Breaking News

ಸಂವಿಧಾನದ ಆಶಯವನ್ನು ಎಲ್ಲರೂ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಆಚರಿಸಿದರೆ ಜನ್ಮದಿನಾಚರಣೆ ಅರ್ಥಪೂರ್ಣವಾಗಿರುತ್ತದೆ.- ಗುರುರಾಜ ಲೂತಿ

Spread the love

ಸಂವಿಧಾನದ ಆಶಯವನ್ನು ಎಲ್ಲರೂ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಆಚರಿಸಿದರೆ ಜನ್ಮದಿನಾಚರಣೆ ಅರ್ಥಪೂರ್ಣವಾಗಿರುತ್ತದೆ.- ಗುರುರಾಜ ಲೂತಿ


ಗೋಕಾಕ: ಡಾ. ಬಿ ಆರ್ ಅಂಬೇಡ್ಕರ ಅವರು ನೀಡಿದ ಸಂವಿಧಾನದ ಆಶಯವನ್ನು ಎಲ್ಲರೂ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಆಚರಿಸಿದರೆ ಜನ್ಮದಿನಾಚರಣೆ ಅರ್ಥಪೂರ್ಣವಾಗಿರುತ್ತದೆ ಎಂದು ಅಖಿಲ ಕರ್ನಾಟಕ ಶರಣ ಸಾಹಿತ್ಯ ಪರಿಷತ ಬಿಳಗಿ ಅಧ್ಯಕ್ಷ ಗುರುರಾಜ ಲೂತಿ ಹೇಳಿದರು.
ಅವರು, ಶುಕ್ರವಾರದಂದು ನಗರದ ಸಮುದಾಯ ಭವನದಲ್ಲಿ ತಾಲೂಕಾಡಳಿತ, ತಾಲೂಕ ಪಂಚಾಯತ, ನಗರಸಭೆ ಹಾಗೂ ತಾಲೂಕಿನ ಸ್ಥಳೀಯ ಸಂಸ್ಥೆಗಳು ಮತ್ತು ಸಮಾಜ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ ಅವರ ೧೩೨ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಡಾ. ಬಿ ಆರ್ ಅಂಬೇಡ್ಕರರವರು ಜಗತ್ತಿನಲ್ಲೇ ಶ್ರೇಷ್ಠ ಸಂವಿಧಾನವನ್ನು ನಮ್ಮ ದೇಶಕ್ಕೆ ನೀಡಿದ್ದಾರೆ. ಎಲ್ಲ ರೀತಿಯ ಸೌಲಭ್ಯಗಳನ್ನು ದೇಶದ ಜನತೆಗೆ ಸಂವಿಧಾನ ನೀಡಿದೆ. ಸಾಮಾಜಿಕ ಬದ್ಧತೆ ಹಾಗೂ ಧಾರ್ಮಿಕ ಸಹಿಷ್ಣತೆಯುಳ್ಳ ಸಂವಿಧಾನವನ್ನು ಎಲ್ಲರೂ ಗೌರವಿಸಿ ಆಚರಣೆಗೆ ತರುವಂತೆ ಕರೆ ನೀಡಿದರು.
ಕಾರ್ಯಕ್ರಮವನ್ನು ಗ್ರೇಡ್-೨ ತಹಶೀಲದಾರ ಎಲ್ ಎಚ್ ಭೋವಿ ಉದ್ಘಾಟಿಸಿದರು.
ದಿನಾಚರಣೆ ನಿಮಿತ್ಯ ನಗರದ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ರಕ್ತದಾನ ಶಿಭಿರ ಹಮ್ಮಿಕೊಳ್ಳಲಾಗಿತ್ತು. ಅಂಬೇಡ್ಕರ ಅವರ ಭಾವಚಿತ್ರದ ಮೆರವಣಿಗೆಯನ್ನು ನಗರದ ಪ್ರಮುಖ ಬೀದಿಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಿಇಓ ಜಿ ಬಿ ಬಳಗಾರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಸ್ ವಿ ಕಲ್ಲಪ್ಪನವರ, ಅಧಿಕಾರಿಗಳಾದ ಎಮ್ ಎಚ್ ಗಜಾಕೋಶ, ಎಮ್ ಎಸ್ ಬಾಗಡಿ, ಆರ್ ಆರ್ ಉಪ್ಪಾರ, ವಿಜಯಕುಮಾರ, ಎಸ್ ಪಿ ವರಾಳೆ, ಮುಖಂಡರುಗಳಾದ ವೀರಭದ್ರ ಮೈಲನ್ನವರ, ಗೋವಿಂದ ಕಳ್ಳಿಮನಿ, ಅಜೀತ ಹರಿಜನ, ಓಂಕಾರಪ್ಪ ಬಂಡಿವಡ್ಡರ, ಬಾಳೇಶ ಸಂತವ್ವಗೋಳ, ಲಕ್ಷö್ಮಣ ತಳಗಡೆ, ವಿಠ್ಠಲ ಸಣ್ಣಕ್ಕಿ, ಬಸು ಮೇಸ್ತಿç, ಸತೀಶ ಹರಿಜನ ಇದ್ದರು.


Spread the love

About Yuva Bharatha

Check Also

ಗೋಕಾಕ ಮತಕ್ಷೇತ್ರದಲ್ಲಿ ಝಣಝಣ ಕಾಂಚಾಣ ಸದ್ದು, ಕಾಂಗ್ರೇಸ್ ಅಭ್ಯರ್ಥಿಯಿಂದ ಮತದಾರರಿಗೆ ಹಣದ ಆಮಿಷ.!

Spread the loveಗೋಕಾಕನಲ್ಲಿ ಪ್ರತಿ ಮನೆಗೆ 1000, ಅಲ್ಪಸಂಖ್ಯಾತರಿಗೆ 500 ಕಾಂಗ್ರೇಸ್ ಕಾಂಚಾಣ ಸದ್ದು.! ಗೋಕಾಕ: ಲೋಕಸಭಾ ಚುನಾವಣೆ ಇನ್ನು …

Leave a Reply

Your email address will not be published. Required fields are marked *

nineteen − three =