Breaking News

ಬೆಳಗಾವಿ ಶಿಕ್ಷಣ ಸಂಸ್ಥೆಯ ಶ್ರೀಮತಿ ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟನೆ

Spread the love

ಬೆಳಗಾವಿ ಶಿಕ್ಷಣ ಸಂಸ್ಥೆಯ ಶ್ರೀಮತಿ ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟನೆ

ಶಾಲಾ-ಕಾಲೇಜಿನಲ್ಲಿ ಸ್ನೇಹ ಸಮ್ಮೇಳನದ ಆಯೋಜನೆಯಿಂದ ಸಾಮಾಜಿಕ ಬಂಧುತ್ವ ಬೆಳೆಯುತ್ತದೆ: ಸಂಸದೆ ಮಂಗಲಾ ಎಸ್. ಅಂಗಡಿ

ಯುವ ಭಾರತ ಸುದ್ದಿ ಬೆಳಗಾವಿ :  ಶಾಲಾ-ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮಕ್ಕೆ ನಾನು ಆಗಮಿಸಿದರಿಂದ ನನ್ನ ಶಾಲೆಯ ಜೀವನ ನನಗೆ ನೆನಪಾಯಿತು. ಶಾಲಾ-ಕಾಲೇಜುಗಳಲ್ಲಿ ಇಂತಹ ವಾರ್ಷಿಹ ಸ್ನೇಹ ಸಮ್ಮೇಳನಗಳನ್ನು ಆಚರಿಸುವುದರಿಂದ ವಿದ್ಯಾರ್ಥಿಗಳು, ಶಿಕ್ಷಕರು ಪಾಲಕರಲ್ಲಿ ಬಂಧುತ್ವ ಬೆಳೆಯುತ್ತದೆ ಎಂದು ಸಂಸದೆ ಮಂಗಲಾ ಅಂಗಡಿ ಹೇಳಿದರು.

ಶನಿವಾರ ನಗರದ ಬೆಳಗಾವಿ ಶಿಕ್ಷಣ ಸಂಸ್ಥೆಯ ಶ್ರೀಮತಿ ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಪ್ರಾರ್ಥಮಿಕ ಶಾಲೆಯ 50 ಕ್ಕಿಂತ ಹೆಚ್ಚು ಮುಖ್ಯೋಪಾದ್ಯಾಯರನ್ನು ಸನ್ಮಾನಿಸಲಾಯಿತು. ಶಾಲೆಯಲ್ಲಿ ಆಯೋಜಿಸಿದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ತೋರುವ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಯುತ್ತದೆ. ಆದ್ದರಿಂದ ಹೆಚ್ಚಿನ ಸ್ಪರ್ಧೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭೆಯನ್ನು ತೋರಬೇಕೆಂದು ಸಲಹೆ ನೀಡಿದರು. ವಿವಿಧ ಸ್ಪರ್ಧೆಯಲ್ಲಿನ ವಿಜೇತರಿಗೆ ಬಹುಮಾನ ವಿತರಿಸಿ ಪ್ರೋತ್ಸಾಹಿಸಿದರು.

ಬೆಳಗಾವಿ ಶಿಕ್ಷಣ ಸಂಸ್ಥೆಯ ಚೇರಮನ್ ಅವಿನಾಶ ಪೋತದಾರ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಶ್ರೀನಿವಾಸ ಶಿವಣಗಿ, ಶಾಲಾ ಸುಧಾರಣೆ ಸಮಿತಿಯ ಅಧ್ಯಕ್ಷ ಸಿ.ವಿ. ಗ್ರಾಮೋಪಾಧ್ಯಾಯ, ಶಾಲೆಯ ಮುಖ್ಯೋಪಾಧ್ಯಾಯ ಎಂ.ಕೆ. ಮಾದಾರ, ಕಾರ್ಯಕ್ರಮದ ಸಂಚಾಲಕಿ ಸರಸ್ವತಿ ಬಿ. ದೇಸಾಯಿ, ಎಸ್. ಎಂ. ಐವಲೆ ಹಾಗೂ ವರ್ಷಾ ನಾಯ್ಕ ಉಪಸ್ಥಿತರಿದ್ದರು. ಶಾಲೆಯ ಆದರ್ಶ ವಿದ್ಯಾರ್ಥಿನಿಯರಾದ ಅಪೂರ್ವಾ ಅಂಬೋಜಿ, ಹಿಮಾಂಶಿ ಓಜಾ, ಭೂಮಿಕಾ ಮಕಾಟೆ, ವರ್ಷಾ ಕೋರಿಮಠ, ಸಂಜನಾ ಚಿತ್ತಪ್ಪಾಚೆ, ಅಂಕಿತಾ ಸಿಂದಿಮರದ, ಸಂಜನಾ ಬಂಗೋಡಿ, ಅಸ್ಮಿತಾ ಟಪಾಲೆ, ವನಿತಾ ಮುನ್ನೋಳ್ಳಿ ಈ ವಿದ್ಯಾರ್ಥಿನಿಯರಿಗೆ ನಗದು ಬಹುಮಾನ, ಶಿಲ್ಡ್ ಹಾಗೂ ಪ್ರಮಾಣ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು. ಮುಖ್ಯೋಪಾಧ್ಯಾಯ ಎಂ.ಕೆ. ಮಾದಾರ ಸ್ವಾಗತಿಸಿದರು. ಸರಸ್ವತಿ ಬಿ. ದೇಸಾಯಿ ವಂದಿಸಿದರು, ಸುಲೋಚನಾ ಐವಲೆ ನಿರೂಪಿಸಿದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

1 × five =