Breaking News

ಡಾ.ಅಪ್ಪಾಸಾಹೇಬ್ ನಾಯ್ಕಲ್‌ಗೆ ಉತ್ತಮ ಗ್ರಂಥಪಾಲಕ ರಾಜ್ಯಪ್ರಶಸ್ತಿ.!

Spread the love

ಡಾ.ಅಪ್ಪಾಸಾಹೇಬ್ ನಾಯ್ಕಲ್‌ಗೆ ಉತ್ತಮ ಗ್ರಂಥಪಾಲಕ ರಾಜ್ಯಪ್ರಶಸ್ತಿ.!

ಬೆಳಗಾವಿ: ಭಾರತ ಗ್ರಂಥಾಲಯ ವಿಜ್ಞಾನ ಪಿತಾಮಹ, ಪದ್ಮಶ್ರೀ ಡಾ.ಎಸ್.ಆರ್.ರಂಗನಾಥನ್ ೧೩೧ನೇ ಜನ್ಮ ದಿನಾಚರಣೆ ನಿಮಿತ್ತ ನಡೆದ ಗ್ರಂಥಪಾಲಕರ ದಿನಾಚರಣೆಯಲ್ಲಿ ೨೦೨೩ರ ಉತ್ತಮ ಗ್ರಂಥಪಾಲಕ ರಾಜ್ಯ ಪ್ರಶಸ್ತಿಯನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜಮೆಂಟ್ ಕೋಜಿಕೋಡ್‌ನ ಮುಖ್ಯ ಗ್ರಂಥಾಲಯಾಧಿಕಾರಿ ಡಾ.ಅಪ್ಪಾಸಾಹೇಬ್ ನಾಯ್ಕಲ್ ಅವರಿಗೆ ಶನಿವಾರ ಬೆಂಗಳೂರಿನ ಹಂಪಿನಗರದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ.ಅಪ್ಪಾಸಾಹೇಬ್ ನಾಯ್ಕಲ್ ಅವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕು ಗೋಲಗೇರಿ ಗ್ರಾಮದವರಾಗಿದ್ದು, ಧಾರವಾಡದಲ್ಲಿ ಉನ್ನತ ವ್ಯಾಸಾಂಗ ಪೂರ್ಣಗೊಳಿಸಿದ್ದಾರೆ. ನಂತರದಲ್ಲಿ ಸಿಂಗಾಪುರ ಹಾಗೂ ಮುಂಬೈ ಸೇರಿದಂತೆ ಐಐಎಂ ಇಂದೋರದಲ್ಲಿ ಕಾರ್ಯನಿರ್ವಹಿಸಿದ್ದು, ಸದ್ಯ ಕೋಜಿಕೋಡ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜಮೆಂಟ್‌ನ ಮುಖ್ಯ ಗ್ರಂಥಾಲಯಾಧಿಕಾರಿ ಕಾರ್ಯ ನಿರ್ವಹಿಸುತ್ತಿದ್ದಾರೆ.


Spread the love

About Yuva Bharatha

Check Also

ವಿಬಿ- ಜೀ ರಾಮ್ ಜೀ ಯೋಜನೆಯನ್ನು ಜಾರಿ ಮಾಡಿದ್ದರಿಂದ ಕಾಂಗ್ರೆಸ್ಸಿಗರು ಅಪಪ್ರಚಾರ ಮಾಡುತ್ತಿದ್ದಾರೆ.- ಸುಭಾಸ ಪಾಟೀಲ

Spread the love ಗೋಕಾಕ: ವಿಕಸಿತ ಭಾರತ ನಿರ್ಮಾಣಕ್ಕೆ ಪಣ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿಯವರು ವಿಬಿ- ಜೀ ರಾಮ್ …

Leave a Reply

Your email address will not be published. Required fields are marked *

16 − 13 =