Breaking News

ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯ ಶ್ಲಾಘನೀಯವಾಗಿದೆ-ಬಸವಂತ ಕೋಣಿ!

Spread the love

ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯ ಶ್ಲಾಘನೀಯವಾಗಿದೆ-ಬಸವಂತ ಕೋಣಿ!

ಯುವ ಭಾರತ ಸುದ್ದಿ ಬೆಟಗೇರಿ :ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮಪಂಚಾಯತಿ ಸಹಯೋಗದ ಮಹಾತ್ಮಾ ಗಾಂಧಿ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆಯಡಿ ಸುಮಾರು ೯ ಲಕ್ಷ ರೂ.ಗಳÀ ಅನುದಾನದಡಿಯಲ್ಲಿ ಸ್ಥಳೀಯ ಮರಡಿಶಿವಾಪೂರ ಮುಖ್ಯ ರಸ್ತೆಯಿಂದ ಗುರಪ್ಪ ಮಾಕಾಳಿ ಹೊಲದವರೆಗೆ ಸುಮಾರು ೩ ಕಿ.ಮೀ, ತೋಟಪಟ್ಟಿ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ಕಾರ್ಯಕ್ರಮ ಫೆ.೧೬ ರಂದು ನಡೆಯಿತು.

ಬೆಟಗೇರಿ ಗ್ರಾಮದ ಮರಡಿಶಿವಾಪೂರ ಮುಖ್ಯ ರಸ್ತೆಯಿಂದ ಸ್ಥಳೀಯ ಗುರಪ್ಪ ಮಾಕಾಳಿಅವರ ಹೊಲದ ತನಕ ತೋಟಪಟ್ಟಿ ರಸ್ತೆ ನಿರ್ಮಾಣ ಕಾಮಗಾರಿಗೆ ತಾಪಂ ಮಾಜಿ ಸದಸ್ಯ ಬಸವಂತ ಕೋಣಿ ಗುದ್ದಲಿ ಪೂಜೆ ನೆರವೇರಿಸಿದರು.

ಬೆಟಗೇರಿ ತಾಪಂ ಮಾಜಿ ಸದಸ್ಯ ಬಸವಂತ ಕೋಣಿ ಮಾತನಾಡಿ, ಅರಭಾಂವಿ ಮತಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಂತೆ ಬೆಟಗೇರಿ ಗ್ರಾಮದಲ್ಲಿ ಇನ್ನೂ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಸ್ಥಳೀಯರÀ ಅವಶ್ಯಕ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಶಿವನಪ್ಪ ಮಾಳೇದ, ಸಿದ್ದಪ್ಪ ಬಾಣಸಿ, ಹನುಮಂತ ವಗ್ಗರ, ಸುಭಾಷ ಕರೆಣ್ಣವರ, ಭೀಮಶೆಪ್ಪ ಅಡಿಗೇರ, ಭೀರಪ್ಪ ಧರ್ಮಟ್ಟಿ, ಗುರಪ್ಪ ಮಾಕಾಳಿ, ರಾಮಪ್ಪ ನೀಲಣ್ಣವರ, ಸುರೇಶ ಬಾಣಸಿ, ವಿಠಲ ಚಂದರಗಿ, ಮಾರುತಿ ಬಣಜಿಗೇರ, ಯಂಕವ್ವ ಬಿ.ಪಾಟೀಲ, ಶಂಕರ ದಳವಾಯಿ, ಲಕ್ಷö್ಮಣ ಚಿನ್ನನ್ನವರ, ಕರೆಪ್ಪ ಚಂದರಗಿ, ಮಂಜು ವಗ್ಗರ, ಭೀಮಶೆಪ್ಪ ವಗ್ಗರ, ಭರಮಪ್ಪ ಪೂಜೇರಿ, ಹನುಮಂತ ಆನೆಗುಂದಿ, ಗಣ್ಯರು, ಗ್ರಾಮಸ್ಥರು ಇದ್ದರು.


Spread the love

About Yuva Bharatha

Check Also

ಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಪತ್ರಿಕಾ ವಿತರಕರ ಪಾತ್ರ ಬಹಳ ದೊಡ್ಡದು.- ರಮೇಶ ಜಾರಕಿಹೊಳಿ.!

Spread the loveಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಪತ್ರಿಕಾ ವಿತರಕರ ಪಾತ್ರ ಬಹಳ ದೊಡ್ಡದು.- ರಮೇಶ ಜಾರಕಿಹೊಳಿ.! ಗೋಕಾಕ: ಪತ್ರಿಕೆಗಳನ್ನು ಮನೆಗಳಿಗೆ ಸರಿಯಾದ …

Leave a Reply

Your email address will not be published. Required fields are marked *

ten − 9 =