Breaking News

ಸಮಾಜ ಸುಧಾರಣೆ ಹಾಗೂ ಶೈಕ್ಷಣಿಕ ಪ್ರಗತಿಯಲ್ಲಿ ಪೀಠಗಳ ಪಾತ್ರ ಮಹತ್ವದಾಗಿದೆ-ಸಿಎಮ್ ಇಬ್ರಾಹಿಂ.!

Spread the love

ಸಮಾಜ ಸುಧಾರಣೆ ಹಾಗೂ ಶೈಕ್ಷಣಿಕ ಪ್ರಗತಿಯಲ್ಲಿ ಪೀಠಗಳ ಪಾತ್ರ ಮಹತ್ವದಾಗಿದೆ-ಸಿಎಮ್ ಇಬ್ರಾಹಿಂ.!


ಯುವ ಭಾರತ ಸುದ್ದಿ ಗೋಕಾಕ: ಸಮಾಜ ಸುಧಾರಣೆ ಹಾಗೂ ಶೈಕ್ಷಣಿಕ ಪ್ರಗತಿಯಲ್ಲಿ ಪೀಠಗಳ ಪಾತ್ರ ಮಹತ್ವದಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಹೇಳಿದರು.
ಗುರುವಾರದಂದು ನಗರದ ಚನ್ನಬಸವೇಶ್ವರ ವಿದ್ಯಾ ಪೀಠದ ಆವರಣದಲ್ಲಿ ಶೂನ್ಯ ಸಂಪಾದನ ಮಠದ ಲಿಂಗೈಕ್ಯ ಶ್ರೀ ಬಸವ ಮಹಾಸ್ವಾಮಿಗಳ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡ ೧೭ನೇ ಶರಣ ಸಂಸ್ಕೃತಿ ಉತ್ಸವದ ಪ್ರಥಮ ದಿನದ ಬಸವ ಧರ್ಮ ಸಮಾವೇಶವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಬಸವ ತತ್ವಗಳನ್ನು ಜನರಿಗೆ ಸಾರುವ ದಿಕ್ಕಿನಲ್ಲಿ ಮಠ ಮಾನ್ಯಗಳು ಸಾಗಿರುವದರಿಂದ ಸಮಾಜದಲ್ಲಿ ಶಾಂತಿ ನೆಲೆಸಿದೆ. ಅಂತಹ ಪವಿತ್ರ ಕಾರ್ಯದಲ್ಲಿ ಕಳೆದ ೧೭ ವರ್ಷಗಳಿಂದ ಇಲ್ಲಿನ ಶೂನ್ಯ ಸಂಪಾದನ ಮಠ ಕಾರ್ಯ ಮಾಡುತ್ತಿರುವದು ಶ್ಲಾಘನೀಯವಾಗಿದೆ. ಶ್ರೀ ಮಠದ ಭಾವೈಕತೆಯ ಕಾರ್ಯಗಳನ್ನು ಮನಗಂಡು ಈ ಬಾಗದ ಜನರು ಬಾಳಿ ಬದುಕಿ ಸದೃಢ ಸಮಾಜ ನಿರ್ಮಿಸಿಬೇಕೆಂದ ಅವರು ಬಸವ ತತ್ವ ಹೊಂದಿರುವ ಸರಕಾರ ವಿಧಾನಸೌಧದಲ್ಲಿ ಬಂದರೆ ಮಾತ್ರ ರಾಜ್ಯ ಸುಧಾರಣೆಯಾಗಲು ಸಾಧ್ಯ ಆ ದಿಸೆಯಲ್ಲಿ ಮುಂದಿನ ದಿನಗಳಲ್ಲಿ ಎಲ್ಲರನ್ನೂ ಸಂಘಟಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವದು ಎಂದರು.


ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರನ್ನು ಸತ್ಕರಿಸಿ,ಗೌರವಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಧಾರವಾಡ ಉಪ್ಪಿನ ಬೆಟಗೇರಿ ಮೂರು ಸಾವಿರ ಮಠದ ಶ್ರೀ ಕುಮಾರ್ ವಿರುಪಾಕ್ಷ ಮಹಾಸ್ವಾಮಿಗಳು ಆರ್ಶೀವಚನ ನೀಡಿದರು.
ವೇದಿಕೆಯ ಮೇಲೆ ಕಾರ್ಯಕ್ರಮದ ನೇತೃತ್ವ ವಹಿಸಿದ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು, ಘಟಪ್ರಭಾದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಶರಣ ಸಂಸ್ಕೃತಿ ಉತ್ಸವ ಸಮಿತಿಯ ಅಧ್ಯಕ್ಷ ಸಿ.ಸಿ.ವಾಲಿ , ಕಾರ್ಯದರ್ಶಿ ಶಂಕರ ಗೋರೋಶಿ,ಸಂಜಯ ಹೊಸಕೋಟಿ, ಬಸನಗೌಡ ಪಾಟೀಲ, ಜಯಾನಂದ ಮುನವಳ್ಳಿ, ರಾಜಶೇಖರ ಬಿಳ್ಳೂರ, ಡಾ.ವಿಶ್ವನಾಥ ಶಿಂಧೋಳಿಮಠ,ಮಹಾAತೇಶ ತಾವಂಶಿ, ಪರಮೇಶ ಗುಲ್ಲ,ಪ್ರಶಾಂತ ಕುರಬೇಟ ಉಪಸ್ಥಿತರಿದ್ದರು.
ಶಿಕ್ಷಕರಾದ ಆರ್.ಎಲ್.ಮಿರ್ಚಿ, ಎಸ್.ಕೆ ಮಠದ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದ ಕೊನೆಯ ಹುಬ್ಬಳ್ಳಿಯ ಕಲಾಸುಜಯ ಇವರಿಂದ ಅನುಭವದೊಳು ವಚನ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

4 × 2 =