Breaking News

ಕನ್ನಡ ಮೃದುವಾದ ಭಾಷೆ. ಕನ್ನಡ ನೆಲದಲ್ಲಿ ಹುಟ್ಟಿರುವದು ನಮ್ಮ ಸೌಭಾಗ್ಯ – ಸಚಿವ ರಮೇಶ ಜಾರಕಿಹೊಳಿ

Spread the love


ಗೋಕಾಕ: ಕನ್ನಡ ಭಾಷೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಕನ್ನಡ ಮೃದುವಾದ ಭಾಷೆ. ಹೀಗಾಗಿ ಕನ್ನಡ ಭಾಷೆಯನ್ನು ಅಮೇರಿಕ, ಲಂಡನ್ ದೇಶಗಳ ವಿದೇಶಿಗರು ಅಪ್ಪಿಕೊಳ್ಳುತ್ತಾರೆ. ಕನ್ನಡ ನೆಲದಲ್ಲಿ ಹುಟ್ಟಿರುವದು ನಮ್ಮ ಸೌಭಾಗ್ಯ ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಅವರು, ನಗರದ ಎನ್‌ಇಎಸ್ ಶಾಲೆಯ ಆವರಣದಲ್ಲಿ ಹಮ್ಮಿಕೊಂಡ ಗೋಕಾಕ ತಾಲೂಕ ೫ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂಬೈ ಕರ್ನಾಟಕದಲ್ಲಿ ಗಡಿಭಾಗಗಳಾದ ಕೋಲ್ಹಾಪೂರ, ಸಾಂಗ್ಲಿ, ಜತ್ತ ಹಾಗೂ ಅಕ್ಕಲಕೋಟ ಕನ್ನಡ ಭಾಷಿಕರ ಪ್ರದೇಶಗಳಾಗಿವೆ. ಎಲ್ಲ ಜಾತಿ, ಧರ್ಮಗಳನ್ನು ಪ್ರೀತಿಸುವದೆ ಕನ್ನಡ, ಕನ್ನಡ ಭಾಷೆಯಲ್ಲಿ ಮಾತನಾಡುವದು ಸಂತೋಷವೆನಿಸುತ್ತದೆ. ಕೆಳ ಹಂತದಿAದ ಬೆಳೆದು ಬಂದು ದೊಡ್ಡ ಭಾವನೆಗಳುಳ್ಳ ಕನ್ನಡಿಗರು ವಿಶಾಲ ಹೃದಯಹೊಂದಿದ್ದಾರೆAದರು.
ದೆಹಲಿಯಲ್ಲಿ ಪತ್ರಕರ್ತರು ಆಂಗ್ಲಭಾಷೆಯಲ್ಲಿ ನನ್ನನ್ನು ಪ್ರಶ್ನಿಸಿದಾದ ನನಗೆ ಆಂಗ್ಲಭಾಷೆ ಬರುವದಿಲ್ಲ ಎಂದ ನೇರವಾಗಿ ಹೇಳಿದ್ದೆ. ನಾನು ಹಾಗೂ ನನ್ನ ನಾಲ್ವರು ಸಹೋದರರು ಹಾಗೂ ಸಹೋದರಿಯರು, ಸರಕಾರಿ ಕನ್ನಡ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದಿದ್ದು, ಅಲ್ಲದೇ ಸರಕಾರಿ ಆಸ್ಪತ್ರೆಯಲ್ಲೆ ಹುಟ್ಟಿದ್ದು, ನನ್ನ ಮೊಮ್ಮಗನು ಸರಕಾರಿ ಆಸ್ಪತ್ರೆಯಲ್ಲೆ ಹುಟ್ಟಿರುವದು. ಹೀಗಾಗಿ ನನಗೆ ಆಂಗ್ಲಭಾಷೆ ಹೆಚ್ಚಾಗಿ ಬರುವದಿಲ್ಲ ಎಂದರು.
ಕನ್ನಡ ಸಾಹಿತ್ಯ ಭವನ ಹಾಗೂ ಪ್ರತಿ ಬಜೇಟನಲ್ಲಿ ೫೦ಕೋಟಿ ರೂಪಾಯಿ ಕನ್ನಡಕ್ಕಾಗಿ ಮೀಸಲಿಡುವಂತೆ ಕನ್ನಡ ಸಾಹಿತ್ಯ ಪರಿಷತ ನಿಂದ ನನಗೆ ಮನವಿ ಸಲ್ಲಿಸಿದ್ದಾರೆ. ಇದು ಒಳ್ಳೆಯ ವಿಷಯವಾಗಿದ್ದು. ಶೀಘ್ರವೇ ಈ ಬಗ್ಗೆ ಮುಖ್ಯಮಂತ್ರಿ ಬಿಎಸ್‌ವೈ ಜೊತೆಗೆ ಚರ್ಚಿಸಿ ಬೇಡಿಕೆ ಇಡೇರಿಸುವದಾಗಿ ಭರವಸೆ ನೀಡಿದರು.
