Breaking News

ಕಾಂಗ್ರೆಸ್ ಅಭ್ಯರ್ಥಿಪರ ಹಣ ಹಂಚಿಕೆ ಡಾ.ಮಹಾಂತೇಶ ಕಡಾಡಿ ಸೇರಿ ಆರು ಜನರನ್ನು ಪೋಲಿಸರಿಗೆ ಒಪ್ಪಿಸಿದ ಅಂಕಲಗಿ ಗ್ರಾಮಸ್ಥರು..!

Spread the love

ಅಂಕಲಗಿ ಗ್ರಾಮದಲ್ಲಿ 25ಲಕ್ಷಕ್ಕೂ ಹೆಚ್ಚಿನ ಹಣವನ್ನು ಹಂಚುತ್ತಿದ್ದ ಕಾಂಗ್ರೇಸ್ ಅಭ್ಯರ್ಥಿಯ ಬೆಂಬಲಿಗರು.

ಗೋಕಾಕ: ಗೋಕಾಕ ವಿಧಾನಸಭಾ ಕ್ಷೇತ್ರದ ಅಂಕಲಗಿ ಗ್ರಾಮದಲ್ಲಿ ಮತದಾರರಿಗೆ ಹಂಚಲು ತಂದಿದ್ದ ಹಣವನ್ನು ಹಾಗೂ ಗೋಕಾಕನ ಕಾಂಗ್ರೇಸ ಮುಖಂಡ ಸೇರಿ ಆರು ಜನರನ್ನು ಬಿಜೆಪಿ ಕಾರ್ಯಕರ್ತರು ಸೆರೆೆ ಹಿಡಿದು ಪೋಲಿಸ್‌ರಿಗೆ ಒಪ್ಪಿಸಿದ ಘಟನೆ ಶನಿವಾರದಂದು ನಡೆದಿದೆ.

ಭದ್ರಾವತಿಯ ಕೀರ್ತಿ

ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಮೃಣಾಲ ಹೆಬ್ಬಾಳ್ಕರ ಅವರ ಪರವಾಗಿ ಮನೆ ಮನೆಗೆ ತೆರಳಿ ಕಾಂಗ್ರೇಸ್ ಗ್ಯಾರಂಟಿ ಕಾರ್ಡ ಜೊತೆಗೆ ಒಂದು ಸಾವಿರ ರೂಪಾಯಿಯನ್ನು ಹಂಚಲು ಬಂದಿದ್ದ ಸಚಿವೆ ಲಕ್ಷಿö್ಮÃ ಹೆಬ್ಬಾಳಕರ ಹಾಗೂ ಭದ್ರಾವತಿ ಶಾಸಕ ಬಿ ಕೆ ಸಂಗಮೇಶ ಬೆಂಬಲಿಗರನ್ನು ತಡೆದ ಜನರು ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸಮಾರು ೨೫ ಲಕ್ಷ ರೂಪಾಯಿಗಳನ್ನು ಪೋಲಿಸರಿಗೆ ಹಸ್ತಾತಂರಿಸಲಾಗಿದೆ. ಅಲ್ಲದೇ ಹಣ ಹಂಚಲು ಬಂದವರ ಮೇಲ್ವಿಚಾರಣೆಗೆ ಬಂದಿದ್ದ ಕಾಂಗ್ರೇಸ್‌ನ ಮುಖಂಡ ಡಾ. ಮಹಾಂತೇಶ ಕಡಾಡಿಯವರನ್ನು ಸಹ ಪೋಲಿಸರಿಗೆ ಒಪ್ಪಿಸಿದ್ದಾರೆ.

ಕರಿಕಟ್ಟಿಯ ರಾಜು ಉಪ್ಪಾರ

ಗೋಕಾಕ ಕಾಂಗ್ರೇಸ್ ಮುಖಂಡ ಡಾ.ಮಹಾಂತೇಶ ಕಡಾಡಿ ಅವರು ಹಣವನ್ನು ಮನೆ ಮನೆಗೆ ಹಂಚಲು ನೀಡಿದ್ದರು. ನಾವು ಪ್ರತಿ ಮನೆಗೆ ಒಂದು ಸಾವಿರದಂತೆ ಕಾಂಗ್ರೇಸ್ ಅಭ್ಯರ್ಥಿಯ ಪರ ಹಂಚುತ್ತಿರುವದಾಗಿ ಅಂಕಲಗಿ ಗ್ರಾಮಸ್ಥರು ಹರಿ ಬಿಟ್ಟ ವಿಡಿಯೋಗಳಲ್ಲಿ ಹೆಬ್ಬಾ¼ಕÀರ ಬೆಂಬಲಿಗ ಮಾಹಿತಿ ನೀಡಿದ್ದಾನೆ.

ಭದ್ರವಾತಿ, ಸವದತ್ತಿ ಸಮೀಪದ ಕರಿಕಟ್ಟಿ ಗ್ರಾಮದ ಕಡೆಗಳಿಂದ ಬಂದು ಕಾಂಗ್ರೇಸ್ ಅಭ್ಯರ್ಥಿಪರ ಹಣ ಹಂಚುತ್ತಿರುವದಾಗಿ ಸ್ವತಃ ಅವರೇ ಒಪ್ಪಿಕೊಂಡಿದ್ದರು ಚುನಾವಣಾ ಇಲಾಖೆ ದೂರು ದಾಖಲಿಸಿಕೊಂಡಿಲ್ಲ. ಹಣ ಹಂಚುತ್ತಿದ್ದ ಭದ್ರಾವತಿಯ ಕೀರ್ತಿ ಹಾಗೂ ಕರಿಕಟ್ಟಿಯ ರಾಜು ಉಪ್ಪಾರ, ಮೇಲ್ವಿಚಾರಣೆಗೆ ಬಂದಿದ್ದ ಕಾಂಗ್ರೆಸ್ ಮುಖಂಡ ಡಾ. ಮಹಾಂತೇಶ ಕಡಾಡಿ ಸೇರಿ ಒಟ್ಟು ಆರು ಜನರನ್ನು ಅಂಕಲಗಿ ಪೋಲಿಸ್ ಠಾಣೆಯ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ರಾಜಾರೋಷವಾಗಿ ಕಾಂಗ್ರೇಸ್ ಅಭ್ಯರ್ಥಿಯಪರ ಹಣ ಹಂಚುತ್ತಿದ್ದರು ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅಂಕಲಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


Spread the love

About Yuva Bharatha

Check Also

ಶ್ರೀ ಉಜ್ಜಯಿನಿ ಸದ್ಧರ್ಮ ಪೀಠದ ಪ್ರಸ್ತುತ ಪರಮ ಪೀಠಾಚಾರ್ಯರಾದ ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರರ ಸಾನ್ನಿಧ್ಯದಲ್ಲಿ ಜಾತ್ರಾ ಮಹೋತ್ಸವ

Spread the loveಸಾಮಾಜಿಕ ಸೌಹಾರ್ದತೆ ಸಾರುವ ಶ್ರೀ ಉಜ್ಜಯಿನಿ ಮರುಳಸಿದ್ಧೇಶ್ವರ ಜಾತ್ರಾ ಮಹೋತ್ಸವ.! ಶ್ರೀ ಉಜ್ಜಯಿನಿ ಸದ್ಧರ್ಮ ಪೀಠದ ಪ್ರಸ್ತುತ …

Leave a Reply

Your email address will not be published. Required fields are marked *

3 × three =