Breaking News

ಮಹರ್ಷಿ ವಾಲ್ಮೀಕಿ ಭಕ್ತಿಯೇ ಅವರ ಕಾವ್ಯಕ್ಕೆ ಶಕ್ತಿಯಾಗಿತ್ತು-ಎಸ್ ವ್ಹಿ ದೇಮಶೆಟ್ಟಿ.!

Spread the love

ಮಹರ್ಷಿ ವಾಲ್ಮೀಕಿ ಭಕ್ತಿಯೇ ಅವರ ಕಾವ್ಯಕ್ಕೆ ಶಕ್ತಿಯಾಗಿತ್ತು-ಎಸ್ ವ್ಹಿ ದೇಮಶೆಟ್ಟಿ.!


ಗೋಕಾಕ: ರಾಮಾಯಣದ ಮಹತ್ವವನ್ನು ಈಡಿ ಜಗತ್ತಿಗೆ ಸಾರಿದ ಮಹಾನ್ ಕವಿ ವಾಲ್ಮೀಕಿಯವರಾಗಿದ್ದು ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆದರೆ ಸಮಾಜ ಸುಧಾರಣೆ ಸಾಧ್ಯವೆಂದು ಬಿಜೆಪಿ ಮುಖಂಡ ಹಾಗೂ ನ್ಯಾಯವಾದಿ ಎಸ್ ವ್ಹಿ ದೇಮಶೆಟ್ಟಿ ಹೇಳಿದರು.
ಅವರು, ನಗರದ ಶಾಸಕ ರಮೇಶ ಜಾರಕಿಹೊಳಿ ಅವರ ಗೃಹ ಕಚೇರಿಯಲ್ಲಿ ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಲದಿAದ ಹಮ್ಮಿಕೊಂಡ ಮಹರ್ಷಿ ವಾಲ್ಮೀಕಿ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಹರ್ಷಿ ವಾಲ್ಮೀಕಿ ಮೇಲು-ಕೀಳೆನ್ನುವ ಭೇದಗಳಿಲ್ಲದೇ ಎಲ್ಲ ಸಮುದಾಯಕ್ಕೆ ಪ್ರಿಯವಾಗುವ ಆದಿ ಕವಿ. ಯಾವುದೇ ರಾಜಾಶ್ರಯವನ್ನು ಅವರು ಬಯಸಿದವರಲ್ಲ. ಅವರ ಭಕ್ತಿಯೇ ಅವರ ಕಾವ್ಯಕ್ಕೆ ಶಕ್ತಿ. ರಾಮತಾರಕ ಮಂತ್ರ ಬೀಜವನ್ನು ಭಾರತೀಯರ ಹೃದಯಗಳಲ್ಲಿ ಭಿತ್ತಿ ಬೆಳೆಯುತ್ತಾ ದೇಶಾದ್ಯಂತ ಪರ್ಯಟನೆ ಮಾಡಿದ ಮಹಾನ್ ಪುರುಷ ವಾಲ್ಮೀಕಿ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಉಪಾಧ್ಯಕ್ಷ ಬಸವರಾಜ ಆರೇನ್ನವರ, ಮಾಜಿ ಜಿಪಂ ಸದಸ್ಯ ಟಿ ಆರ್ ಕಾಗಲ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಲಕ್ಷö್ಮಣ ಖಡಕಭಾಂವಿ, ಮಹಿಳಾ ಮೋರ್ಚಾ ಅಧ್ಯಕ್ಷೆ ರಾಜೇಶ್ವರಿ ಒಡೆಯರ, ಎಸ್.ಟಿ ಮೋರ್ಚಾ ಅಧ್ಯಕ್ಷ ರವಿ ಮಡ್ಡೆಪ್ಪಗೋಳ, ನಗರಸಭೆ ಸದಸ್ಯರಾದ ಅಬ್ಬಾಸ ದೇಸಾಯಿ, ಜ್ಯೋತಿಭಾ ಸುಭಂಜಿ, ಹನಮಂತ ಕಾಳಮ್ಮನಗುಡಿ, ಬಾಬು ಮುಳಗುಂದ, ಶಿವಪ್ಪ ಗುಡ್ಡಾಕಾಯು, ಹರೀಶ ಬೂದಿಹಾಳ, ಪ್ರಕಾಶ ಮುರಾರಿ, ವಿಜಯ ಜತ್ತಿ ಮುಖಂಡರುಗಳಾದ ಕಾಂತು ಎತ್ತಿನಮನಿ, ಲಕ್ಕಪ್ಪ ತಹಶೀಲ್ದಾರ, ಈಶ್ವರ ಬಾಗೋಜಿ, ಶಶಿ ಕುರಬೇಟ, ಮಲ್ಲಿಕಜಾನ ತಳವಾರ, ಸಚೀನ ಕಮಟೇಕರ ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾರಾಗಿ, ಅಧಿಕಾರಿಗಳಿಗೆ ಶಾಸಕ ರಮೇಶ ಜಾರಕಿಹೊಳಿ ಕರೆ.!

Spread the loveಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾರಾಗಿ, ಅಧಿಕಾರಿಗಳಿಗೆ ಶಾಸಕ ರಮೇಶ ಜಾರಕಿಹೊಳಿ ಕರೆ.! ಗೋಕಾಕ: ಅಧಿಕಾರಿಗಳು ನದಿ ತೀರದ …

Leave a Reply

Your email address will not be published. Required fields are marked *

four + 11 =