Breaking News

ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ-ಸಂದೀಪ ದೇಶಪಾಂಡೆ.!

Spread the love

ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ-ಸಂದೀಪ ದೇಶಪಾಂಡೆ.!


ಗೋಕಾಕ: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾರಿಗೆ ತಂದಿರುವ ಜನಪ್ರೀಯ ಯೋಜನೆಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಯವರೆಗೆ ತಲುಪಿಸಲು ಕಾರ್ಯಕರ್ತರು ಶ್ರಮಿಸಬೇಕಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ ಹೇಳಿದರು.
ಅವರು, ನಗರದ ಶಾಸಕ ರಮೇಶ ಜಾರಕಿಹೊಳಿ ಅವರ ಗೃಹಕಚೇರಿಯಲ್ಲಿ ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಲದ ಕಾರ್ಯಕಾರಣಿ ಸಭೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ದೇಶದಲ್ಲಿ ಕಾಂಗ್ರೇಸ್ ಪಕ್ಷ ೫೦ವರ್ಷಗಳ ಆಡಳಿತ ನಡೆಸಿದೆ. ಕಾಂಗ್ರೇಸ್ ತನ್ನ ಆಡಳಿತದೂದ್ದಕ್ಕೂ ಅನೇಕ ಹಗರಣಗಳನ್ನು ಮಾಡಿ, ದೇಶದ ಸಂಪತ್ತನ್ನು ಲೂಟಿ ಹೊಡಿದಿದೆ. ಈಗ ರಾಹುಲ್ ಮತ್ತು ಸೋನಿಯಾ ಗಾಂಧಿಯವರು ಹಗರಣದಲ್ಲಿ ಸಿಲುಕಿದ್ದು ಕಾಂಗ್ರೇಸ್ ಲೂಟಿಕೋರ ಪಕ್ಷ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ ಎಂದು ಟೀಕಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಅಧಿಕಾರವನ್ನು ಬಡವರ, ದೀನ ದಲಿತರ, ಹಿಂದುಳಿದವರ ಧ್ವನಿಯಾಗಿ ದೇಶ ಸರ್ವತೋಮುಖ ಅಭಿವೃದ್ಧಿಗಾಗಿ ಸತತ ದಿನದ ೧೮ ಗಂಟೆಗಳ ಕಾಲ ದುಡಿಯುತ್ತಿದ್ದಾರೆ. ದೇಶದಲ್ಲಿ ಮತ್ತು ರಾಜ್ಯದಲ್ಲಿರುವ ಡಬಲ್ ಇಂಜನ್ ಸರಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.
ಒಬಿಸಿ ಮೊರ್ಚಾ ರಾಷ್ಟಿçÃಯ ಕಾರ್ಯಕಾರಿಣಿ ಸದಸ್ಯ ಲಕ್ಷö್ಮಣ ತಪಸಿ ಪ್ರಾಸ್ಥಾವಿಕವಾಗಿ ಮಾತನಾಡಿ, ಪ್ರತಿಯೊಂದು ಮೋರ್ಚಾಗಳ ಪದಾಧಿಕಾರಿಗಳು ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಯನ್ನು ಮಾಡುವದರ ಜೊತೆಗೆ ತಾವು ಒಬ್ಬರು ಪಕ್ಷದ ಮುಖಂಡತ್ವ ವಹಿಸಿಕೊಂಡು ಪಕ್ಷ ಕೊಟ್ಟಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ, ಸಂಘಟನಾತ್ಮಕ ವಿಷಯಗಳ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಉಪಾಧ್ಯಕ್ಷ ಬಸನಗೌಡ ಕೊಳದುರ, ಜಿಲ್ಲಾ ಕಾರ್ಯದರ್ಶಿ ಬಸವರಾಜ ಹಿರೇಮಠ, ಗ್ರಾಮೀಣ ಮಂಡಲ ಉಪಾಧ್ಯಕ್ಷ ಪುಂಡಲೀಕ ವಣ್ಣೂರ, ಪ್ರಧಾನ ಕಾರ್ಯದರ್ಶಿಗಳಾದ ತವನರಾಜ ಬೆನ್ನಾಡಿ, ಹಾಲಪ್ಪ ಕರಿಗಾರ, ಸುರೇಶ ಪಾಟೀಲ, ಲಕ್ಕಪ್ಪ ತಹಶೀಲ್ದಾರ, ಬಸಗೌಡ ಶಿರಗಾವಿ, ಲಕ್ಷö್ಮಣ ಖಡಕಭಾಂವಿ, ಮಂಜುನಾಥ ಪ್ರಭುನಟ್ಟಿ, ಮಲ್ಲಿಕಾರ್ಜುನ ತಳವಾರ, ರವಿ ಮಡ್ಡೆಪ್ಪಗೋಳ, ಮಂಜುನಾಥ ಮಾವರಕರ, ರಾಜೇಶ್ವರಿ ಒಡೆಯರ, ಜ್ಯೋತಿ ಕೋಲಾರ, ಸುರೇಶ ಪತ್ತಾರ, ಶಫಿ ಜಮಾದಾರ, ಲಕ್ಷö್ಮಣ ತಳ್ಳಿ, ವಿರೇಂದ್ರ ಎಕ್ಕೇರಿಮಠ ಸೇರಿದಂತೆ ಮಂಡಲಗಳ ಪದಾಧಿಕಾರಿಗಳು, ವಿವಿಧ ಮೋರ್ಚಾ ಪದಾಧಿಕಾರಿಗಳು ಇದ್ದರು.
ಕಿರಣ ಡಮಾಮಗರ ಸ್ವಾಗತಿಸಿದರು, ಲಕ್ಕಪ್ಪ ಭಂಡಿ ನಿರೂಪಿಸಿದರು, ಮಲ್ಲಿಕಾರ್ಜುನ ಪಾಟೀಲ ವಂದಿಸಿದರು.


Spread the love

About Yuva Bharatha

Check Also

ಅಕ್ಕಾ ಅಂದ್ರೆ ಅವರೇ ಅಂತ ಯಾಕೆ ತಿಳ್ಕೊತೀರಿ, ಪೆಗ್ ಅಂದ್ರೆ ಎನರ್ಜಿ ಡ್ರಿಂಕ್-ಮಾಜಿ ಶಾಸಕ ಸಂಜಯ ಪಾಟೀಲ.!

Spread the loveನಾನು ಭಾಷಣದಲ್ಲಿ ಹೆಬ್ಬಾಳಕರ ಹೆಸರನ್ನೆ ತಗೊಂಡಿಲ್ಲ. -ಮಾಜಿ ಶಾಸಕ ಸಂಜಯ ಪಾಟೀಲ.! ಯುವಭಾರತ ಸುದ್ದಿ ಬೆಳಗಾವಿ: ನಾನು …

Leave a Reply

Your email address will not be published. Required fields are marked *

1 × 3 =