Breaking News

ಜನಸೇವೆಯೇ ಜನಾರ್ಧನೆ ಸೇವೆ ಎಂಬ ತತ್ವದಡಿಯಲ್ಲಿ ನಮ್ಮ ಸಂಸ್ಥೆಯ ಕಾರ್ಯನಿರ್ವಹಿಸುತ್ತಿದ್ದು-ಅರುಣ ಸಾಲಹಳ್ಳಿ!!

Spread the love

 

ಜನಸೇವೆಯೇ ಜನಾರ್ಧನೆ ಸೇವೆ ಎಂಬ ತತ್ವದಡಿಯಲ್ಲಿ ನಮ್ಮ ಸಂಸ್ಥೆಯ ಕಾರ್ಯನಿರ್ವಹಿಸುತ್ತಿದ್ದು-ಅರುಣ ಸಾಲಹಳ್ಳಿ!!

ಯುವ ಭಾರತ ಸುದ್ದಿ  ಗೋಕಾಕ: ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇವೆಯನ್ನು ನೀಡುವುದಕ್ಕಾಗಿ ನಮ್ಮ ಸಂಸ್ಥೆಯನ್ನು ಆರಂಭಿಸಲಾಗಿದೆ ಎಂದು ಶ್ರೀ ಸಾಯಿ ಸಮರ್ಥ ಫೌಂಡೇಶನ್ ಅಧ್ಯಕ್ಷ ಅರುಣ ಸಾಲಹಳ್ಳಿ ಹೇಳಿದರು.

ರವಿವಾರದಂದು ನಗರದ ಸುಗಂಧಾ ನೇತ್ರ ಚಿಕಿತ್ಸಾಲಯದಲ್ಲಿ ಶ್ರೀ ಸಾಯಿ ಸಮರ್ಥ ಫೌಂಡೇಶನ್ ವತಿಯಿಂದ ನೇತ್ರ ಚಿಕಿತ್ಸೆಗೆ ಒಳಗಾದ ಫಲಾನುಭವಿಗಳಿಗೆ ಸತ್ಕಾರ ನೆರವೇರಿಸಿ ಮಾತನಾಡಿದ ಅವರು, ಈಗಾಗಲೇ 20 ಜನರಿಗೆ ನೇತ್ರ ಶಸ್ತ್ರ ಚಿಕಿತ್ಸೆ, ಸುಮಾರು 200ಕ್ಕೂ ಹೆಚ್ಚು ಜನರಿಂದ ರಕ್ತದಾನ ಹಾಗೂ ನುರಿತ ಕಂಪ್ಯೂಟರ್ ಶಿಕ್ಷಕರಿಂದ ಉಚಿತವಾಗಿ ಕಂಪ್ಯೂಟರ್ ತರಬೇತಿಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಜನಸೇವೆಯೇ ಜನಾರ್ಧನೆ ಸೇವೆ ಎಂಬ ತತ್ವದಡಿಯಲ್ಲಿ ನಮ್ಮ ಸಂಸ್ಥೆಯ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಸಂಸ್ಥೆಯಿಂದ ಕಲ್ಯಾಣ ಮಂಟಪವನ್ನು ನಿರ್ಮಿಸಿ ಉಚಿತವಾಗಿ ಜನರಿಗೆ ನೀಡುವ ಉದ್ದೇಶದಿಂದ ಖಾಲಿ ನಿವೇಶನಕ್ಕಾಗಿ ಸ್ಥಳ ಪರಿಶೀಲಿಸಲಾಗುತ್ತಿದೆ. ಸಾಯಿ ಮಂದಿರದಲ್ಲಿ ಪ್ರತಿದಿನ ಅನ್ನದಾಸೋಹ ಹಾಗೂ ಶಿರಡಿ ಸಾಯಿಬಾಬಾ ದರ್ಶನಕ್ಕೆ ಭಕ್ತರಿಗೆ ಒಂದು ಬಸ್ ಉಚಿತವಾಗಿ ವ್ಯವಸ್ಥೆ ಮಾಡುವ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಸಂಸ್ಥೆಯಿಂದ ಮಾಡಲು ಉದ್ದೇಶಿಸಿಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವದರ ಜೊತೆಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಫೌಂಡೇಶನ್ ನಿರ್ದೇಶಕ ಸಂಜು ಚಿಪ್ಪಲಕಟ್ಟಿ, ಡಾ.ಕಿರಣ ಪೂಜಾರ, ಆನಂದ ಪಾಟೀಲ, ಸುನೀಲ ಹಿರಗನ್ನವರ, ಚಿಕಿತ್ಸಾಲಯ ಸಿಬ್ಬಂದಿ ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

ಗೋಕಾಕನಲ್ಲಿ ಬಿಜೆಪಿಯಿಂದ ಕಾಂಗ್ರೇಸ್ ವಿರುದ್ಧ ಪ್ರತಿಭಟನೆ.!

Spread the loveಗೋಕಾಕನಲ್ಲಿ ಬಿಜೆಪಿಯಿಂದ ಕಾಂಗ್ರೇಸ್ ವಿರುದ್ಧ ಪ್ರತಿಭಟನೆ.! ಗೋಕಾಕ: ವಿಜಯಪುರ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯ ಹಿಂದು ಧಾರ್ಮಿಕ …

Leave a Reply

Your email address will not be published. Required fields are marked *

17 + two =