ಮದುವಣಗಿತ್ತಿಯಂತೆ ಶೃಂಗಾರಗೊಳುತ್ತಿದೆ ಗೋಕಾಕ ತಹಶೀಲ್ದಾರ ಕಚೇರಿ !
ಯುವ ಭಾರತ ಸುದ್ದಿ ಗೋಕಾಕ: ಕಳೆದ ಹಲವು ತಿಂಗಳಿನಿಂದ ಕಸದ ತೊಟ್ಟಿಯಂತಿದ್ದ ಗೋಕಾಕ ತಹಶೀಲ್ದಾರ ಕಚೇರಿ(ತಾಲೂಕ ಆಡಳಿತ ಸೌಧ) ಬಣ್ಣ ಸುಣ್ಣದ ಜೊತೆಗೆ ಮದುವಣಗಿತ್ತಿಯಂತೆ ಶೃಂಗಾರಗೊಳುತ್ತಿದೆ.
ಹೌದು ಗೋಕಾಕ ತಾಲೂಕ ಆಡಳಿತ ಸೌಧ ಕಳೆದೊಂದು ವರ್ಷದಿಂದ ಕಚೇರಿ ಕಟ್ಟಡದ ಆವರಣದಲ್ಲಿಯೇ ಪಾನ್ ಬೀಡಾ-ಗುಟ್ಕಾ ಉಗುಳಿದ ಕಲೆಗಳು, ಕಚೇರಿಯಲ್ಲಿ ಉಪಯೋಗಿಸಿದ ಕಾಗದು ಮಿಶ್ರಿತ ಕಸ ಮತ್ತು ಗಿಡ-ಮರಗಳ ಎಲೆಗಳು ಸೇರಿ ತುಂಬಿ ತುಳುಕುತ್ತಿತ್ತು. ಸದ್ಯ ೨೦೨೩ರ ಚುನಾವಣೆಯ ಹಿನ್ನಲೆ ನೂತನವಾಗಿ ಅಧಿಕಾರಿವಹಿಸಿಕೊಂಡ ತಹಶೀಲದಾರ ಶ್ರೀಧರ ಮುಂದಲಮನಿ ಅವರು ಬರುತ್ತಲೇ ಎಲ್ಲ ಅಧಿಕಾರಿಗಳ ಚಳಿಬಿಡಿಸಿ ಕಚೇರಿ ಸ್ವಚ್ಛತೆಗೆ ಆದ್ಯತೆ ನೀಡಿದ್ದಾರೆ.
ಅಧಿಕಾರಿಗಳ ತರಾಟೆ ತೆಗೆದುಕೊಂಡ ನೂತನ ತಹಶೀಲದಾರ: ೨೦೨೩ರ ಚುನಾವಣೆಯ ಹಿನ್ನಲೆ ರವಿವಾರದಂದು ನೂತನವಾಗಿ ಅಧಿಕಾರಿವಹಿಸಿಕೊಂಡ ತಹಶೀಲದಾರ ಶ್ರೀಧರ ಮುಂದಲಮನಿ ಅಧಿಕಾರ ವಹಿಸಿಕೊಳ್ಳುತ್ತಲೇ ತಾಲೂಕ ಆಡಳಿತ ಸೌಧ ಕಚೇರಿಯ ಸುತ್ತಲು ಸಂಚರಿಸಿ ಕಸದಿಂದ ತುಂಬಿದ್ದ ಕಚೇರಿಯ ಸ್ವಚ್ಛಗೊಳಿಸುವಂತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಕಸ ಎಲ್ಲೆಂದರಲ್ಲಿ ಎಸೆಯದಂತೆ ಮತ್ತು ಉಗುಳದಂತೆ ತಿಳಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ.
