Breaking News

“ಮಹಾರಥೋತ್ಸವಕ್ಕೆ ದಿನಗಣನೆ” ಲಕ್ಷಾಂತರ ಭಕ್ತರಿಗೆ ಮಠ ದಲ್ಲಿ ಸಕಲ ಸಿದ್ಧತೆ.!!

Spread the love

 “ಮಹಾರಥೋತ್ಸವಕ್ಕೆ ದಿನಗಣನೆ”

ಲಕ್ಷಾಂತರ ಭಕ್ತರಿಗೆ ಮಠ ದಲ್ಲಿ ಸಕಲ ಸಿದ್ಧತೆ.   

ಮಠದ ಅಮರಸಿದ್ಧೇಶ್ವರ ಶ್ರೀಗಳ ಸಾರಥ್ಯದಲ್ಲಿ ಜಾತ್ರಾ ವೈಭವ

 

ಯುವ ಭಾರತ ಸುದ್ದಿ ವಿಶೇಷ

ಗೋಕಾಕ: ಅಡವೀಶನ ನೆನೆದರ ಆರತಿ ಹತ್ಯಾವ, ಸುರಾಗಿ ಮಲ್ಲಿಗೀ ಸುರದಾವ ಅನ್ನುವ ಜಾನಪದದಲ್ಲಿ ಮೂಡಿ ಬಂದ ಮಹಾ ತಪಸ್ವಿ, ಮಹಿಮಾಯೋಗಿ, ಕುಂದರನಾಡಿನ ಸಿದ್ಧಿಪುರುಷ. ಅಂಕಲಗಿ ಅಡವಿ ಮಹಾಸ್ವಾಮೀಜಿ 12ನೇ ಶತಮಾನದ ಕಲ್ಯಾಣ ಕ್ರಾಂತಿಯ ನಂತರ ದಶ ದಿಕ್ಕುಗಳತ್ತ ಚದುರಿಹೋದ. ಸುಮಾರು ಶಿವ ಶರಣರಲ್ಲಿ ಒಬ್ಬರಾದ ಅಡವಿ ಮಹಾಸ್ವಾಮೀಜಿ ಅವರು ಉಳವಿ ಚನ್ನ ಬಸವೇಶ್ವರರ ಆದೇಶದಂತೆ 770 ವರ್ಷಗಳ ಕಾಲ ಅಂಕಲಗಿಯಲ್ಲಿ ನೆಲೆ ನಿಂತು ಭಕ್ತ ಲೋಕದ ಏಳ್ಗೆಯನ್ನು ಮಾಡಿದ ಅಂದಿನ. ಆ ರೇಚಪ್ಪನವರೇ ಅಡವಿ ಮಹಾಸ್ವಾಮೀಜಿ ಎಂಬ ನಾಮದಿಂದ. ಖ್ಯಾತರಾಗಿ, ಭಕ್ತ ಸಾಮ್ರಾಜ್ಯದಲ್ಲಿ ಪ್ರಸಿದ್ದರಾದವರು.

ಗೋಕಾಕ ಅಂಕಲಗಿಯ ಶ್ರೀ ಅಡವಿಸಿದ್ದೇಶ್ವರ ಮಹಾಸ್ವಾಮಿಜಿಗಳ ಭಾವಚಿತ್ರ.

