Breaking News

ಎಮ್, ಡಿ, ಚುನಮರಿಗೆ ಸಹಕಾರ ರತ್ನ!!

Spread the love

ಎಮ್, ಡಿ, ಚುನಮರಿಗೆ ಸಹಕಾರ ರತ್ನ!!

ಯುವ ಭಾರತ ಸುದ್ದಿ ಗೋಕಾಕ: ಕರ್ನಾಟಕ ಸರಕಾರದ ಸಹಕಾರ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ. ಬೆಂಗಳೂರು ಇವರ ಸಹಯೋಗದೊಂದಿಗೆ ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ೬೯ನೇ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ದಿ.ಗೋಕಾಕ ಅರ್ಬನ್ ಕೋ-ಆಪರೇಟಿವ್ಹ ಕ್ರೆಡಿಟ್ ಬ್ಯಾಂಕಿನ ಹಿರಿಯ ದಿಗ್ದರ್ಶಕರಾದ ಮಲ್ಲಿಕಾರ್ಜುನ ದಾನಪ್ಪಾ ಚುನಮರಿ ಇವರಿಗೆ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾದ ಪ್ರಯುಕ್ತ ಸೋಮವಾರದಂದು ನಗರದ ಅರ್ಬನ್ ಬ್ಯಾಂಕಿನ ಸಭಾಂಗಣದಲ್ಲಿ ಬ್ಯಾಂಕಿನ ಆಡಳಿತ ಮಂಡಳಿ ವತಿಯಿಂದ ಚುನಮರಿ ಅವರನ್ನು ಸತ್ಕರಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟಿ, ಉಪಾಧ್ಯಕ್ಷ ಡಿ.ಸಿ.ಬಿದರಿ, ದಿಗ್ದರ್ಶಕರಾದ ವ್ಹಿ.ಎಸ್.ಬಿದರಿ, ಆರ್.ಸಿ.ತಾರಳಿ, ಶ್ರೀಮತಿ ಎಸ್.ಎಮ್.ಕುರಬೇಟ, ಶ್ರೀಮತಿ ಎಸ್.ವ್ಹಿ.ಘೋಡಗೇರಿ, ಸಿ.ಎಮ್.ಕುರಬೇಟ, ಎಸ್.ಬಿ.ಅಂಕಲಿ, ಪಿ.ಎಮ್.ಮಡ್ಡೆಪ್ಪಗೋಳ, ಪಿ.ಎಸ್.ಸೊಲ್ಲಾಪೂರಮಠ, ಪ್ರಧಾನ ವ್ಯವಸ್ಥಾಪಕ ಎಸ್.ಎಸ್.ಪಾಟೀಲ ಹಾಗೂ ಬ್ಯಾಂಕಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಅಕ್ಕಾ ಅಂದ್ರೆ ಅವರೇ ಅಂತ ಯಾಕೆ ತಿಳ್ಕೊತೀರಿ, ಪೆಗ್ ಅಂದ್ರೆ ಎನರ್ಜಿ ಡ್ರಿಂಕ್-ಮಾಜಿ ಶಾಸಕ ಸಂಜಯ ಪಾಟೀಲ.!

Spread the loveನಾನು ಭಾಷಣದಲ್ಲಿ ಹೆಬ್ಬಾಳಕರ ಹೆಸರನ್ನೆ ತಗೊಂಡಿಲ್ಲ. -ಮಾಜಿ ಶಾಸಕ ಸಂಜಯ ಪಾಟೀಲ.! ಯುವಭಾರತ ಸುದ್ದಿ ಬೆಳಗಾವಿ: ನಾನು …

Leave a Reply

Your email address will not be published. Required fields are marked *

18 − ten =