ತಾಲೂಕ ಆಡಳಿತ ಸೌಧ ಕಚೇರಿಯಲ್ಲಿಯ ಉಪ ನೋಂದಣಿ ಕಚೇರಿ, ಭೂ ಮಾಪನ ವಿಭಾಗ, ಆಹಾರ ನಾಗರಿಕ ಸರಬರಾಜು ವಿಭಾಗದ ಕೇರಿಗಳ ಮುಂದೆ ಪಾನ್ ಬೀಡಾ-ಗುಟ್ಕಾ ಕಲೆಗಳನ್ನು ಕಂಡು ಆಕ್ರೋಷಗೊಂಡ ತಹಶೀಲದಾರ ಎಚ್ಚರಿಕೆ ಸಂದೇಶ ನೀಡಿ, ಸ್ವತಃ ಆಯಾ ವಿಭಾಗದ ಸಿಬ್ಬಂಧಿಗಳಿAದ ಆವರಣ ಸ್ವಚ್ಛಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಎಲ್ಲ ಕಚೇರಿಗಳ ಮುಂದೆ ಕೇಲಸಕ್ಕಾಗಿ ನಿಂತ ಸಾರ್ವಜನಿಕರನ್ನು ಗಮನಿಸಿ, ಸ್ವತಃ ಅವರೇ ತಾಲೂಕ ಆಡಳಿತ ಸೌಧ ಕಚೇರಿಗೆ ಬರುವ ಸಾರ್ವಜನಿಕರ ಕುಂದು ಕೊರತೆಗಳು ಆಲಿಸಿ, ಸಾರ್ವಜನಿಕರ ಕೇಲಸ ಮಾಡಿಕೊಡುವಂತೆ ಅಧಿಕಾರಿಗಳಿಗೆ ಟ್ಟು ನಿಟ್ಟಿನ ಸೂಚನೆಯನ್ನು ನೀಡಿದ್ದಾರೆ.
ತಾಲೂಕ ಆಡಳಿತ ಸೌಧ ಕಚೇರಿಯಲ್ಲಿಯನ್ನು ಸ್ವಚ್ಛಗೊಳಿಸುತ್ತಿರುವ ಸಿಬ್ಬಂಧಿ ಈ ಕಚೇರಿಯಲ್ಲಿರುವ ಅನೇಕ ಶೌಚಾಲಯಗಳು ಗಬ್ಬು ನಾರುತ್ತಿದ್ದು, ಇವುಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ. ಅಲ್ಲದೇ ತಾಲೂಕ ಆಡಳಿತ ಸೌಧದ ಆವರಣದಲ್ಲಿ ಪಾರ್ಕಿಂಗ್ ಸಮಸ್ಯೆ ಹೆಚ್ಚಿದ್ದು, ಸಾರ್ವಜನಿಕರ ವಾಹನ ನಿಲುಗಡೆಗೆ ಶಿಸ್ತು ಬದ್ಧ ವ್ಯವಸ್ಥೆ ರೂಪಿಸಬೇಕಿದೆ. ಮುಂಬರುವ ದಿನಗಳಲ್ಲಿ ತಹಶೀಲದಾರ ಶ್ರೀಧರ ಮುಂಡಲಮನಿ ಅವರು ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕು ಮತ್ತು ಭ್ರಷ್ಟತೆಯಿಂದ ತುಂಬಿ ತುಳುಕುತ್ತಿರುವ ಅಧಿಕಾರಿಗಳಿಗೆ ಲಗಾಮು ಹಾಕುವ ಕಾರ್ಯ ಮಾಡಬೇಕು ಎಂಬುದು ಸಾರ್ವಜನಿಕರ ಆಶಯವಾಗಿದೆ.
ಸರಕಾರಿ ಕಚೇರಿಗಳ ಸ್ವಚ್ಛತೆಗೆ ಆದ್ಯತೆ ನೀಡಿರುವ ನೂತನ ತಹಶೀಲದಾರ ಶ್ರೀಧರ ಮುಂಡಲಮನಿ ಅವರ ಕಾರ್ಯ ಶ್ಲಾಘನೀಯ. ಅದರಂತೆ ತಹಶೀಲದಾರ ಕಚೇರಿ ಆವರಣದಲ್ಲಿ ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್ ಮಾಡಲಾಗುತ್ತಿದ್ದು, ಪಾರ್ಕಿಂಗ್ ವ್ಯವಸ್ಥೆ ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.