Breaking News

ಗೋಕಾಕ ಮುಖ್ಯ ರಸ್ತೆಯಿಂದ ಬಡಿಗವಾಡ ರಸ್ತೆಯ ವರೆಗೆ ಬಾಯ ಪಾಸ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ- ಶಾಸಕ ರಮೇಶ ಜಾರಕಿಹೊಳಿ!!

Spread the love

ಗೋಕಾಕ ಮುಖ್ಯ ರಸ್ತೆಯಿಂದ ಬಡಿಗವಾಡ ರಸ್ತೆಯ ವರೆಗೆ ಬಾಯ ಪಾಸ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ- ಶಾಸಕ ರಮೇಶ ಜಾರಕಿಹೊಳಿ!!

ಯುವ ಭಾರತ ಸುದ್ದಿ ಘಟಪ್ರಭಾ: ಗೋಕಾಕ ಮುಖ್ಯ ರಸ್ತೆಯಿಂದ ಬಡಿಗವಾಡ ರಸ್ತೆಯವರೆಗೆ ಬಾಯ್ ಪಾಸ ರಸ್ತೆಯಿಂದ ಘಟಪ್ರಭಾ ನಗರದ ಮುಖ್ಯ ರಸ್ತೆಯ ಜನದಟ್ಟಣೆ ಆದಷ್ಟು ಮಟ್ಟಿಗೆ ಕಡಿಮೆಯಾಗಿ ಸಾರ್ವಜನಿಕರಿಗೆ ಅನುಕೂವಾಗಲಿದೆ ಎಂದು ಗೋಕಾಕ ಶಾಸಕರಾದ ರಮೇಶ ಜಾರಕಿಹೋಳಿ ಹೇಳಿದರು.

ಅವರು ಗುರುವಾರದಂದು ಘಟಪ್ರಭಾದಲ್ಲಿ ಎಡದಂಡೆ ಕಾಲುವೆ ಬಳಿ ಗೋಕಾಕ ಮುಖ್ಯ ರಸ್ತೆಯಿಂದ ಬಡಿಗವಾಡ ರಸ್ತೆಯವರೆಗೆ ನಗರೋತ್ಥನ ೪ ನೇ ಹಂತದ ಯೋಜನೆಯಲ್ಲಿ  ಸುಮಾರು ೪೨೫ ರೂ.ಲಕ್ಷದಲ್ಲಿ ಬಾಯಪಾಸ ರಸ್ತೆ ನಿರ್ಮಾಣ ಹಾಗೂ ಡಾಂಭರೀಕರಣ ರಸ್ತೆ ಕಾಮಗಾರಿ ಉದ್ಘಾಟನೆಯ ಸಮಾರಂಭದ ಪೂಜೆ ನೇರವೇರಿಸಿ ಮಾತನಾಡಿದರು.

ಘಟಪ್ರಭಾ ನಗರವು ದಿನೇ ದಿನೇ ಬೆಳೆಯುತ್ತಿದ್ದು, ನಗರ ಮದ್ಯದಲ್ಲಿರುವ ಮುಖ್ಯ ರಸ್ತೆಯಲ್ಲಿರುವ ಕೆಲ ಅಂಗಡಿಕಾರರು ಅತೀಕ್ರಮಣ ಮಾಡಿದ್ದರಿಂದ ರಸ್ತೆ ಅಗಲೀಕರಣ ಕಡಿಮೆಯಾಗಿ ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ  ಗ್ರಾಮಸ್ಥರು ನನ್ನ ಗಮನಕ್ಕೆ ತಂದಿದ್ದಾರೆ ಆದಷ್ಟು ಬೇಗನೆ ಸಮಸ್ಯೆ ಪರಿಹರಿಸಲಾಗುವದು ಎಂದು ಭರವಸೆ ನೀಡಿದರು.

