Breaking News

ಅತ್ಯಂತ ಕಡಿಮೆ ಅಂತರದಲ್ಲಿ ಗೆದ್ದ ಅಭ್ಯರ್ಥಿಗಳು ಯಾರು ?

Spread the love

ಅತ್ಯಂತ ಕಡಿಮೆ ಅಂತರದಲ್ಲಿ ಗೆದ್ದ ಅಭ್ಯರ್ಥಿಗಳು ಯಾರು ?

ಬೆಂಗಳೂರು :
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಅಂತರದಲ್ಲಿ ಸೋಲು ಕಂಡವರ ಸಂಖ್ಯೆ ಸಾಕಷ್ಟಿದೆ. ಬೆಂಗಳೂರಿನ ಜಯನಗರದಲ್ಲಿ ಮರು ಮತ ಎಣಿಕೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಬಿಜೆಪಿ ವಿರುದ್ಧ ಕೇವಲ 16 ಮತಗಳ ಅಂತರದಿಂದ ಸೋತಿದ್ದಾರೆ.
ಹಲವು ಕ್ಷೇತ್ರಗಳಲ್ಲಿ ಕೊನೆಯವರೆಗೂ ನಡೆದ ಹಾವು ಏಣಿ ಆಟದಲ್ಲಿ ವಿಜಯದ ಅದೃಷ್ಟ ಲಕ್ಷ್ಮಿಯು ಅಂತಿಮವಾಗಿ ಒಬ್ಬರಿಗೆ ಒಲಿದಿದ್ದಾಳೆ.
ಕಡಿಮೆ ಅಂತರದಲ್ಲಿ ಗೆಲುವು ನಿರ್ಧಾರವಾದ ಕ್ಷೇತ್ರಗಳಲ್ಲಿ ಎರಡು ಅಥವಾ ಮೂರು ಬಾರಿ ಮತ ಎಣಿಕೆಯಾಗಿದೆ. ರಾಜ್ಯದ 224 ಕ್ಷೇತ್ರಗಳ ಪೈಕಿ ಬಹುತೇಕ ಕಡೆ ಮಧ್ಯಾಹ್ನವೇ ಫಲಿತಾಂಶ ಬಂದಿದ್ದರೂ, 10 ಕ್ಷೇತ್ರಗಳಲ್ಲಿ ಸಂಜೆ 6/7 ಗಂಟೆಯಾದರೂ ಫಲಿತಾಂಶ ಪ್ರಕಟವಾಗಿರಲಿಲ್ಲ. ಒಂದು ಸಾವಿರ ಮತಗಳ ಅಂತರದಿಂದ ಹಿಡಿದು ಹದಿನಾರು ಮತಗಳ ಅಂತದಲ್ಲಿಯೂ ವಿಜಯಶಾಲಿಗಳಾಗಿದ್ದಾರೆ.

ಗೆದ್ದವರು ನಿಟ್ಟುಸಿರುಬಿಟ್ಟರೆ ಸೋತವರು ನಿರಾಸೆಯಿಂದ ಕಣ್ಣೀರು ಹಾಕಿದ್ದಾರೆ.
ಅತ್ಯಂತ ಕಡಿಮೆ ಅಂತದಲ್ಲಿ ಗೆದ್ದ ಕ್ಷೇತ್ರಗಳು…
ಬೆಂಗಳೂರು ಜಯನಗರ ವಿಧಾನಸಭಾ ಕ್ಷೇತ್ರ- ಕಾಂಗ್ರೆಸ್‌ ಸೌಮ್ಯಾ ರೆಡ್ಡಿ ಅವರು ಕೇವಲ 16 ಮತಗಳ ಅಂತದಲ್ಲಿ ಸೋಲು ಅನುಭವಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಸಿ ಕೆ ರಾಮಮೂರ್ತಿ ಗೆಲುವಿನ ನಗೆ ಬೀರಿದ್ದಾರೆ. ಮೊದಲು ಸೌಮ್ಯ ರೆಡ್ಡಿ ಅವರು 294 ಮತಗಳ ಅಂತರದಿಂದ ಮುಂದಿದ್ದರು. ಆದರೆ ಅಂಚೆ ಮತಗಳ ಮರು ಎಣಿಕೆ ವೇಳೆ ಬಿಜೆಪಿಯ ಸಿ ಕೆ ರಾಮಮೂರ್ತಿ ಅವರು 16 ಮತಗಳ ಮುನ್ನಡೆ ಪಡೆದರು. ಸೌಮ್ಯ ರೆಡ್ಡಿ ಅವರು ಗೆದ್ದು ಸೋತಿದ್ದಾರೆ ಹಾಗೂ ರಾಮಮೂರ್ತಿ ಅವರು ಸೋತು ಗೆದ್ದಿದ್ದಾರೆ.

