ಬಿಜೆಪಿ ಅಲ್ಪಸಂಖ್ಯಾತ ಕಾರ್ಯಕರ್ತರ ಸಮಾವೇಶಕ್ಕೆ ಕ್ಷಣಗಣನೆ
ಯುವ ಭಾರತ ಸುದ್ದಿ ಗೋಕಾಕ :
ಬಿಜೆಪಿ ವತಿಯಿಂದ ಗೋಕಾಕ ಮತಕ್ಷೇತ್ರದ ಅಲ್ಪಸಂಖ್ಯಾತರ ಕಾರ್ಯಕರ್ತರ ಸಮಾವೇಶ ಗುರುವಾರ ಸಂಜೆ ಇಲ್ಲಿನ ಕೊಣ್ಣೂರ ರಂಗಮಂದಿರ ಕ್ರೀಡಾಂಗಣದಲ್ಲಿ ನಡೆಯಲಿದೆ. ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಗೆಲ್ಲಿಸುವ ತಂತ್ರವಾಗಿ ರಾಜ್ಯದಲ್ಲೇ ಮೊದಲ ಬಾರಿಗೆ ಅಲ್ಪಸಂಖ್ಯಾತರೇ ಈ ಸಮಾವೇಶ ನಡೆಸಿಕೊಡುತ್ತಿರುವುದು ವಿಶೇಷವಾಗಿದೆ.
ಹತ್ತು ಸಾವಿರಕ್ಕೂ ಅಧಿಕ ಅಲ್ಪಸಂಖ್ಯಾತ ಬಾಂಧವರು ಈ ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ರಮೇಶ ಜಾರಕಿಹೊಳಿ ಅವರನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಿಸಲು ನಿರ್ಧರಿಸಿದ್ದು ಆ ಪ್ರಯತ್ನವಾಗಿ ಈ ಸಮಾವೇಶ ಆಯೋಜಿತವಾಗಿದೆ.