ಶುಭಮನ್ ಗಿಲ್ ಅತ್ಯಮೋಘ ದ್ವಿಶತಕ !

Spread the love

ಶುಭಮನ್ ಗಿಲ್ ಅತ್ಯಮೋಘ ದ್ವಿಶತಕ !

ಯುವ ಭಾರತ ಸುದ್ದಿ ಹೈದರಾಬಾದ್ :
ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಶುಭಮನ್ ಗಿಲ್ ಭರ್ಜರಿ ದ್ವಿಶತಕ ಬಾರಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಇಂದು ನಡೆದ ಏಕದಿನ ಪಂದ್ಯಾವಳಿಯಲ್ಲಿ ಅವರು ಎಂಟು ಭರ್ಜರಿ ಸಿಕ್ಸರ್ ಹಾಗೂ 19 ಬೌಂಡರಿ ನೆರವಿನಿಂದ ತಮ್ಮ ದ್ವಿಶತಕ ಪೂರೈಸಿದ್ದಾರೆ. ಭಾರತ ಇತ್ತೀಚಿನ ವರದಿಗಳ ಪ್ರಕಾರ ಏಳು ವಿಕೆಟ್ ಕಳೆದುಕೊಂಡು ರನ್ನು ಗಳಿಸಿದೆ. ಭಾರತ ಕ್ರಿಕೆಟ್ ತಂಡದ ಆಟಗಾರರಾದ ರೋಹಿತ್ ಶರ್ಮ, ಸಚಿನ್ ತೆಂಡೂಲ್ಕರ್, ಇಶಾನ್ ಕಿಶಾನ್, ಸೆಹವಾಗ್ ಅವರು ಏಕದಿನ ಪಂದ್ಯದಲ್ಲಿ ದ್ವಿಶತಕದ ಸಾಧನೆ ಮಾಡಿದ್ದಾರೆ.
ಗಿಲ್ 208 ರನ್ನು ಗಳಿಸಿ ಔಟ್ ಆಗಿದ್ದಾರೆ.

ಒಂದು ದಿನ ಏಕದಿನ ಪಂದ್ಯಾವಳಿಯಲ್ಲಿ ಜಾಗತಿಕ ಕ್ರಿಕೆಟ್ ನಲ್ಲಿ 10 ದ್ವಿಶತಕ ದಾಖಲಾಗಿವೆ. ಇದರಲ್ಲಿ ಭಾರತದ ರೋಹಿತ ಶರ್ಮ 3, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಇಶಾನ್ ಕಿಶನ್, ಶುಭಮನ್ ಗಿಲ್ ತಲಾ ಒಂದೊಂದು ಸಲ ದ್ವಿಶತಕದ ಸಾಧನೆ ಮಾಡಿದ್ದಾರೆ.


Spread the love

About Yuva Bharatha

Check Also

ಆಧಾರ್ ಕಾರ್ಡ್ ಕುರಿತು ಮಹತ್ವದ ಮಾಹಿತಿ

Spread the loveಆಧಾರ್ ಕಾರ್ಡ್ ಕುರಿತು ಮಹತ್ವದ ಮಾಹಿತಿ ನವದೆಹಲಿ : ಉಚಿತವಾಗಿ ಆಧಾರ್ ಕಾರ್ಡ್ ಅಪ್ ಡೇಟ್ ಮಾಡಲು …

Leave a Reply

Your email address will not be published. Required fields are marked *

4 × four =