ಬೆಂಗಳೂರು ಗಾಂಧಿ ನಗರ ವಿಧಾನಸಭಾ ಕ್ಷೇತ್ರ –ಕಾಂಗ್ರೆಸ್‌ ಅಭ್ಯರ್ಥಿದಿನೇಶ್ ಗುಂಡೂರಾವ್ 105 ಮತಗಳ ಅಂತದಲ್ಲಿ ಗೆಲುವು ಸಾಧಿಸಿದ್ದಾರೆ. ಇದೇ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಪ್ತಗಿರಿ ಗೌಡ ಎ.ಆರ್. ಅವರಿಗೆ ಅದೃಷ್ಟ ಲಕ್ಷ್ಮೀ ಕೊನೆ ಕ್ಷಣದಲ್ಲಿ ಕೈಕೊಟ್ಟಿದ್ದಾಳೆ.
ಶೃಂಗೇರಿ ವಿಧಾನಸಭಾ ಕ್ಷೇತ್ರ- ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡ ಅವರು 201 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ ವಿರುದ್ಧ ಜಯಗಳಿಸಿದ್ದಾರೆ. ಮತ ಎಣಿಕೆ ಸಂದರ್ಭದಲ್ಲಿ ಕೊನೆಯ ಸುತ್ತಿನ ವರೆಗೂ ವಿಜಯ ಲಕ್ಷ್ಮೀ ಯಾರಿಗೆ ಒಲಿಯಲಿದ್ದಾಳೆಂದು ಗೊತ್ತಿರಲಿಲ್ಲ.

ಮಾಲೂರು ವಿಧಾನಸಭಾ ಕ್ಷೇತ್ರ.-ಕಾಂಗ್ರೆಸ್‌ ಅಭ್ಯರ್ಥಿಯಾದ ಕೆ.ವೈ.ನಂಜೇಗೌಡ 248 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕೆ.ಎಸ್.ಮಂಜುನಾಥಗೌಡ ಕಡಿಮೆ ಅಂತರದಲ್ಲಿ ಸೋಲು ಅನುಭವಿಸಿದ್ದಾರೆ. ಅದೃಷ್ಟ ನಂಜೇಗೌಡ ಅವರ ಕೈ ಹಿಡಿದಿದೆ.
ಕುಮಟಾ ವಿಧಾನಸಭಾ ಕ್ಷೇತ್ರ -ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಅವರು ಕೇವಲ 676 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಸೋತಿದ್ದಾರೆ. ಮೊದಲೆಲ್ಲ ಮುನ್ನಡೆಯಲ್ಲಿದ್ದ ಸೂರಜ ನಾಯ್ಕ ಸೋನಿ ಅವರು ಕೊನೆಯ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದರು.
ಮೂಡಿಗೆರೆ ವಿಧಾನಸಭಾ ಕ್ಷೇತ್ರ – ಕಾಂಗ್ರೆಸ್‌ ಅಭ್ಯರ್ಥಿ ನಯನಾ ಮೋಟಮ್ಮ 722 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಇದೇ ಕ್ಷೇತ್ರದ ಬಿಜೆಪಿಯಿಂದ ಸ್ಪರ್ಧಿಸಿದ್ದ ದೀಪಕ ದೊಡ್ಡಯ್ಯ ಸೋತಿದ್ದಾರೆ.
ಚಿಂಚೋಳಿ ವಿಧಾನಸಭಾ ಕ್ಷೇತ್ರ-ಬಿಜೆಪಿ ಅಭ್ಯರ್ಥಿ ಅವಿನಾಶ್ ಉಮೇಶ್ ಜಾಧವ್ 858 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ವಿ ರಾಥೋಡ್ ಸೋತಿದ್ದಾರೆ.
ಜಗಳೂರು ವಿಧಾನಸಭಾ ಕ್ಷೇತ್ರ – ಕಾಂಗ್ರೆಸ್‌ ಅಭ್ಯರ್ಥಿ ಬಿ.ದೇವೇಂದ್ರಪ್ಪ ಕೇವಲ 874 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಬಿಜೆಪಿ ಎಸ್.ವಿ.ರಾಮಚಂದ್ರ ಸೋತಿದ್ದಾರೆ.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ – ಶೈಲೇಂದ್ರ ಬೆಲ್ದಾಳೆ ಬಿಜೆಪಿ ಅಭ್ಯರ್ಥಿಯು 1,263 ಮತಗಳಿಂದ ವಿಜಯಶಾಲಿಯಾಗಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್ ಖೇಣಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.
ಹಡಗಲಿ ವಿಧಾನಸಭಾ ಕ್ಷೇತ್ರ – ಬಿಜೆಪಿ ಅಭ್ಯರ್ಥಿ ಕೃಷ್ಣ ನಾಯಕ 1444 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಪಿ.ಟಿ.ಪರಮೇಶ್ವರ ನಾಯ್ಕ್ ಸೋಲುಂಡಿದ್ದಾರೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

5 × 1 =