ಬಳ್ಳಾರಿ ನಾಲಾ ತಟದಲ್ಲಿಯ ಇಂದಿನ ಅಂಕಲಗಿ ಮಠದ ಜಾಗದಲ್ಲಿ ಅಂದು ಇಕ್ಕಟ್ಟಾದ ಬಿದಿರು ಮೆಳೆ ಇತ್ತು. ಕಾಲಾ ನಂತರದ ದಿನಗಳಲ್ಲಿ ಸಿದ್ಧೇಶ್ವರರ ಅನುಷ್ಠಾನಕ್ಕಾಗಿ ಊಟ, ಉಪಹಾರ ಬಿಟ್ಟು, ಮಠದ ಗರ್ಭ ಗುಡಿಯಲ್ಲಿ ಬಾಗಿಲು ಭದ್ರ ಪಡಿಸಿಕೊಂಡು ಒಳಗೆ ಕುಳಿತ ಶ್ರೀಗಳು ತಿಂಗಳು ಕಾಲದ ಅನುಷ್ಠಾನದ ಸಮಯದಲ್ಲಿ ಯಾರೂ ಬಾಗಿಲು ತೆರೆಯುವ ಸಾಹಸ ಮಾಡದಿರದಂತೆ ಭಕ್ತರಿಂದ ಮಾತು ಪಡೆದಿದ್ದರಂತೆ. ಅನುಷ್ಠಾನದ ಸಮಯ ಮುಗಿದಂತೆ ಬಾಗಿಲು ಚಿಲಕ ಮುರಿದು ನೋಡಿದ ಭಕ್ತ ಸಮೂಹಕ್ಕೆ ಸಿಕ್ಕಿದ್ದು ಶರೀರವಲ್ಲ. ಶ್ರೀಗಳು ಸಶರೀರವಾಗಿ ಕೈಲಾಸಕ್ಕೆ ಹೋಗುವಾಗ ಬಿಟ್ಟು ಹೋಗಿದ್ದ ಅವರ ಪೂಜಾ ಸ್ಥಳದಲ್ಲಿ ಎರಡು ವಿಭೂತಿ ಗಟ್ಟಿಗಳಿದ್ದವು. ಆ ವಿಭೂತಿ ಗಟ್ಟಿಗಳನ್ನು ಎರಡು ದೊಡ್ಡ ಹಿತ್ತಾಳೆ ಕಟ್ಟಿನಲ್ಲಿಟ್ಟು ಶ್ರೀ ಮಠದ ಗದ್ದುಗೆಯಲ್ಲಿ ದಿನ ನಿತ್ಯ ಪೂಜಿಸಲಾಗುತ್ತಿದೆ. ಆ ಗಟ್ಟಿಗಳ ಮೂಲಕ ಇಂದಿಗೂ ಶ್ರೀ ಮಠಕ್ಕೆ ಬರುವ ಭಕ್ತರಿಗೆ ಶ್ರೀ ಅಡವಿ ಮಹಾಸ್ವಾಮೀಜಿ ಆಶೀರ್ವಾದ ಮಾಡುತ್ತಿದ್ದಾರೆ.

ಗೋಕಾಕ ಅಂಕಲಗಿಯ ಶ್ರೀ ಅಡವಿಸಿದ್ಧೇಶ್ವರ ಮಠ.

ಉತ್ತರ ಕರ್ನಾಟಕದ ಹೆಸರಾಂತ ಮಹಾರಥೋತ್ಸವ ಜಾತ್ರೆಗಳಲ್ಲೊಂದಾದ ಗೋಕಾಕ ತಾಲೂಕಿನ ಅಂಕಲಗಿ ಶ್ರೀ ಅಡವಿ ಮಹಾಸ್ವಾಮೀಜಿ ಭವ್ಯ ರಥೋತ್ಸವವನ್ನು ನೋಡಿ ಕಾಣ್ತುಂಬಿಕೊಳ್ಳಲು ಇದೇ ರವಿವಾರ ದಿ. 17ರಂದು ದೂರದ. ಗೋವಾ, ಆಂದ್ರ್, ಮಹಾರಾಷ್ಟ್ರ, ಕೇರಳ, ತಮಿಳುನಾಡಿನ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು, ಮಠದ ಮಠಾಧ್ಯಕ್ಷರಾದ ಅಮರಸಿದ್ಧೇಶ್ವರ ಮಹಾಸ್ವಾಮಿಗಳು ಜಾತ್ರೆಯ ಸಾರಥ್ಯ ವಹಿಸಿದ್ದು, ಸಕಲ ಭಕ್ತರಿಗೂ ಅನ್ನ ದಾಸೋಹ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ಪ್ರಾತಿನಿದ್ಯ ಕಲ್ಪಿಸಿದ್ದಾರೆ. ಜಾತ್ರೆಗೆ ಬರುವ ಯಾತ್ರಿಕರು ಈ ಬಾರಿ ಬುಂದಿ, ಮಾದೇಲಿ, ಕರಿಗಡಬು, ರೊಟ್ಟಿ, ಚಪಾತಿ, ಅನ್ನ, ಸಾರು, ಅಂಬಲಿ ಸವಿಯಲಿದ್ದಾರೆ. ಶ್ರೀ ಮಠಕ್ಕೆ ಸಾರ್ವಜನಿಕ ಬಸ್ಸುಗಳನ್ನು ಮತ್ತು ರೇಲ್ವೆ ಸೌಕರ್ಯ ಕಲ್ಪಿಸಲಾಗಿದೆಯಲ್ಲದೆ, ಭವ್ಯ ದನಗಳ ಜಾತ್ರೆಯೂ ಸೇರಲಿದ್ದ್ದು, ಅತ್ತ್ಯುತ್ತಮ ಜೋಡಿ ಹೋರಿಗಳಿಗೆ ಮತ್ತು ಕುಸ್ತಿ ಆಡುವ ಪ್ರಸಿದ್ದ ಕುಸ್ತಿ ಪಟುಗಳಿಗೆ ಆಕರ್ಷಕ ಬಹುಮಾನ ನೀಡಲಾಗುವದು. ಜಾತ್ರೆಯಲ್ಲಿ ನಾಟಕಗಳು, ಕುಸ್ತಿಗಳು, ಮನರಂಜನಾ ಕಾರ್ಯಕ್ರಮಗಳು, ಭಜನಾ ಕೂಟಗಳು ಜಾತ್ರೆಯ ವಿಶೇಷತೆಗಳಾಗಿವೆ.

