Breaking News

ನದಾಫ್ ಪಿಂಜಾರ ಸಮಾಜ ಪ್ರತ್ಯೇಕ ನಿಗಮಕ್ಕೆ ಆಗ್ರಹಿಸಿ ಗೋಕಾಕನಲ್ಲಿ ಪ್ರತಿಭಟನೆ.!

Spread the love

ನದಾಫ್ ಪಿಂಜಾರ ಸಮಾಜ ಪ್ರತ್ಯೇಕ ನಿಗಮಕ್ಕೆ ಆಗ್ರಹಿಸಿ ಗೋಕಾಕನಲ್ಲಿ ಪ್ರತಿಭಟನೆ.!


ಯುವ ಭಾರತ ಸುದ್ದಿ   ಗೋಕಾಕ: ನದಾಫ್ ಪಿಂಜಾರ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ರಚನೆ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ನದಾಫ್, ಪಿಂಜಾರ ಸಂಘದ ಅಧ್ಯಕ್ಷ ತಾಲೂಕಾಧ್ಯಕ್ಷ ಮೀರಾಸಾಬ ನದಾಫ್ ನೇತ್ರತ್ವದಲ್ಲಿ ನದಾಫ್ ಪಿಂಜಾರ ಸಮಾಜದವರು ಗುರುವಾರದಂದು ಪ್ರತಿಭಟನೆ ನಡೆಸಿ, ತಹಶಿಲ್ದಾರರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ವಾಸಿಸುವ ನದಾಫ್, ಪಿಂಜಾರ ಜನಾಂಗವು ಸುಮಾರು ೨೫ ರಿಂದ ೩೦ ಲಕ್ಷಗಳ ಜನಸಂಖ್ಯೆ ಇದ್ದು, ಈ ಜನಾಂಗ ಶೋಷಿತ ಹಾಗೂ ಕಡು ಬಡತನದ ನೆರಳಲ್ಲಿ ಕಷ್ಟಕರ ಜೀವನವನ್ನು ನಡೆಸುತ್ತಿದೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಅತೀ ಹಿಂದುಳಿದ ಜನಾಂಗವಾಗಿದ್ದೇವೆ. ನಮ್ಮ ಜನಾಂಗ ನಗರ ಹಾಗೂ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದು ನಮ್ಮ ಮೂಲ ವೃತ್ತಿ ಗಾದಿ, ಹಗ್ಗ ತಯಾರಿಕೆ ಮಾಡಲಾಗುತ್ತಿದೆ.
ಶಿಕ್ಷಣ ವಂಚಿತರಾಗಿರುವ ನದಾಫ್ ಪಿಂಜಾರ್ ಸಮುದಾಯವು ಶೇಕಡ ೯೦ರಷ್ಟು ಬಡವರಿದ್ದು, ಮಕ್ಕಳಿಗೆ ಶಿಕ್ಷಣ ಕೊಡಿಸುವ ಆರ್ಥಿಕ ಶಕ್ತಿ ಇಲ್ಲದೆ ಹಾಗೂ ಹಾಗೂ ಐಎಎಸ್, ಐಪಿಎಸ್, ಕೆಎಎಸ್ ನಂಥಹ ಅನೇಕ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮುಂದೆ ಬರದೇ ಇರುವುದರಿಂದ ದುಡಿಮೆಗಾಗಿ ಗೌಂಡಿ, ಕೂಲಿ ಕೆಲಸ, ಬೀದಿಗಳಲ್ಲಿ ಹಣ್ಣು, ತರಕಾರಿ ವ್ಯಾಪಾರ, ಆಟೊಗ್ಯಾರೇಜ್ ನಂಥಹ ಸಣ್ಣ–ಪುಟ್ಟ ಉದ್ಯೋಗ ಮಾಡುತ್ತಿವೆ. ಹೀಗಾಗಿ ನಮಗೆ ಸರಕಾರದಿಂದ ಹೆಚ್ಚಿನ ಸೌಲಭ್ಯ ಪಡೆದುಕೊಳ್ಳುವ ಅವಶ್ಯಕತೆ ಇದ್ದು ಸುಮಾರು ೧೦-೧೨ ವರ್ಷಗಳಿಂದ “ಪ್ರತ್ಯೇಕ ನಿಗಮ ಮಂಡಳಿ” ರಚಿಸಲು ಸರಕಾರಕ್ಕೆ ಒತ್ತಾಯಿಸಲಾಗುತ್ತಿದೆ. ಆದರೆ ಇದುವರೆಗೆ ನಮ್ಮ ಬೇಡಿಕೆ ಈಡೇರಿರುವುದಿಲ್ಲ. ನಮ್ಮ ಜನಾಂಗದವರಿಗೆ ಮೀಸಲಾತಿ ಪ್ರಕಾರ ಹಿಂದುಳಿದ ಪ್ರವರ್ಗ-೧ ರಲ್ಲಿ ಬರುವುದರಿಂದ ಈಗಿರುವ ಅಲಸಂಖ್ಯಾತ ಅಭಿವೃದ್ಧಿ ನಿಗಮದಿಂದ ಹಲವಾರು ತಾಂತ್ರಿಕ ದೋಷದಿಂದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದೇವೆ. ಆದಕಾರಣ ನಮ್ಮ ಜನಾಂಗದ ಸರ್ವತೋಮುಖ ಅಭಿವೃದ್ಧಿ ಪಡಿಸಲು ಪ್ರತ್ಯೇಕ ನಿಗಮ ಮಂಡಳಿ ರಚಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಗಜಬರಸಾಬ ನದಾಫ್, ಬಾಬರ ನದಾಫ್, ಪೀರಸಾಬ ನದಾಫ್, ಗೌಸಮಹ್ಮದ ನದಾಫ್, ಮುಬಾರಕ ನದಾಫ್, ಹಸನಸಲಿ ನದಾಫ್, ರಾಜಾಭಕ್ಷ ನದಾಫ್, ದಸ್ತಗೀರಸಾಬ ನದಾಫ್, ಮೋಷಿನ ನದಾಫ್, ಇರ್ಫಾನ ನದಾಫ್, ಯೂನುಸ್ ನದಾಫ್, ಮಹ್ಮದ ನದಾಫ್, ನೂರಹ್ಮದ ನದಾಫ್ ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

3 × one =