Breaking News

ಸರಕಾರದ ಮಾರ್ಗಸೂಚಿಗಳ ಪಾಲನೆ ಮಾಡುವ ಮೂಲಕ ಗಣೇಶ ಉತ್ಸವ ಆಚರಿಸಿ-ಪ್ರಕಾಶ ಹೊಳೆಪ್ಪಗೋಳ.!

Spread the love

ಸರಕಾರದ ಮಾರ್ಗಸೂಚಿಗಳ ಪಾಲನೆ ಮಾಡುವ ಮೂಲಕ ಗಣೇಶ ಉತ್ಸವ ಆಚರಿಸಿ-ಪ್ರಕಾಶ ಹೊಳೆಪ್ಪಗೋಳ.!

ಗೋಕಾಕ: ಉತ್ಸವಗಳು ಇರುವದು ಉತ್ಸಾಹವನ್ನು ಹೆಚ್ಚಿಸಲು. ಎಲ್ಲರೂ ಸರಕಾರದ ಮಾರ್ಗಸೂಚಿಗಳ ಪಾಲನೆ ಮಾಡುವ ಮೂಲಕ ವಿಘ್ನನಿವಾರಕ ಉತ್ಸವ ಆಚರಿಸುವಂತೆ ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಹೇಳಿದರು.
ಅವರು, ನಗರದ ತಾಪಂ ಸಭಾ ಭವನದಲ್ಲಿ ಗಣೇಶ ಚತುರ್ಥಿಯ ನಿಮಿತ್ಯ ತಾಲೂಕಾಡಳಿತದಿಂದ ಕರೇದ ಸಾರ್ವಜನಿಕ ಗಣೇಶ ಉತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾರ್ವಜನಿಕ ಗಣೇಶ ಉತ್ಸವ ಮಂಡಳಿಯವರಿಗೆ ಪರವಾಣಿ ಪಡೆಯಲು ಅನುಕೂಲವಾಗುವ ದೃಷ್ಟಿಕೋನದಿಂದ ಹೆಸ್ಕಾಂ, ನಗರಸಭೆ ಮತ್ತು ಪೋಲಿಸ್ ಇಲಾಖೆ ಸೇರಿ ನಗರಸಭೆಯಲ್ಲಿ ಏಕಗವಾಕ್ಷಿ ಕೇಂದ್ರ ಸ್ಥಾಪನೆ ಮಾಡಲಾಗುವದು. ಗ್ರಾಮೀಣ ಪ್ರದೇಶಗಳಲ್ಲಿ ಆಯಾ ಗ್ರಾಪಂಗಳಲ್ಲಿ ವ್ಯವಸ್ಥೆ ಮಾಡಿದ್ದು, ಮಲ್ಲಾಪೂರ ಪಿಜಿ, ಅಂಕಲಗಿ ಮತ್ತು ಕೊಣ್ಣೂರು ಪಟ್ಟಣ ಪಂಚಾಯತಿಗಳಲ್ಲೂ ಏಕಗವಾಕ್ಷಿ ಕೇಂದ್ರ ತೆರೆಯಲಾಗುವದು, ಗಣೇಶ ಉತ್ಸವ ಮಂಡಳಿಯವರು ಒಂದೆ ಕಡೆ ಅರ್ಜಿ ಸಲ್ಲಿಸಿ, ಈ ಮೂರು ಇಲಾಖೆಗಳ ಪರವಾಣಿಗೆ ಪಡೆಯಬಹುದಾಗಿದೆ ಎಂದರು.
ಗಣೇಶ ಮಂಡಳಿಯವರಿಗೆ ತೊಂದರೆ ಯಾಗದಂತೆ ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಲಿವೆ. ಸರಕಾರ ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳನ್ನು ನಿಷೇಧಿಸಿದ್ದು, ಸಾರ್ವಜನಿಕರು ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಬಳಸಲು ಕರೆ ನೀಡಿದರು.
ಡಿವೈಎಸ್‌ಪಿ ಮನೋಜಕುಮಾರ ನಾಯ್ಕ ಮಾತನಾಡಿ, ಕಳೆದ ಕೆಲವು ವರ್ಷಗಳಿಂದ ಗಣೇಶ ಉತ್ಸವ ಕಳೆಗುಂದಿದ್ದು, ಈ ಭಾರಿಯ ಗಣೇಶ ಉತ್ಸವ ಪೋಲಿಸ್ ಇಲಾಖೆಯ ಸೂಚನೆಗಳನ್ನು ಪಾಲನೆ ಮಾಡುವ ಮೂಲಕ ಅದ್ದೂರಿಯಾಗಿ ಆಚರಿಸಿ, ಪ್ರತಿಯೊಂದು ಗಣೇಶ ಮಂಡಳಿಯವರು ಸ್ವಯಂ ಸೇವಕರನ್ನು ನೇಮಕಮಾಡಿಕೊಂಡು ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.
ಗಣೇಶ ವಿಸರ್ಜನೆಗೆ ಬೇಕಾದ ಅಗತ್ಯ ಸೌಲಬ್ಯವನ್ನು ನಗರಸಭೆಯಿಂದ ನೀಡುವಂತೆ ಸೂಚನೆ ನೀಡಿದ ಅವರು, ಪೋಲಿಸ್ ಇಲಾಖೆಯಿಂದ ನದಿಯ ದಡದಲ್ಲಿ ಗಣೇಶ ವಿಸರ್ಜನೆ ಮಾಡುವ ಸ್ಥಳದಲ್ಲಿ ನುರಿತ ಈಜುಗಾರರನ್ನು ನೇಮಿಸುವಂತೆ ಶಹರ ಮತ್ತು ಗ್ರಾಮೀಣ ಠಾಣೆಯ ಪೋಲಿಸ್ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಸಿಪಿಐ ಗೋಪಾಲ ರಾಠೋಡ, ಪಿಎಸ್‌ಐಗಳಾದ ನಾಗರಾಜ ಖಿಲಾರೆ, ಎಮ್ ಡಿ ಘೋರಿ, ನಗರಸಭೆ ಪರಿಸರ ಅಭಿಯಂತರ ಎಮ್ ಎಚ್ ಗಜಾಕೋಶ, ಹೆಸ್ಕಾಂ ಅಧಿಕಾರಿ ವರಾಳೆ, ಗ್ರಾಮ ದೇವತೆ ಜಾತ್ರಾ ಕಮೀಟಿ ಸದಸ್ಯ ಪ್ರಭಾಕರ ಚೌಹಾನ ಸೇರಿದಂತೆ ಗಣೇಶ ಮಂಡಳಿಗಳ ಪದಾಧಿಕಾರಿಗಳು, ಸಾರ್ವಜನಿಕರು ಇದ್ದರು.


Spread the love

About Yuva Bharatha

Check Also

ಅಭ್ಯರ್ಥಿ ಯಾರೇ ಆದರೂ ಕಾರ್ಯಕರ್ತರು ಅವರನ್ನು ಗೆಲ್ಲಿಸಿ-ಸಂಜಯ ಪಾಟೀಲ.!

Spread the loveಅಭ್ಯರ್ಥಿ ಯಾರೇ ಆದರೂ ಕಾರ್ಯಕರ್ತರು ಅವರನ್ನು ಗೆಲ್ಲಿಸಿ-ಸಂಜಯ ಪಾಟೀಲ.! ಗೋಕಾಕ: ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಮೂರನೇ …

Leave a Reply

Your email address will not be published. Required fields are marked *

fourteen − eight =