Breaking News

ಶ್ರೀ ಚಂದ್ರಜ್ಯೋತಿ ಪಾದಯಾತ್ರೆ ಬುಧವಾರ

Spread the love

ಶ್ರೀ ಚಂದ್ರಜ್ಯೋತಿ ಪಾದಯಾತ್ರೆ ಬುಧವಾರ

ಯುವ ಭಾರತ ಸುದ್ದಿ ಬೆಳಗಾವಿ :
ಲಿಂಗೈಕ್ಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ 85 ನೇ ಜಯಂತಿ ನಿಮಿತ್ತ ಅವರ ಜನ್ಮಸ್ಥಳ ಸುಕ್ಷೇತ್ರ ಕಣಗಲಾದಿಂದ ಅವರ ಸಮಾಧಿ ಸ್ಥಳ ಗಡಹಿಂಗ್ಲಜ್ ತಾಲೂಕಿನ ನೂಲ ಗ್ರಾಮದ ಶ್ರೀ ಸುರಗೇಶ್ವರ ಮಠದವರೆಗೆ ಶ್ರೀ ಚಂದ್ರ ಜ್ಯೋತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

ಏಪ್ರಿಲ್ 5 ರಂದು ಕಣಗಲದಿಂದ ಬೆಳಗ್ಗೆ 6 ಕ್ಕೆ ಪ್ರಾರಂಭವಾಗಲಿರುವ ಪಾದಯಾತ್ರೆ ಕರ್ನಾಟಕದ ಕಣಗಲಾ, ಹೊನ್ನಿಹಳ್ಳಿ, ಕೋಣನಕೇರಿ, ಮಹಾರಾಷ್ಟ್ರದ ಹೊಸೂರ ಚಂಪು, ಹೆಬ್ಬಾಳ, ನಿಲಜಿ ಮೂಲಕ ಸುರಗೇಶ್ವರ ಮಠದಲ್ಲಿ ಸಮಾರೋಪವಾಗಲಿದೆ. ಸಂಜೆ 6 ಕ್ಕೆ ಧರ್ಮಸಭೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮಹಾಪ್ರಸಾದ ನಡೆಯಲಿದೆ.

ಏಪ್ರಿಲ್ 6 ರಂದು ಶ್ರೀ ಸುರಗೇಶ್ವರ ಮಠದಲ್ಲಿ ಪೂಜೆ, ಮಹಾಮಂಗಳಾರತಿ, ನಂತರ ಶ್ರೀ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳವರ ಸಾನ್ನಿಧ್ಯದಲ್ಲಿ ಬೆಳಗ್ಗೆ 10 ಕ್ಕೆ ಧರ್ಮಸಭೆ ಹಾಗೂ ಮಧ್ಯಾಹ್ನ ಮಹಾಪ್ರಸಾದ ನಡೆಯಲಿದೆ.
ಪಾದಯಾತ್ರೆಯಲ್ಲಿ ಸದ್ಭಕ್ತರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಪುನೀತರಾಗುವಂತೆ
ಶ್ರೀ ಸುರಗೇಶ್ವರಮಠದ ಶ್ರೀ ಗುರುಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಜಿಯವರು ಮನವಿ ಮಾಡಿಕೊಂಡಿದ್ದಾರೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

5 × 1 =