಹಿತನ ಪಾರ್ಥಿವ ಶರೀರ ಬರುವದನ್ನು ಕಂಡು ಗಳಗಳನೆ ಕಣ್ಣಿರು ಸುರಿಸಿದ..|| ಸಚಿವ ರಮೇಶ..||  

Spread the love

||ಸ್ನೇಹಿತನ ಪಾರ್ಥಿವ ಶರೀರ ಬರುವದನ್ನು ಕಂಡು ಗಳಗಳನೆ ಕಣ್ಣಿರು ಸುರಿಸಿದ..|| ಸಚಿವ ರಮೇಶ..||
 ಯುವ ಭಾರತ  ಸುದ್ದಿ  ಗೋಕಾಕ:  ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಬಾಲ್ಯದ ಸ್ನೇಹಿತ ಹಾಗೂ ಗ್ರಾಮದೇವತೆ ಜಾತ್ರಾ ಕಮೀಟಿಯ ಮುಖಂಡ ಎಸ್ ಎ ಕೋತವಾಲ ಅವರ ಪಾರ್ಥಿವ ಶರೀರ ಹೊತ್ತ ಅಂಬ್ಯುಲೆನ್ಸ್ಗೆ ಪುಷ್ಪಸುರಿದು ಕಣ್ಣಿರು ಸುರಿಸಿ ಅಂತಿಮವಿದಾಯ ಹೇಳಿದರು.
   ನಗರಸಭೆಯ ಹಿರಿಯ ಸದಸ್ಯ ಹಾಗೂ ಮಾಜಿ ನಗರಸಭೆ ಅಧ್ಯಕ್ಷ ಎಸ್ ಎ ಕೋತವಾಲ ಅವರು ಬಹುಅಂಗಾAಗ ವೈಫಲ್ಯದಿಂದ ನಿಧನರಾಗಿದ್ದು ರವಿವಾರದಂದು ಸಂಜೆ ಮೃತಶರೀರ ನಗರಕ್ಕೆ ಆಗಮಿಸಿತು.
    ನಗರದ ಬಸವೇಶ್ವರ ವೃತ್ತದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಪುಷ್ಪನಮನ ಸಲ್ಲಿಸಿದರು. ನಂತರ ನಗರದ ಈದ್ಗಾ ಮೈದನದ ಮುಂದೆ ಆಗಮಿಸಿದ ಅಂಬ್ಯುಲೆನ್ಸ್ಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಜೆಡಿಎಸ್ ಮುಖಂಡ ಅಶೋಕ ಪೂಜಾರಿ, ನಗರಸಭೆ ಸದಸ್ಯರು, ಕೋತವಾಲ ಅವರ ಸ್ನೇಹಿತರು ಪುಷ್ಪನಮನ ಸಲ್ಲಿಸಿದರು.
   ಮೃತ ಕೋತವಾಲ ಅವರ ಅಂತ್ಯಕ್ರೀಯೆ ನಗರದ ಕುಂಬಾರಗಲ್ಲಿಯ ಖಬರಸ್ತಾನದಲ್ಲಿ ನೆರವೆರಿಸಲಾಯಿತು. ಅಂತ್ಯಕ್ರೀಯೆಯಲ್ಲಿ ಎಲ್ಲ ರಾಜಕೀಯ ನಾಯಕರುಗಳ ಪಕ್ಷ ಭೇದ ಮರೆತು ಭಾಗವಹಿಸಿ ಎಸ್ ಎ ಕೋತವಾಲ ಅವರಿಗೆ ಅಂತಿಮ ನಮನ ಸಲ್ಲಿಸಿದರು.

Spread the love

About Yuva Bharatha

Check Also

ಸಮಾಜದ ಸುಧಾರಣೆಯಲ್ಲಿ ಶಿಕ್ಷಣವು ಮಹತ್ತರ ಪಾತ್ರ ವಹಿಸುತ್ತದೆ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love  ಗೋಕಾಕ; ಸಮಾಜದ ಸುಧಾರಣೆಯಲ್ಲಿ ಶಿಕ್ಷಣವು ಮಹತ್ತರ ಪಾತ್ರ ವಹಿಸುತ್ತದೆ. ನಮ್ಮ ಮೂಡಲಗಿ ವಲಯವು ಶಿಕ್ಷಣದಲ್ಲಿ ಪ್ರಗತಿಯನ್ನು …

Leave a Reply

Your email address will not be published. Required fields are marked *

two + twelve =