ನಗರಕ್ಕೆ ಪರಸಭೆ ಕಟ್ಟಡ, ಸರ್ಕಾರಿ ಆಸ್ಪತ್ರೆ, ಮತ್ತು ಬಸ್ ನಿಲ್ದಾಣಕ್ಕೆ ಜಾಗೆಯ ಕೊರತೆ ಇದ್ದು ಕೆ.ಎಚ್.ಆಯ್. ಆಸ್ಪತ್ರೆಯ ಮುಖ್ಯಾಧಿಕಾರಿಗಳಿಗೆ ಜಾಗೆ ನೀಡಲು ಗ್ರಾಮಸ್ಥರ ಮುಖಾಂತರ ಮನವಿ ಸಲ್ಲಿಸಲಾಗಿದೆ. ಆದರೆ ಆಸ್ಪತ್ರೆಯವರು ಇಲ್ಲಿಯ ವರೆಗೆ ಯಾವದೇ ಉತ್ತರ ನೀಡಿರುವದಿಲ್ಲ. ಸೂಕ್ತ ಸ್ಥಳದ ಅನ್ವೇಶನೆಗೆ ಸಂಬಂದ ಪಟ್ಟ ಅಧಿಕಾರಿಗಳ ಕೂಡ ಮಾತನಾಡಿದ್ದೆನೆ ಆದಷ್ಟು ಬೇಗನೆ ಪರಿಹಾರ ಸಿಗುವ ನಿರೀಕ್ಷೆ ಇದ್ದು, ಘಟಪ್ರಭಾದ ಮೂಲಭೂತ ಸ್ವಾಕರ್ಯಗಳ ಕೊರತೆ ನಿವಾಹರಣೆಯಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಘಟಪ್ರಭಾ ಹಿರಿಯ ಮುಖಂಡರಾದ ಡಿ.ಎಮ್.ದಳವಾಯಿ ಮಾತನಾಡಿ ಗೋಕಾಕ ಮುಖ್ಯ ರಸ್ತೆಯಿಂದ ಬಡಿಗವಾಡ ರಸ್ತೆಯವರೆಗೆ ಬಾಯ್ ಪಾಸ ರಸ್ತೆಯಿಂದ ಘಟಪ್ರಭಾ ಜನತೆಗೆ ಹಾಗೂ ರೈತರಿಗೆ ಸಾಕಷ್ಟು ಅನುಕೂಲವಾಗಿದೆ. ಇದರ ಜೊತೆಗೆ ಸುಮಾರು ವರ್ಷಗಳಿಂದ ಘಟಪ್ರಭಾ ಮೃತ್ಯುಂಜಯ ವೃತ್ತದಿಂದ ಕಾಳಮ್ಮಾ ದೇವಿ ದೇವಸ್ಥಾನಕ್ಕೆ  ಹೋಗುವ ರಸ್ತೆಯ ಬೈಕ ಸವಾರರಿಗೆ, ವಾಹನ ಚಾಲಕರಿಗೆ, ಮಹಿಳೆಯರಿಗೆ, ವೃದ್ಯಾಪ್ಯ ನಾಗರಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ಸಾಕಷ್ಟು ತೊಂದರಯಾಗುತ್ತಿದ್ದು ನೆನೆಗುದಿಗೆ ಬಿದ್ದ ಮಾಸ್ಟರ ಪ್ಲ್ಯಾನವನ್ನು ಆದಷ್ಟು ಬೇಗನೇ ಜಾರಿಗೆ ತರುವಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಶಾಸಕರಿಗೆ  ಗ್ರಾಮಸ್ಥರ ಪರವಾಗಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಹಿರಿಯರಾದ ರಾಮಣ್ಣಾ ಹುಕ್ಕೇರಿ, ಸುರೇಶ ಪಾಟೀಲ ಮಾತನಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಕೆ. ಭಿ. ಪಾಟೀಲ, ಯೋಜನೆಯ ವಿವರವನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಘಟಪ್ರಭಾ, ಪಾಮಲದಿನ್ನಿ, ಶಿಂದಿಕುರಬೇಟ, ಧುಪದಾಳ ಗ್ರಾಮದ ಹಿರಿಯರು ಹಾಗೂ ಮುಖಂಡರು ಪುರಸಭೆ ಸಿಬ್ಬಂದಿ ವರ್ಗದವರು ಇದ್ದರು.


Spread the love

About Yuva Bharatha

Check Also

ಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಪತ್ರಿಕಾ ವಿತರಕರ ಪಾತ್ರ ಬಹಳ ದೊಡ್ಡದು.- ರಮೇಶ ಜಾರಕಿಹೊಳಿ.!

Spread the loveಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಪತ್ರಿಕಾ ವಿತರಕರ ಪಾತ್ರ ಬಹಳ ದೊಡ್ಡದು.- ರಮೇಶ ಜಾರಕಿಹೊಳಿ.! ಗೋಕಾಕ: ಪತ್ರಿಕೆಗಳನ್ನು ಮನೆಗಳಿಗೆ ಸರಿಯಾದ …

Leave a Reply

Your email address will not be published. Required fields are marked *

2 × 1 =