Breaking News

ಉದಾತ್ತ ದೃಷ್ಟಿಕೋನ ಹೊಂದಿದ್ದ ವಿವೇಕಾನಂದರು

Spread the love

ಉದಾತ್ತ ದೃಷ್ಟಿಕೋನ ಹೊಂದಿದ್ದ ವಿವೇಕಾನಂದರು

ಯುವ ಭಾರತ ಸುದ್ದಿ ಬಸವನಬಾಗೇವಾಡಿ:
ಸ್ವಾಮಿ ವಿವೇಕಾನಂದರು ಕೇವಲ ಹಿಂದೂ ಧರ್ಮದ ಪ್ರತಿಪಾದಕರಷ್ಟೇ ಆಗಿರಲಿಲ್ಲ ಸಮಸ್ತ ಭಾರತವನ್ನು ಎಲ್ಲ ಧರ್ಮದ ಸಮನ್ವಯನದಡಿಯಲ್ಲಿ ಬೆಳಗಿಸಬೇಕೆಂಬ ಉದಾತ್ತ ದೃಷ್ಟಿಕೋನವನ್ನು ಸ್ವಾಮಿ ವಿವೇಕಾನಂದರು ಹೊಂದಿದ್ದರು ಎಂದು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷರಾದ ಶಂಕರಗೌಡ ಎಸ್ ಬಿರಾದಾರ್ ಹೇಳಿದರು.

ಪಟ್ಟಣದ ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ರಾಷ್ಟ್ರೀಯ ಬಸವ ಸೈನ್ಯ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ರಾಷ್ಟ್ರೀಯ ಯುವದಿನದ ಪ್ರಯುಕ್ತ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವದಿನವನ್ನಾಗಿ ಆಚರಿಸಲಾಗುತ್ತಿರುವುದು ನಮ್ಮೆಲ್ಲ ಯುವಕರಿಗೆ ವಿವೇಕಾನಂದರ ಜೀವನ ಸಂದೇಶ ತತ್ವ ಚಿಂತನೆಗಳು ಆದರ್ಶವಾಗಲಿ ಎಂಬುದೇ ಈ ಯುವ ದಿನದ ಉದ್ದೇಶ ದೇಶದ ಸಮಗ್ರ ಇತಿಹಾಸದ ಭವಿಷ್ಯದ ಭಾರತವನ್ನು ಯುವ ಪೀಳಿಗೆ ಕಟ್ಟಿಕೊಡುವ ಕೆಲಸವನ್ನು ಇಂದಿನ ಯುವ ಮುಖಂಡರಾದವರು ಮಾಡಬೇಕಾಗುತ್ತದೆ.

ವಿಶ್ವದಲ್ಲಿಯೇ ಬಹುದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಮಹಾನ್ ರಾಷ್ಟ್ರ ಎನಿಸಿಕೊಂಡಿರುವ ಭಾರತದ ಯುವ ಸಮುದಾಯದಲ್ಲಿ ಅಗಾಧವಾದ ಶಕ್ತಿ ಇದೆ ಆದರೆ ಬೇರೆ ಬೇರೆ ಕಾರಣಕ್ಕೆ ಸಾಮಾಜಿಕ ರಾಜಕೀಯದಿಂದ ಯುವ ಪೀಳಿಗೆ ದೂರ ಸರಿಯುತ್ತಿರುವುದು ದುರದೃಷ್ಟಕರವೇ ಸರಿ ಇಂದಿನ ರಾಜಕಾರಣಿಗಳು ಯುವಕರನ್ನು ಯುವಶಕ್ತಿಯನ್ನು ಚುನಾವಣೆಯ ಸಂದರ್ಭದಲ್ಲಿ ಬಳಸಿಕೊಂಡು ಚುನಾವಣೆಯಲ್ಲಿ ತಾವು ಗೆದ್ದು ಬಂದು ನಂತರ ಯುವಕರಿಗೆ ಒಳ್ಳೆಯ ಮಾರ್ಗದರ್ಶನ ನೀಡುವುದನ್ನು ಬಿಟ್ಟು ತಮ್ಮ ಕುಟುಂಬದ ಸದಸ್ಯರನ್ನ ರಾಜಕಾರಣಕ್ಕಾಗಲಿ ಉದ್ಯೋಗದಲ್ಲಾಗಲಿ ಮುಂದೆ ತರುತ್ತಾರೆ ಆದರೆ ಯುವ ಜನತೆ ತಮ್ಮಲ್ಲಿರುವ ಅಗಾಧವಾದ ಶಕ್ತಿ. ಪ್ರತಿಭೆಯನ್ನೂ ಹೊರ ತೆಗೆಯುವ ಕೆಲಸ ಆಗಬೇಕಾಗಿದೆ ಶಿಕ್ಷಣ ಉದ್ಯೋಗದಲ್ಲಿ ಹೆಚ್ಚು ಅವಕಾಶ ಸಿಗಬೇಕು ಬದುಕಿನ ಶಿಕ್ಷಣ ನೈತಿಕ ಶಿಕ್ಷಣ ದೊರೆಯುವಂತಾಗಬೇಕು.

