ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವಕನ ಶವ ಪತ್ತೆ.!

ಯುವ ಭಾರತ ಸುದ್ದಿ ಗೋಕಾಕ: ಕಳೆದ ಶುಕ್ರವಾರದಂದು ತಾಲೂಕಿನ ಕೊಳವಿ ಗ್ರಾಮದಲ್ಲಿ ಮಧ್ಯಾಹ್ನ ಸುರಿದ ಭಾರಿ ಮಳೆಯಲ್ಲಿ ಹಳ್ಳದ ಬ್ರೀಡ್ಜ್ ಮೇಲಿಂದ ದಾಟುವಾಗ ಕೊಚ್ಚಿ ಹೋಗಿದ್ದ ಯುವಕ ಶವ ರವಿವಾರದಂದು ಬೆಳಿಗ್ಗೆ ಪ್ತೆಯಾಗಿದೆ.
ಹಳ್ಳದಲ್ಲಿ ಕೊಚ್ಚಿಹೊದ ಯುವಕ ಕೊಳವಿ ಗ್ರಾಮದ ದುಂಡಪ್ಪ ಬಸಪ್ಪ ಮಾಲದಿನ್ನಿ 25 ಹಳ್ಳದ ಪಕ್ಕದಲ್ಲಿರುವ ತನ್ನ ಜಮೀನಿಗೆ ಹೋಗುವ ಸಂದರ್ಭದಲ್ಲಿ ಬ್ರೀಡ್ಜ ಮೇಲಿಂದ ದಾಟುವಾಗ ಹಳ್ಳದಲ್ಲಿ ಏಕಾಏಕಿ ಬೃಹತ್ ಪ್ರಮಾಣದ ನೀರು ಹರಿದು ಬಂದಿದ್ದು, ಯುವಕ ಹಳ್ಳದ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದ, ಕಳೆದ ಮೂರು ದಿನಗಳಿಂದ ಯುವಕ ಪತ್ತೆಗಾಗಿ ಅಗ್ನಿ ಶಾಮಕ ದಳ ಮತ್ತು ಪೋಲಿಸ್ ಸಿಬ್ಬಂಧಿ ಶೋಧ ಕಾರ್ಯದಲ್ಲಿ ತೋಡಗಿದ್ದರು. ರವಿವಾರದಂದು ಬೆಳಿಗ್ಗೆ ಕೊಳವಿ-ಬೆಣಚಿಮರ್ಡಿ ಹಳ್ಳದ ಮಾರ್ಗ ಮಧ್ಯೆ ಯುವಕ ಶವ ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಗೋಕಾಕ ಗ್ರಾಮೀಣ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ.
YuvaBharataha Latest Kannada News