Breaking News

ದಿನೇಶ ಕಲ್ಲಹಳ್ಳಿಯ ಅಣಕು ಶವಯಾತ್ರೆ ನಡೆಸಿ, ಪ್ರತಿಭಟನೆ.!

Spread the love


ಯುವ ಭಾರತ ಸುದ್ದಿ, ಗೋಕಾಕ: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ಬೆಂಬಲಿಸಿ ಶನಿವಾರವೂ ಕೂಡ ಬೆಂಬಲಿಗರು ಬೃಹತ್ ಪ್ರತಿಭಟನೆ ನಡೆಸಿದ್ದು, ತಾಲೂಕಿನ ಮಮದಾಪೂರ ಕ್ರಾಸ್ ಬಳಿ ಯರಗಟ್ಟಿ-ಸಂಕೇಶ್ವರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ರಮೇಶ ಜಾರಕಿಹೊಳಿ ಅವರ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿ ರಮೇಶ ಅವರ ಅಭಿಮಾನಿಗಳು ಘೋಷಣೆ ಕೂಗಿದರು. ದೂರುದಾರ ದಿನೇಶ ಕಲ್ಲಹಳ್ಳಿಯ ಅಣಕು ಶವಯಾತ್ರೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ರಮೇಶ ಜಾರಕಿಹೊಳಿ ಅವರ ವಿರುದ್ಧ ಪಿತೂರಿ ಮಾಡಲಾಗಿದ್ದು, ಇದರ ಹಿಂದೆ ಪ್ರಭಾವಿಗಳ ಕೈವಾಡವಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ದೂರುದಾರನನ್ನು ಸಂಪೂರ್ಣವಾಗಿ ವಿಚಾರಣೆ ಮಾಡಬೇಕು. ಸತ್ಯಾಸತ್ಯತೆಯನ್ನು ಶೀಘ್ರವೇ ಬಹಿರಂಗಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಸುರೇಶ ಸನದಿ, ಶಿವನಗೌಡ ಕಮತ, ಕೆಂಪಣ್ಣ ಮೈಲನ್ನವರ, ಶಂಕರಗೌಡ ಪಾಟೀಲ, ಮಲ್ಲಪ್ಪ ಖಡಕಭಾಂವಿ, ಯಲ್ಲಪ್ಪ ಧರೇನ್ನವರ, ಶಿವಲಿಂಗ ಜಕ್ಕನ್ನವರ, ಸುರೇಶ ಪಾಟೀಲ, ವೀರಭದ್ರ ಮೈಲನ್ನವರ, ರಾಯಪ್ಪ ನಾಯ್ಕ, ಬಡಕಪ್ಪ ಪೂಜೇರಿ, ಹನಮಂತ ಯಡ್ರಾಂವಿ, ಯಲ್ಲಪ್ಪ ನಾಯ್ಕ ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

ಗೋಕಾಕನಲ್ಲಿ ಬಿಜೆಪಿಯಿಂದ ಕಾಂಗ್ರೇಸ್ ವಿರುದ್ಧ ಪ್ರತಿಭಟನೆ.!

Spread the loveಗೋಕಾಕನಲ್ಲಿ ಬಿಜೆಪಿಯಿಂದ ಕಾಂಗ್ರೇಸ್ ವಿರುದ್ಧ ಪ್ರತಿಭಟನೆ.! ಗೋಕಾಕ: ವಿಜಯಪುರ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯ ಹಿಂದು ಧಾರ್ಮಿಕ …

Leave a Reply

Your email address will not be published. Required fields are marked *

12 − twelve =