ಖಿಳೇಗಾಂವ ಬಸವೇಶ್ವರ ದೇವಸ್ಥಾನದಲ್ಲಿ ಕಳವು ಮಾಡುವಾಗ ಸಿಕ್ಕಿ ಬಿದ್ದ ಕಳ್ಳರು!

ಯುವ ಭಾರತ ಸುದ್ದಿ ಅಥಣಿ : ಅಥಣಿ ತಾಲೂಕಿನ ಪ್ರಸಿದ್ದ ಖಿಳೇಗಾಂವ ಬಸವೇಶ್ವರ ದೇವಸ್ಥಾನದಲ್ಲಿ ಕಳವು ಮಾಡುತ್ತಿರುವಾಗಲೇ ಮೂವರು ಸಿಕ್ಕಿಬಿದ್ದಿದ್ದಾರೆ. ಅಥಣಿ ತಾಲೂಕು ಮದಬಾವಿ ಗ್ರಾಮದ ಅಜಯ ವಿಠಲ ಬಾಗಡಿ (29), ಶ್ರೀನಾಥ ಯುವರಾಜ ಬಾಗಡಿ (16 ), ದಿಲೀಪ ಮೋಹನ ಬಾಗಡಿ(18)ಕಳ್ಳತನದಲ್ಲಿ ಭಾಗಿಯಾದವರು. ದೇವಸ್ಥಾನದ ಕೊಡ, ಗಂಟೆ, ಆರತಿ ಮುಂತಾದ ಬೆಲೆ ಬಾಳುವ ವಸ್ತು ಕದ್ದು ಮಾರಲು ಮುಂದಾಗಿರುವ ಬಗ್ಗೆ ಇವರು ಒಪ್ಪಿಕೊಂಡಿದ್ದು, ಅಥಣಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
YuvaBharataha Latest Kannada News