Breaking News

ಸ್ಫರ್ಧಾತ್ಮಕ ಮನೋಭಾವದಿಂದ ಬೆಳೆಯುತ್ತಿರುವ ಮಕ್ಕಳನ್ನು ಪಾಲಕರು ಪ್ರೋತ್ಸಾಹಿಸಿ-ಜಿ ಬಿ ಬಳಗಾರ.

Spread the love

ಸ್ಫರ್ಧಾತ್ಮಕ ಮನೋಭಾವದಿಂದ ಬೆಳೆಯುತ್ತಿರುವ ಮಕ್ಕಳನ್ನು ಪಾಲಕರು ಪ್ರೋತ್ಸಾಹಿಸಿ-ಜಿ ಬಿ ಬಳಗಾರ.


ಯುವಭಾರತ ಸುದ್ದಿ ಗೋಕಾಕ : ಸ್ಫರ್ಧಾತ್ಮಕ ಮನೋಭಾವದಿಂದ ಬೆಳೆಯುತ್ತಿರುವ ಮಕ್ಕಳನ್ನು ಪಾಲಕರು ಪ್ರೋತ್ಸಾಹಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಬಿ ಬಳಗಾರ ಹೇಳಿದರು.
ಶನಿವಾರದಂದು ನಗರದ ತಾಪಂ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕ ಶಾಖೆಯಿಂದ ಹಮ್ಮಿಕೊಂಡ ೨೦೨೦-೨೧, ೨೦೨೧-೨೨ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯೂಸಿ ಪ್ರತಿಭಾವಚಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅಂತರಾಷ್ಟಿçÃಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಇಂದಿನ ತಾಂತ್ರಿಕ ಒತ್ತಡದ ಜೀವನದಲ್ಲಿ ಸರಕಾರಿ ನೌಕರರು ತಮ್ಮ ಮಕ್ಕಳ ಶಿಕ್ಷಣದತ್ತ ಹೆಚ್ಚಿನ ಗಮನ ಹರಿಸಬೇಕು. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಅವರನ್ನು ಪ್ರತಿಭಾನ್ವಿತರನ್ನಾಗಿ ಮಾಡಬೇಕು. ಜಗತ್ತಿನಲ್ಲೇ ಭಾರತ ದೇಶದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನವಿದ್ದು ಎಲ್ಲರೂ ಅವರನ್ನು ಗೌರವಿಸುವಂತೆ ಕರೆ ನೀಡಿದರು.
ಸಮಾರಂಭವನ್ನು ಶಾಸಕ ರಮೇಶ ಜಾರಕಿಹೊಳಿ ಅವರು ಉದ್ಘಾಟಿಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸತ್ಕರಿಸಿದರು.
ಈ ಸಂದರ್ಭದಲ್ಲಿ ನೌಕರರ ಸಂಘದ ತಾಲೂಕ ಅಧ್ಯಕ್ಷ ಬಸವರಾಜ ಮುರಘೋಡ, ಸಿಡಿಪಿಓ ಡಿ ಎಸ್ ಕುಡುವಕ್ಕಲಿU್ಪರ ಸೇರಿದಂತೆ ಇತರರು ಇದ್ದರು.


Spread the love

About Yuva Bharatha

Check Also

ಪಶ್ಚಿಮ ಬಂಗಳಾದಲ್ಲಿ ಮಹಿಳೆಯರ ಮೇಲಿನ ಅನ್ಯಾಯ ಖಂಡಿಸಿ ನಗರದ ವಿವಿಧ ಮಹಿಳಾ ಮಂಡಳಗಳ ಪದಾಧಿಕಾರಿಗಳಿಂದ ಪ್ರತಿಭಟನೆ.!

Spread the loveಪಶ್ಚಿಮ ಬಂಗಳಾದಲ್ಲಿ ಮಹಿಳೆಯರ ಮೇಲಿನ ಅನ್ಯಾಯ ಖಂಡಿಸಿ ನಗರದ ವಿವಿಧ ಮಹಿಳಾ ಮಂಡಳಗಳ ಪದಾಧಿಕಾರಿಗಳಿಂದ ಪ್ರತಿಭಟನೆ.! ಗೋಕಾಕ: …

Leave a Reply

Your email address will not be published. Required fields are marked *

eighteen − two =