ನವ ಭಾರತದ ಕಲ್ಪನೆ ಯುವ ಪೀಳಿಗೆ ಆಶಯವಾಗಿದೆ ಹಳೆ ಬೇರಿನ ಜೊತೆ ಹೊಸ ಚಿಗುರು ಸಾಗಬೇಕಾಗುತ್ತದೆ ಹೊಸ ನಾಯಕತ್ವ ಹೊಸ ತಲೆಮಾರಿನ ನಾಯಕರು ಹೊರಬರಬೇಕು ಯಾವುದೇ ಪಕ್ಷದಲ್ಲಿರಲಿ ಯುವಜನರು ಅಧಿಕಾರದ ಚುಕ್ಕಾಣಿ ಹಿಡಿಯುವಂತಾಗಬೇಕು ಹಿರಿಯರ ಸಲಹೆ ಮಾರ್ಗದರ್ಶನದೊಂದಿಗೆ ಹೊಸ ತಲೆಮಾರಿನ ನಾಯಕತ್ವದ ಸೂತ್ರದಂತೆ ನಡೆಯಬೇಕು ಜನರ ಸೇವೆ ಜನಪರ ಹೋರಾಟ ಜನರ ಕಷ್ಟಕ್ಕೆ ಸ್ಪಂದಿಸಿದರೆ ಜನರು ನಮ್ಮನ್ನು ಗುರುತಿಸುತ್ತಾರೆ ಸ್ವಾಮಿ ವಿವೇಕಾನಂದರು ಬದುಕಿದ್ದು 39 ವರ್ಷ ಮಾತ್ರ ಆದರೆ ಜೀವಮಾನದ ಸಮಸ್ತ ಕಾರ್ಯಗಳನ್ನು ಅವರ ಅಲ್ಪಾವಧಿಯಲ್ಲಿ ಮುಗಿಸಿದರು ವಿಶ್ವವನ್ನು ಸುತ್ತಿದರು ಭಾರತದ ಬಗ್ಗೆ ಜೀವನದ ಪ್ರತಿಯೊಂದು ಕ್ಷಣವು ಚಿಂತಿಸಿದರು ಅವರ ಜೀವನವೇ ನಿತ್ಯ ಭಾರತಕ್ಕೆ ಬದುಕಿದ್ದು ಅಕ್ಷರಶ: ಸತ್ಯ ಮನೆಯಲ್ಲಿ ಸುರುವಾದ ಅವರ ನೈತಿಕ ಶಿಕ್ಷಣ ನರೇಂದ್ರನಿಂದ ಸ್ವಾಮಿ ವಿವೇಕಾನಂದ ಆಗುವರೆಗೂ ಬಲವಾಗಿ ಅವರನ್ನು ಗಟ್ಟಿಗೊಳಿಸಿತ್ತು. ಭಾರತ ದೇಶವೆಂದರೆ ಹಾವಡಿಗರ ಮಂತ್ರವಾದಿಗಳ ದೇಶವೆಂಬ ಭ್ರಮೆಯಲ್ಲಿದ್ದ ಪಾಶ್ಚ್ಯಾತ್ಯರಿಗೆ ಭಾರತ ದೇಶದ ಸಂಸ್ಕೃತಿ ಧರ್ಮದ ಬಗ್ಗೆ ಇಡೀ ಜಗತ್ತಿಗೆ ತಿಳಿಸಿದ ಮಹಾನ್ ಸಂತ ಸ್ವಾಮಿ ವಿವೇಕಾನಂದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಮಹಾಂತೇಶ್ ಆದಿಕೊಂಡ ಮಾತನಾಡಿದರು.

ಶ್ರೀಕಾಂತ್ ಕೊಟ್ರಶೆಟ್ಟಿ ಸಂಗಮೇಶ್ ಓಲೇಕಾರ ಬಸವರಾಜ್ ಗೊಳಸಂಗಿ ಬಸವರಾಜ್ ಹಾರಿವಾಳ ಬಸವರಾಜ್ ಕೋಟಿ ಶೇಖರಗೌಡ ಪಾಟೀಲ್ ಜಟ್ಟಿಂಗರಾಯ ಮಾಳಗಾರ ಸುನಿಲ್ ಚಿಕ್ಕೋಂಡ ರವಿಗೌಡ ಚಿಕ್ಕೊಂಡ ಪ್ರಶಾಂತ್ ಮುಂಜಾನೆ ಪ್ರದೀಪ್ ಸುರಗಿಹಳ್ಳಿ ದಶಗಿರ ಕೊರಬೂ ಮಂಜುನಾಥ ಜಾಲಗೇರಿ ಮಂಜುನಾಥ ಚಿಕ್ಕೊಂಡ ಮನ್ನಾನ ಶಾಬಾದಿ ಶಂಕರ ರಜಪೂತ್ ಮಹಾಂತೇಶ ಹೆಬ್ಬಾಳ ಅಣ್ಣು ಪತಂಗಿ ಸಿತಾರಾಮ ಭಜಂತ್ರಿ ವಿಶ್ವನಾಥ ಹಿಟ್ನಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಹಿರೇಬೂದನೂರ : ಭಕ್ತರ ಸನ್ಮಾನ

Spread the loveಹಿರೇಬೂದನೂರ : ಭಕ್ತರ ಸನ್ಮಾನ ಮುರಗೋಡ : ಹಿರೇಬೂದನೂರ ಗ್ರಾಮದ ಶ್ರೀ ಸದ್ಗುರು ಸಂತ ಬಾಳುಮಾಮಾ ದೇವಸ್ಥಾನದ …

Leave a Reply

Your email address will not be published. Required fields are marked *

13 − 12 =