Breaking News

ಸತೀಶ ಜಾರಕಿಹೊಳಿ ಹೇಳಿಕೆಯನ್ನು ಬೆಂಬಲಿಸಿ ಗೋಕಾಕನಲ್ಲಿ ಪ್ರತಿಭಟನೆ!!

Spread the love

ಸತೀಶ ಜಾರಕಿಹೊಳಿ ಹೇಳಿಕೆಯನ್ನು ಬೆಂಬಲಿಸಿ ಗೋಕಾಕನಲ್ಲಿ ಪ್ರತಿಭಟನೆ!!

ಗೋಕಾಕ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಹೇಳಿಕೆಯನ್ನು ಬೆಂಬಲಿಸಿ ದಲಿತ ಸಂಘರ್ಷ ಸಮಿತಿ ಕರ್ನಾಟಕ ಕಾರ್ಯಕರ್ತರು ಪ್ರತಿಭಟನೆ ನಡೆಯಿಸಿ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು.
ಬುಧವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದಂತೆ ಸಮಿತಿಯ ಕಾರ್ಯಕರ್ತರು ಬಿಜೆಪಿಯ ಶಶಿಕಲಾ ಜೋಲ್ಲೆ, ಸಂಸದ ಈರಣ್ಣ ಕಡಾಡಿ ಸೇರಿದಂತೆ ಇತರ ನಾಯಕರ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಸತೀಶ ಜಾರಕಿಹೊಳಿ ಅವರ ಹೇಳಿಕೆಯಿಂದ ಯಾರನ್ನು ಅವಮಾನಿಸುವ ಪ್ರಶ್ನೆಯೆ ಬರುವುದಿಲ್ಲ ಸತ್ಯವನ್ನು ಸತ್ಯವೆಂದು ಸುಳ್ಳನ್ನು ಸುಳ್ಳೆಂದು ಹೇಳುವ ಕಾರ್ಯವನ್ನು ಸತೀಶ ಜಾರಕಿಹೊಳಿ ಅವರು ಮಾಡಿದ್ದಾರೆ. ಪರ್ಷಿಯನ್ ಭಾಷೆಯಲ್ಲಿ ಹಿಂದೂ ಪದದ ಅರ್ಥ ಡಾಕೂ ಹಾಗೂ ಕಳ್ಳ ಹೀಗೆ ಅಸಯ್ಯವಾದ ಅರ್ಥವನ್ನು ಕಲ್ಪಿಸುತ್ತದೆ ಅಂತಾ ಜಾರಕಿಹೊಳಿ ಹೇಳಿರುವುದು ಸತ್ಯ ಇರುತ್ತದೆ. ಬೇಕಿದ್ದರೆ ಹಿಂದೂ ಪದದ ಅರ್ಥವನ್ನು ಹುಡುಕಲು ಸರಕಾರವು ಸಮಿತಿಯನ್ನು ರಚಿಸಿ ಸಮಿತಿಯ ಮೂಲಕ ಸಂಶೋಧನೆ ಮಾಡಿ ಜನತೆಗೆ ಹಿಂದೂ ಪದದ ಅರ್ಥವನ್ನು ತಿಳಿಸಲಿ ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ರಮೇಶ ಮಾದರ, ಎಸ್.ಜೆ ಕರವಾಡಿ, ಬಾಲೇಶ ಬೆನವಟ್ಟಿ, ಅಶೋಕ ಲಗಮಪ್ಪಗೋಳ, ರಾಜೇಂದ್ರ ಐಹೊಳೆ, ಬಸಪ್ಪ ತಳವಾರ, ದೀಪಕ ಇಂಗಳಗಿ, ಮನೋಹರ ಅರ್ಜುನಕಟ್ಟಿ, ಕಲ್ಲಪ್ಪ ಹುಣಶಿಗಿಡದ, ಮಂಜುಳಾ ರಾಮಗಾನಟ್ಟಿ, ರಾಹುಲ್ ಕಾಂಬಳೆ, ಸತೀಶ ಹರಿಜನ, ಮಹಾಲಿಂಗ ಗಗ್ಗರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಗೋಕಾಕನಲ್ಲಿ ಬಿಜೆಪಿಯಿಂದ ಕಾಂಗ್ರೇಸ್ ವಿರುದ್ಧ ಪ್ರತಿಭಟನೆ.!

Spread the loveಗೋಕಾಕನಲ್ಲಿ ಬಿಜೆಪಿಯಿಂದ ಕಾಂಗ್ರೇಸ್ ವಿರುದ್ಧ ಪ್ರತಿಭಟನೆ.! ಗೋಕಾಕ: ವಿಜಯಪುರ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯ ಹಿಂದು ಧಾರ್ಮಿಕ …

Leave a Reply

Your email address will not be published. Required fields are marked *

14 + 14 =