ಉಪ್ಪಾರ ಸಮಾಜವನ್ನು ಎಸ್‌ಟಿಗೆ ಸೇರಿಸುವಂತೆ ಒತ್ತಾಯಿಸಿ ದಿ.13ರಂದು ಪ್ರತಿಭಟನೆ.!
ಗೋಕಾಕ: ಉಪ್ಪಾರ ಸಮಾಜವನ್ನು ಎಸ್‌ಟಿಗೆ ಸೇರಿಸುವಂತೆ ಒತ್ತಾಯಿಸಿ ಇದೆ ದಿ.13 ರಂದು ಪ್ರತಿಭಟನೆ ಮುಖಾಂತರ ರಾಜ್ಯ ಸರಕಾರವನ್ನು ಎಚ್ಚರಿಸಲು ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಗೋಕಾಕ ತಾಲೂಕ ಉಪ್ಪಾರ ಸಂಘದ ಅಧ್ಯಕ್ಷ ಶಿವಪುತ್ರ ಜಕಬಾಳ ಹೇಳಿದರು.
ಅವರು, ನಗರದ ಉಪ್ಪಾರ ಗಲ್ಲಿಯ ಉಪ್ಪಾರ (ಲೇಪಾಕ್ಷಿ) ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯನ್ನು ಉದ್ಧೇಶಿಸಿ ಮಾತನಾಡಿ, ಉಪ್ಪಾರ ಸಮಾಜ ಆರ್ಥಿಕವಾಗಿ, ಶೈಕ್ಷಿಣಕಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿದ್ದು ರಾಜ್ಯ ಸರಕಾರ ಕುಲಶಾಸ್ತಿçÃಯ ಅಧ್ಯಯನ ಪರಿಶೀಲನೆ ಮಾಡಿ ಎಸ್‌ಟಿಗೆ ಸೇರ್ಪಡೆ ಮಾಡಬೇಕು ಎಂದರು.
ಎಸ್‌ಸಿ ಎಸ್‌ಟಿಗಿಂತಲೂ ಹಿಂದುಳಿದ ಉಪ್ಪಾರ ಸಮಾಜವನ್ನು ಪ್ರವರ್ಗದಲ್ಲಿ ಸೇರಿಸಲಾಗಿದೆ. ರಾಜ್ಯದಲ್ಲಿ ಆಡಳಿತ ನಡೆಸಿರುವ ಎಲ್ಲ ಸರಕಾರಗಳು ಉಪ್ಪಾರ ಸಮಾಜಕ್ಕೆ ಸೂಕ್ತವಾದ ಮೀಸಲಾತಿ ಸ್ಥಾನ ಮಾನ ನೀಡಲು ಮುಂದೆ ಬಂದಿಲ್ಲ. ರಾಜ್ಯದ ಬಸವರಾಜ ಬೊಮ್ಮಾಯಿ ಅವರ ನೇತ್ರತ್ವದ ಸರಕಾರ ಈ ಕೂಡಲೇ ಎಸ್‌ಟಿಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಮುಖಾಂತರ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ತೀರ್ಮಾನಿಸಿದ್ದು ತಾಲೂಕಿನ ಉಪ್ಪಾರ ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಗೋಕಾಕ ತಾಲೂಕ ಉಪ್ಪಾರ ಸಂಘದ ಉಪಾಧ್ಯಕ್ಷರುಗಳಾದ ಕುಶಾಲ ಗುಡೆನ್ನವರ, ಅಡಿವೆಪ್ಪ ಕಿತ್ತೂರ, ಕಾರ್ಯದರ್ಶಿಗಳಾದ ವಿಠ್ಠಲ ಮೆಳವಂಕಿ, ಯಲ್ಲಪ್ಪ ದುರದುಂಡಿ, ನಗರಸಭೆ ಸದಸ್ಯ ಭಗವಂತ ಹುಳ್ಳಿ, ಮುಖಂಡರುಗಳಾದ ಎಸ್ ಎಮ್ ಹತ್ತಿಕಟಗಿ, ವಿಠ್ಠಲ ಸವದತ್ತಿ, ಪರಸಪ್ಪ ಚೂನನ್ನವರ, ನಿಂಗಪ್ಪ ಮಾಳ್ಯಾಗೋಳ, ಯಲ್ಲಪ್ಪ ಸುಳ್ಳನವರ, ಅಶೋಕ ಗೋಣಿ, ಲಕ್ಷö್ಮಣ ಖಡಕಭಾಂಬಿ, ಮಾಯಪ್ಪ ತಹಶೀಲ್ದಾರ, ಬಸವರಾಜ ಖಾನಪ್ಪನವರ, ವಾಯ್ ಎಲ್ ಹೆಜ್ಜೆಗಾರ, ಮಲ್ಲಿಕಾರ್ಜುನ ಚೌಕಾಶಿ, ಭೀಮಶಿ ಭರಮನ್ನವರ, ಸದಾಶಿವ ಗುದಗಗೋಳ, ಮುತ್ತೆಪ್ಪ ಕುಳ್ಳೂರ, ಗಂಗಾಧರ ಭಟ್ಟಿ, ಶಂಕರ ಪಾಟೀಲ, ಭೀಮಶಿ ಮಾಳ್ಯಾಗೋಳ, ಸತ್ತೆಪ್ಪ ಬಬಲಿ, ದಶರಥ ಮದಲಬಾವಿ, ಯಲ್ಲಪ್ಪ ಬೂದಿಗೊಪ್ಪ ಸೇರಿದಂತೆ ನೂರಾರು ಜನ ಸಮಾಜ ಭಾಂದವರು ಉಪಸ್ಥಿತರಿದ್ದರು.