Breaking News

ಮೇಲ್ಮನಹಟ್ಟಿ ಗ್ರಾಮದಲ್ಲಿ 2ಕೋಟಿ ರೂಗಳ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರಿಂದ ಚಾಲನೆ.!

Spread the love

ಮೇಲ್ಮನಹಟ್ಟಿ ಗ್ರಾಮದಲ್ಲಿ 2ಕೋಟಿ ರೂಗಳ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರಿಂದ ಚಾಲನೆ.!

 

 

ಯುವ ಭಾರತ ಸುದ್ದಿ  ಗೋಕಾಕ: ತಾಲೂಕಿನ ಮೇಲ್ಮನಹಟ್ಟಿ ಗ್ರಾಮದಲ್ಲಿ 2ಕೋಟಿ ರೂಗಳ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರು ಚಾಲನೆ ನೀಡಿದರು.

ಸ್ವಚ್ಛ ಭಾರತ ಮಿಷನದಡಿ ೨೦ಲಕ್ಷ ರೂ ವೆಚ್ಚದ ಘನತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟನೆ, ಸ್ವಚ್ಛ ಭಾರತ ಮಿಷನದಡಿ ೫.೫ಲಕ್ಷ ರೂ ವೆಚ್ಚದ ಕಸ ವಿಲೇವಾರಿ ವಾಹನ ಪೂಜೆ, ೩.೫ಲಕ್ಷ ರೂ ವೆಚ್ಚದಲ್ಲಿ ಕಸದ ಡಬ್ಬಿಗಳ ವಿತರಣೆ, ಅಮೃತ ಗ್ರಾಮ ಯೋಜನೆಯಡಿ ೧೦ ಲಕ್ಷ ರೂ ವೆಚ್ಚದಲ್ಲಿ ಡಿಜಿಟಲ್ ಗ್ರಂಥಾಲಯ, ಶಾಸಕ ಅನುದಾನದಡಿ ೮ಲಕ್ಷ ರೂ ವೆಚ್ಚದಲ್ಲಿ ವ್ಯಾಯಾಮಶಾಲೆ, ನೀರಾವರಿ ನಿಗಮದ ಎಸ್‌ಸಿಪಿ ಟಿಎಸ್‌ಪಿ ಯೋಜನೆಯಡಿ ೩೦ಲಕ್ಷ ರೂ ವೆಚ್ಚದ ಎರಡು ಸಮುದಾಯ ಭವನ, ೧೧.೭ಲಕ್ಷ ರೂ ವೆಚ್ಚದಲ್ಲಿ ಆಹಾರ ಧಾನ್ಯಗಳ ಗೋದಾಮಿನ ಗುದ್ದಲಿ ಪೂಜೆ, ೧೭ಲಕ್ಷ ವೆಚ್ಚದಲ್ಲಿ ಸಚಿಜೀವಿನಿ ಶೇಡ್ ಪೂಜೆ, ೧೧ಲಕ್ಷ ರೂ ವೆಚ್ಚದ ಕನ್ನಡ ಗಂಡು ಮಕ್ಕಳ ಶಾಲೆಯ ಅಡುಗೆ ಕೊಣೆ, ೧೧ಲಕ್ಷ ವೆಚ್ಚದಲ್ಲಿ ಎರಡು ಹೈಟೇಕ ಶಾಲಾ ಶೌಚಾಲಯಗಳ ಉದ್ಘಾಟನೆ ಹಾಗೂ ೭೪ಲಕ್ಷ ರೂ ವೆಚ್ಚದಲ್ಲಿ ಜಿಲ್ಲಾ ಪಂಚಾಯತ ಅನುದಾನದಡಿ ೩ ಮತ್ತು ಉದ್ಯೋಗ ಖಾತ್ರಿ ಯೋಜನೆಯಡಿ ೭ ಸೇರಿ ಒಟ್ಟು ೧೦ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.
ಇದೆ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರು ಕಸ ವಿಲೇವಾರಿ ವಾಹನವನ್ನು ಚಲಾಯಿಸುವ ಮೂಲಕ ನೂತನ ವಾಹನ ಉದ್ಘಾಟಿಸಿ ಚಾಲನೆ ನೀಡಿ ಸ್ಥಳೀಯರ ಮನ ಗೆದ್ದರು.
ಗ್ರಾಪಂ ಅಧ್ಯಕ್ಷೆ ಪಾರ್ವತಿ ಯಲಿಗಾರ, ಉಪಾಧ್ಯಕ್ಷೆ ಲಗಮವ್ವ ಗೌಡನವರ, ಬಾಳನಾಯ್ಕ ನಾಯ್ಕ, ನಿಂಗಪ್ಪ ಕುರಬೇಟ, ಶಂಕರ ಕುರಬೇಟ, ಶಿವಲಿಂಗ ಪ್ರಭುನಟ್ಟಿ, ಬಸಗೌಡ ಪಾಟೀಲ, ಅಶೋಕ ಕಬಾಡಗಿ, ಬೋರಪ್ಪ ಬಂಗೆನ್ನವರ, ಗುರುಪಾದ ತಳ್ಳಿ ಸೇರಿದಂತೆ ಗ್ರಾಪಂ ಸದಸ್ಯರು, ಗ್ರಾಮದ ಹಿರಿಯರು ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

ಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಪತ್ರಿಕಾ ವಿತರಕರ ಪಾತ್ರ ಬಹಳ ದೊಡ್ಡದು.- ರಮೇಶ ಜಾರಕಿಹೊಳಿ.!

Spread the loveಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಪತ್ರಿಕಾ ವಿತರಕರ ಪಾತ್ರ ಬಹಳ ದೊಡ್ಡದು.- ರಮೇಶ ಜಾರಕಿಹೊಳಿ.! ಗೋಕಾಕ: ಪತ್ರಿಕೆಗಳನ್ನು ಮನೆಗಳಿಗೆ ಸರಿಯಾದ …

Leave a Reply

Your email address will not be published. Required fields are marked *

two × 5 =