ಸುಪ್ರೀಂ ಕೋರ್ಟ್ ಇಬ್ಬರು ನೂತನ ನ್ಯಾಯಮೂರ್ತಿಗಳ ಪ್ರಮಾಣ ವಚನ

ಯುವ ಭಾರತ ಸುದ್ದಿ ನವದೆಹಲಿ:
ಆಂಧ್ರಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಪ್ರಶಾಂತಕುಮಾರ ಮಿಶ್ರಾ ಮತ್ತು ಹಿರಿಯ ವಕೀಲ ಕಲ್ಪತಿ ವೆಂಕಟರಾಮನ್ ವಿಶ್ವನಾಥನ್ ಅವರು ಇಂದು, ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಇಬ್ಬರು ಹೊಸ ನ್ಯಾಯಮೂರ್ತಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು.
ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಅವರು ಪ್ರಮಾಣ ವಚನ ಬೋಧಿಸಿದರು. ಮೂವರು ನ್ಯಾಯಮೂರ್ತಿಗಳಾದ ನ್ಯಾಯಮೂರ್ತಿ ಕೆ.ಎಂ. ಜೋಸೆಫ್, ಜಸ್ಟಿಸ್ ಅಜಯ್ ರಸ್ತೋಗಿ ಮತ್ತು ನ್ಯಾಯಮೂರ್ತಿ ವಿ.ರಾಮಸುಬ್ರಮಣಿಯನ್ ಅವರು ಬೇಸಿಗೆ ರಜೆಯಲ್ಲೇ ನಿವೃತ್ತಿಯಾಗುತ್ತಿರುವುದರಿಂದ ಸಿಜೆಐ ಸೇರಿದಂತೆ 34 ನ್ಯಾಯಮೂರ್ತಿಗಳ ಸಂಪೂರ್ಣ ಬಲವನ್ನು ಸುಪ್ರೀಂ ಕೋರ್ಟ್ ಅಲ್ಪಾವಧಿಗೆ ಪಡೆದುಕೊಂಡಿದೆ.ನ್ಯಾಯಮೂರ್ತಿ ದಿನೇಶ ಮಾಹೇಶ್ವರಿ ಮತ್ತು ನ್ಯಾಯಮೂರ್ತಿ ಎಂಆರ್ ಶಾ ಅವರ ನಿವೃತ್ತಿಯೊಂದಿಗೆ, ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತುತ ನ್ಯಾಯಾಧೀಶರ ಬಲ 32 ಕ್ಕೆ ಕುಸಿದಿತ್ತು.
ಜಸ್ಟಿಸ್ ವಿಶ್ವನಾಥನ್ ಅವರು ಆಗಸ್ಟ್ 11, 2030 ರಂದು ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಅವರ ನಿವೃತ್ತಿಯ ನಂತರ ಭಾರತದ ಮುಖ್ಯ ನ್ಯಾಯಮೂರ್ತಿಯಾಗುತ್ತಾರೆ ಮತ್ತು ಮೇ 25, 2031 ರವರೆಗೆ ಹುದ್ದೆಯಲ್ಲಿ ಇರುತ್ತಾರೆ.
YuvaBharataha Latest Kannada News