ಉಪ್ಪಾರ ಸಮಾಜವನ್ನು ಎಸ್ಟಿಗೆ ಸೇರಿಸುವಂತೆ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಮನವಿ.!
ಯುವ ಭಾರತ ಸುದ್ದಿ ಗೋಕಾಕ: ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನ ಹಿನ್ನಲೆ ಉಪ್ಪಾರ ಸಮಾಜವನ್ನು ಎಸ್ಟಿಗೆ ಸೇರಿಸುವಂತೆ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ರವಿವಾರದಂದು ಶಾಸಕರ ಗೃಹ ಕಚೇರಿಯಲ್ಲಿ ಗೋಕಾಕ ತಾಲೂಕ ಉಪ್ಪಾರ ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರು ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ರಮೇಶ ಜಾರಕಿಹೊಳಿ ಅವರು, ಉಪ್ಪಾರ ಸಮಾಜದ ಜೊತೆಗೆ ಇನ್ನು ಹಿಂದುಳಿದ ಸಮಾಜಗಳ ಮೀಸಲಾತಿ ಬಗ್ಗೆ ಸದನದಲ್ಲಿ ಚರ್ಚಿಸಲಾಗುವದು. ಉಪ್ಪಾರ ಸಮಾಜದ ಅಧಿವೇಶನದಲ್ಲಿ ಧ್ವನಿ ಎತ್ತಲಾಗುವದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಟಿ ಆರ್ ಕಾಗಲ, ವಿಠ್ಠಲ ಸವದತ್ತಿ, ಶಂಕರ ಬಿಲಕುಂದಿ, ಗೋಕಾಕ ತಾಲೂಕ ಉಪ್ಪಾರ ಸಂಘದ ಅಧ್ಯಕ್ಷ ಶಿವಪುತ್ರ ಜಕಬಾಳ, ಉಪಾಧ್ಯಕ್ಷ ಕುಶಾಲ ಗುಡೆನ್ನವರ, ಹಿರಿಯ ನ್ಯಾಯವಾದಿ ಎಸ್ ಎಮ್ ಹತ್ತಿಕಟಗಿ, ಬಿಜೆಪಿ ನಗರಾಧ್ಯಕ್ಷ ಭೀಮಶಿ ಭರಮನ್ನವರ, ಅಶೋಕ ಗೋಣಿ, ಯಲ್ಲಪ್ಪ ಸುಳ್ಳನವರ, ಎಸ್ ಎಸ್ ಪಾಟೀಲ, ಬಸವರಾಜ ಖಾನಪ್ಪನವರ, ಯಲ್ಲಪ್ಪ ದುರದುಂಡಿ, ಹನಮಂತ ನಿಲಜಗಿ, ಯಲ್ಲಪ್ಪ ಹೆಜ್ಜೆಗಾರ, ನಿಂಗಪ್ಪ ಮಾಳ್ಯಾಗೋಳ, ಮಾಯಪ್ಪ ತಹಶೀಲದಾರ, ಅಡಿವೆಪ್ಪ ಕಿತ್ತೂರ, ಭಟ್ಟಿ, ಲಕ್ಕಪ್ಪ ಭೂಮನ್ನವರ ಸೇರಿದಂತೆ ಸಮಾಜ ಭಾಂದವರು ಇದ್ದರು.