Breaking News

ಸವದತ್ತಿಯಲ್ಲಿ ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 42.92 ಲಕ್ಷ ಮೌಲ್ಯದ ಹೊಲಿಗೆ ಯಂತ್ರ, ಟಿಫಿನ್ ಬಾಕ್ಸ್ ವಶ

Spread the love

ಸವದತ್ತಿಯಲ್ಲಿ ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 42.92 ಲಕ್ಷ ಮೌಲ್ಯದ ಹೊಲಿಗೆ ಯಂತ್ರ, ಟಿಫಿನ್ ಬಾಕ್ಸ್ ವಶ

ಯುವ ಭಾರತ ಸುದ್ದಿ ಬೆಳಗಾವಿ :
ಸವದತ್ತಿ ಜೆಡಿಎಸ್ ಅಭ್ಯರ್ಥಿ ಸೌರಬ್ ಚೋಪ್ರಾ ಅವರಿಗೆ ಸೇರಿರುವ 42.92 ಲಕ್ಷ ಮೌಲ್ಯದ ಹೋಲಿಗೆ ಯಂತ್ರ ಮತ್ತು ಟಿಫಿನ್ ಬಾಕ್ಸ್ ವಶಪಡಿಸಿಕೊಳ್ಳಲಾಗಿದೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಗೋದಾಮಿನಲ್ಲಿದ್ದ ಈ ವಸ್ತುಗಳನ್ನು ವಶಕ್ಕೆ ಪಡೆದುಕೊಂಡು ಅಭ್ಯರ್ಥಿ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಚುನಾವಣಾ ಅಧಿಕಾರಿಗಳು 42.92 ಲಕ್ಷ ರೂ . ಮೌಲ್ಯದ ಹೊಲಿಗೆ ಯಂತ್ರ , ಟಿಫಿನ್ ಬಾಕ್ಸ್ ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ . ಸವದತ್ತಿ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಸವದತ್ತಿಯ ಗೋದಾಮಿನ ಮೇಲೆ ದಾಳಿ ಮಾಡಿದ್ದು 23 ಲಕ್ಷ 84 ಸಾವಿರದ 272 ರೂ . ಮೌಲ್ಯದ 1012 ಹೊಲಿಗೆ ಯಂತ್ರ , 4.56 ಲಕ್ಷ ಮೌಲ್ಯದ ಹೊಲಿಗೆ ಯಂತ್ರಗಳ 1200 ಟೇಬಲ್‌ಗಳು , 11 ಲಕ್ಷ 27 ಸಾವಿರ 840 ರೂ . ಮೌಲ್ಯದ 1060 ಐರನ್ ಸ್ಟ್ಯಾಂಡ್ , 3.24 ಲಕ್ಷ ಮೌಲ್ಯದ 2160 ಟಿಫಿನ್ ಬಾಕ್ಸ್ ಗಳು ಪತ್ತೆಯಾಗಿವೆ . ಜೆಡಿಎಸ್ ಅಭ್ಯರ್ಥಿ ಸೌರಭ್ ಚೋಪ್ರಾ ಭಾವಚಿತ್ರದ ಟಿಫಿನ್ ಬಾಕ್ಸ್ ಗಳು ಇದ್ದವು . ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

13 − twelve =