Breaking News

ಶ್ರೀ ಅಡವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಹಾಗೂ ಭವ್ಯ ದನಗಳ ಜಾತ್ರೆ-ಶಾಸಕ ರಮೇಶ ಜಾರಕಿಹೊಳಿ.!

Spread the love

ಶ್ರೀ ಅಡವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಹಾಗೂ ಭವ್ಯ ದನಗಳ ಜಾತ್ರೆ-ಶಾಸಕ ರಮೇಶ ಜಾರಕಿಹೊಳಿ.!


ಗೋಕಾಕ: ತಾಲೂಕಿನ ಇತಿಹಾಸ ಪ್ರಸಿದ್ಧ ಅಂಕಲಗಿಯ ಮಹಾನತಪಸ್ವಿ ಶ್ರೀ ಅಡವಿಸಿದ್ಧೇಶ್ವರ ಶಿವಯೋಗಿಗಳ ಸಂಸ್ಥಾನ ಮಠದ ಜಾತ್ರಾ ಮಹೋತ್ಸವ ಹಾಗೂ ಭವ್ಯ ದನಗಳ ಜಾತ್ರೆ ಇದೆ ದಿ.14 ರಿಂದ 18ರ ವರೆಗೆ ಜರುಗಲಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಅವರು, ಶನಿವಾರದಂದು ನಗರದ ತಮ್ಮ ಗೃಹ ಕಚೇರಿಯಲ್ಲಿ ಶ್ರೀ ಅಡವಿಸಿದ್ಧೇಶ್ವರ ಶಿವಯೋಗಿಗಳ ಸಂಸ್ಥಾನ ಮಠದ ಜಾತ್ರಾ ಮಹೋತ್ಸವ ಹಾಗೂ ಭವ್ಯ ದನಗಳ ಜಾತ್ರೆಯ ಬಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಕುಂದರನಾಡಿನ ಅಂಕಲಗಿ ಹಾಗೂ ಕುಂದರಗಿ ಗ್ರಾಮಗಳಲ್ಲಿ ತಪಸ್ಸು ಮಾಡಿ ಶ್ರೀ ಅಡವಿಸಿದ್ಧೇಶ್ವರ ಶಿವಯೋಗಿಗಳು ಪವಾಡ ಪರುಷರಾಗಿದ್ದರು. ಅಂಕಲಗಿ ಅಡವಿಸಿದ್ಧೇಶ್ವರ ಸಂಸ್ಥಾನ ಮಠದ ಭವ್ಯ ಪರಂಪರೆಯನ್ನು ಯುವ ಪೀಳಿಗೆಗೆ ತಿಳಿಸುವ ಕಾರ್ಯವಾಗಬೇಕಿದೆ. ಮಠದ ಪೀಠಾಧಿಪತಿ ಶ್ರೀ ಅಮರಸಿದ್ಧೇಶ್ವರ ಶ್ರೀಗಳು ಮಠದ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಈ ಜಾತ್ರಾ ಮಹೋತ್ಸವಕ್ಕೆ ತಾಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕರೆ ನೀಡಿದರು.


ಗುರುವಾರ ದಿ.14 ರಂದು ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಕಳಸಾರೋಹಣ ಹಾಗೂ ಪಲ್ಲಕ್ಕಿ ಉತ್ಸವ. ಶುಕ್ರವಾರ ದಿ.15ರಂದು ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಮೂರ್ತಿ ಸ್ಥಾಪನೆ ಮಧ್ಯಾಹ್ನ 2.30ಕ್ಕೆ ಕುಸ್ತಿ ಪಂದ್ಯಾವಳಿ. ಶನಿವಾರ ದಿ.16ರಂದು ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ತರಕಾರಿ ಅಲಂಕಾರ, ದೀಕ್ಷಾ ಹಾಗೂ ಅಯ್ಯಾಚಾರ, ಕುಸ್ತಿ ಪಂದ್ಯಾವಳಿ. ರವಿವಾರ ದಿ.17 ಅಷ್ಟಮಿ ತಿಥಿಯಂದು ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಪುಷ್ಪಾಲಂಕಾರ, ಪೂಜ್ಯ ಶ್ರೀ ಸಿದ್ಧರಾಮ ಮಹಾಸ್ವಾಮಿಗಳ ಪುಣ್ಯಸ್ಮರಣೆ ಹಾಗೂ ಸಂಜೆ 4ಗಂಟೆಗೆ ಕಾರ್ಯಕ್ರಮಕ್ಕೆ ಆಗಮಿಸಿದ ಹರ ಗುರು ಚರಮೂರ್ತಿಗಳ ಸಮ್ಮುಖದಲ್ಲಿ ಮಹಾರಥೋತ್ಸವ. ಸೋಮವಾರ ದಿ.18 ರಂದು ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಹಣ್ಣಿನ ಅಲಂಕಾರ ನಂತರ ಪೂಜ್ಯ ಶ್ರೀಗಳಿಂದ ಆಶೀರ್ವಚನ ಕಾರ್ಯಕ್ರಮ ಜರುಗಲಿದೆ ಎಂದು ಶ್ರೀ ಅಡವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಸಮಿತಿಯವರು ತಿಳಿಸಿದರು.

ಈ ಸಂದರ್ಭದಲ್ಲಿ ಭೀಮಗೌಡ ಪೋಲಿಸಗೌಡ್ರ, ಶಂಕರ ಬೂಸನ್ನವರ, ಶಿವಾನಂದ ಮಲಕನ್ನವರ, ಅಡಿವೆಪ್ಪ ಪಾಶ್ಚಾಪೂರ, ಅರುಣ ಮದವಾಲ, ಮುರಗೇಗೌಡ, ಬಸವರಾಜ ತೋಟಗಿ, ವೀರುಪಾಕ್ಷ ಹುಕ್ಕೇರಿಮಠ, ಶಿವಾನಂದ ಮುತವಾಡ, ಮಲ್ಲಿಕಾರ್ಜುನ, ದಶರಥ, ಮಹಾಂತೇಶ ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

ಅಕ್ಕಾ ಅಂದ್ರೆ ಅವರೇ ಅಂತ ಯಾಕೆ ತಿಳ್ಕೊತೀರಿ, ಪೆಗ್ ಅಂದ್ರೆ ಎನರ್ಜಿ ಡ್ರಿಂಕ್-ಮಾಜಿ ಶಾಸಕ ಸಂಜಯ ಪಾಟೀಲ.!

Spread the loveನಾನು ಭಾಷಣದಲ್ಲಿ ಹೆಬ್ಬಾಳಕರ ಹೆಸರನ್ನೆ ತಗೊಂಡಿಲ್ಲ. -ಮಾಜಿ ಶಾಸಕ ಸಂಜಯ ಪಾಟೀಲ.! ಯುವಭಾರತ ಸುದ್ದಿ ಬೆಳಗಾವಿ: ನಾನು …

Leave a Reply

Your email address will not be published. Required fields are marked *

one × 2 =