ಸರಕಾರದ ಮುಖ್ಯ ಸಚೇತಕ ಹಾಗೂ ವಿಧಾನ ಪರಿಷತ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಕರ್ನಾಟಕ ಏಕೀಕರಣದಲ್ಲಿ ಉತ್ತರ ಕರ್ನಾಟಕದ ಜನತೆಯ ಪಾತ್ರ ಮಹತ್ವದ್ದಾಗಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಗೋಕಾಕ ತಾಲೂಕಿನ ವಿದ್ಯಾರ್ಥಿಗಳು ಅತಿಹೆಚ್ಚು ಫಲಿತಾಂಶ ಪಡೆಯುತ್ತಿದ್ದು ಹೆಮ್ಮೆಯ ವಿಷಯ ಎಂದರು.
ಗೋಕಾಕ ಫಾಲ್ಸ್ ರಾಜ್ಯದ ಪ್ರೆಕ್ಷಣೀಯ ಸ್ಥಳವಾಗಿದ್ದು, ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಅಮೇರಿಕದ ನಯಾಗರ ಜಲಪಾತ ಮಾದರಿಯಲ್ಲಿ ಗೋಕಾಕ ಜಲಪಾತವನ್ನು ಅಭಿವೃದ್ಧಿ ಪಡಿಸಲು ಮುಂದಾಗಿದ್ದಾರೆAದು ಸಚಿವರನ್ನು ಹೊಗಳಿ. ಈ ಯೋಜನೆಗೆ ಸರಕಾರದಿಂದ ಆದಷ್ಟು ಬೇಗ ಚಾಲನೆ ಸೀಗಲಿ ಎಂದು ಹಾರೈಸಿದರು.
ನಗರದ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಸ್ವಾಮಿಜಿ ದಿವ್ಯ ಸಾನಿಧ್ಯ ವಹಿಸಿ, ಆಶಿರ್ವಚ ನೀಡಿದರು.
ವೇದಿಕೆಯ ಮೇಲೆ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಸಿ ಕೆ ನಾವಲಗಿ, ನಿಕಟಪೂರ್ವ ಸರ್ವಾಧ್ಯಕ್ಷ ಮಹಾಲಿಂಗ ಮಂಗಿ, ಕಸಾಪ ಜಿಲ್ಲಾ ಅಧ್ಯಕ್ಷೆ ಮಂಗಲಾ ಮೆಟಗುಡ್ಡ, ತಾಲೂಕಾಧ್ಯಕ್ಷ ಮಹಾಂತೇಶ ತಾಂವಶಿ, ಪ್ರೊ. ಚಂದ್ರಶೇಖರ ಅಕ್ಕಿ, ಸಿದ್ಧಲಿಂಗ ದಳವಾಯಿ, ಜಯಾನಂದ ಮುನವಳ್ಳಿ, ಸರೋಜಿನಿ ಪಂಚಗಾAವಿ, ಪ್ರೊ. ಗಂಗಾಧರ ಮಾಳಗಿ, ನಗರಸಭೆ ಅಧ್ಯಕ್ಷ ಜಯಾನಂದ ಹುನಚ್ಯಾಳ ಸೇರಿದಂತೆ ಇತರರು ಇದ್ದರು.
ಶಿಕ್ಷಕ ರಾಮಪ್ಪ ಮಿರ್ಜಿ ಸ್ವಾಗತಿಸಿದರು, ಶೈಲಾ ಕೊಕ್ಕರಿ ನಿರೂಪಿಸಿದರು, ಬಸವರಾಜ ಹಣಮಂತಗೊಳ ವಂದಿಸಿದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

fifteen + thirteen =