ಗೋಕಾಕ ಅಂಕಲಗಿಯ ಶ್ರೀ ಅಡವಿಸಿದ್ದೇಶ್ವರರ ರಥೋತ್ಸವ ಚಿತ್ರ.

ಇಂದಿನಿ0ದಲೇ ಜಾತ್ರೆ ವೈಭವ ಪ್ರಾರಂಭವಾಗಿದ್ದು, ಶ್ರೀ ಮಠಕ್ಕೆ ಸುಮಾರು 367 ಶಾಖಾ ಮಠ ಗಳಿದ್ದು ಎಲ್ಲ ಮಠಗಳ ಸದ್ಭಕ್ತರು ಹಾಗೂ ನಾಡಿನ ಹರಗುರು ಚರಮೂರ್ತಿಗಳು ಆಗಮಿಸುತ್ತಿದ್ದು ಸರ್ವ ಭಕ್ತಾದಿಗಳಿಗೆ ಆಶೀರ್ವಾದ ನೀಡಲಿದ್ದಾರೆ.

ಅಂಕಲಗಿ ಅಡವಿಸಿದ್ಧೇಶ್ವರ ಮಠದ ಪೀಠಾಧಿಪತಿ ಶ್ರೀ ಅಮರಸಿದ್ಧೇಶ್ವರ ಶ್ರೀಗಳು.

“ಶನಿವಾರ ದಿನಾಂಕ 16 ರಂದು ಮುಂಜಾನೆ 6-3೦ ಕ್ಕೆ ದೀಕ್ಷಾ ಹಾಗೂ ಅಯ್ಯಾಚಾರ, ಮಧ್ಯಾಹ್ನ ಕುಸ್ತಿಗಳು, ರವಿವಾರ ದಿನಾಂಕ 17 ರಂದು ಸಂಜೆ ಮಹಾರಥೋತ್ಸವ, ಹಾಗು ಶ್ರೀ ಸಿದ್ಧರಾಮ ಮಹಾಸ್ವಾಮೀಜಿ ಅವರ ಪುಣ್ಯ ಸ್ಮರಣೋತ್ಸವ, ಸೋಮವಾರ ದಿನಾಂಕ 18 ರಂದು ಶ್ರೀಗಳಿಂದ ಆಶೀರ್ವಾದ ಜರುಗಲಿದ್ದು, ಸರ್ವರೂ ಆಗಮಿಸಿ ಶ್ರೀ ಮಠದ ಕ್ರಪೆಗೆ ಪಾತ್ರರಾಗುವಂತೆ ಶ್ರೀ ಅಮರಸಿದ್ಧೇಶ್ವರ ಶ್ರೀಗಳು ಕೋರಿದ್ದಾರೆ

 


Spread the love

About Yuva Bharatha

Check Also

ಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಕೆ.!

Spread the loveಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ …

Leave a Reply

Your email address will not be published. Required fields are marked *

thirteen + eleven =