ವಿಆರ್ ಎಲ್ ಬಸ್ ಪಲ್ಟಿ ಸ್ಥಳದಲ್ಲೆ ಇಬ್ಬರ ಸಾವು, 15 ಜನರಿಗೆ ಗಾಯ!!
ಯುವ ಭಾರತ ಸುದ್ದಿ ಹಾವೇರಿ: ವಿಆರ್‌ಎಲ್ ಬಸ್‌ವೊಂದು ಬ್ರಿಡ್ಜ್ ಮೇಲಿಂದ ಸರ್ವೀಸ್ ರಸ್ತೆಗೆ ಪಲ್ಟಿಯಾದ ಪರಿಣಾಮ ಬಸ್ ಚಾಲಕ ಸೇರಿ ಇಬ್ಬರು ಮೃತಪಟ್ಟು, ಹದಿನೈದು ಜನರಿಗೆ ಗಾಯಗಳಾದ ಘಟನೆ ಹಾವೇರಿ ತಾಲೂಕಿನ ದೇವಗಿರಿ ಗ್ರಾಮದ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಶನಿವಾರ ಬೆಳಿಗ್ಗೆ ನಡೆದಿದೆ.
ಬೆಂಗಳೂರಿನಿಂದ ಗೋಕಾಕ್ ನಗರಕ್ಕೆ ಹೊರಟಿತ್ತು ಎಂದು ತಿಳಿದು ಬಂದಿದೆ. ಗಾಯಾಳುಗಳನ್ನ ಹಾವೇರಿ ನಗರದ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಟ್ರಕ್ ಸೈಡ್ ತೆಗೆಯಲು ಹೋಗಿ ಬಸ್ ಹೆದ್ದಾರಿಯಲ್ಲಿ ಆಯ ತಪ್ಪಿ ಕೆಳಗೆ ಬಿದ್ದಿದೆ ಎಂದು ಯುವ ಭಾರತ ಸುದ್ದಿಗೆ ಮಾಹಿತಿ ಸಿಕ್ಕಿದೆ.
YuvaBharataha Latest Kannada News
