Breaking News

ಬೃಹತ್ ಲೋಕ ಅದಾಲತ್: ಗೋಕಾಕ & ಮೂಡಲಗಿ ನ್ಯಾಯಾಲಯಗಳಲ್ಲಿ 2,462 ಪ್ರಕರಣಗಳ ಇತ್ಯರ್ಥ

Spread the love

ಬೃಹತ್ ಲೋಕ ಅದಾಲತ್: ಗೋಕಾಕ & ಮೂಡಲಗಿ ನ್ಯಾಯಾಲಯಗಳಲ್ಲಿ 2,462 ಪ್ರಕರಣಗಳ ಇತ್ಯರ್ಥ


ಗೋಕಾಕ: ಇಲ್ಲಿನ ನ್ಯಾಯಾಲಯ ಸಂಕೀರ್ಣ ಮತ್ತು ಮೂಡಲಗಿ ನ್ಯಾಯಾಲಯದಲ್ಲಿ ಶನಿವಾರ ನಡೆದ ಬೃಹತ್ ಲೋಕ ಅದಾಲತ್‌ನಲ್ಲಿ ಒಟ್ಟು 2,462 ಪ್ರಕರಣಗಳು ರಾಜೀ ಸಂಧಾನದ ಮೂಲಕ ಇತ್ಯರ್ಥಗೊಂಡು, ಕಕ್ಷೀಗಾರರಿಗೆ ಸುಮಾರು 35.51 ಲಕ್ಷ ರೂ.ಗಳ ಪರಿಹಾರ ಪಾವತಿಸಲು ಆದೇಶಿಸಲಾಗಿದೆ.
ಇಲ್ಲಿನ ಮೂರು ಜೆ.ಎಂ.ಎಫ್.ಸಿ. ಮತ್ತು ಸಿವಿಲ್ ಜಡ್ಜ್ ನ್ಯಾಯಾಲಯಗಳು, ಮೂರು ಹಿರಿಯ ಸಿವಿಲ್ ಜಡ್ಜ್ ನ್ಯಾಯಾಲಯಗಳು ಮತ್ತು ೧೨ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇದ್ದ 2,103 ಪ್ರಕರಣಗಳು ಮತ್ತು ಪ್ರಿ-ಲಿಟಿಗೇಷನ್ ಹಂತದ 22 ಹಾಗೂ ಮೂಡಲಗಿ ಜೆ.ಎಂ.ಎಫ್.ಸಿ. ನ್ಯಾಯಾಲಯದ 337 ಪ್ರಕರಣಗಳು ಸಂಧಾನಕಾರರ ಯಶಸ್ವೀ ಮಧ್ಯಸ್ಥಿಕೆಯಿಂದಾಗಿ ಇತ್ಯರ್ಥಗೊಂಡು ಇವುಗಳಲ್ಲಿನ ಕಕ್ಷೀಗಾರರು ಇನ್ನು ಮುಂದೆ ನ್ಯಾಯ ಕೋರಿ ನ್ಯಾಯಾಲಯಗಳಿಗೆ ಅಲೆದಾಡುವುದು ತಪ್ಪಿದಂತಾಗಿದೆ ಎಂದು ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರೂ ಆಗಿರುವ ಹಿರಿಯ ಪ್ರಧಾನ ದಿವಾಣಿ ನ್ಯಾಯಾಧೀಶೆ ದೀಪಾ ಜಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About Yuva Bharatha

Check Also

ವಿಬಿ- ಜೀ ರಾಮ್ ಜೀ ಯೋಜನೆಯನ್ನು ಜಾರಿ ಮಾಡಿದ್ದರಿಂದ ಕಾಂಗ್ರೆಸ್ಸಿಗರು ಅಪಪ್ರಚಾರ ಮಾಡುತ್ತಿದ್ದಾರೆ.- ಸುಭಾಸ ಪಾಟೀಲ

Spread the love ಗೋಕಾಕ: ವಿಕಸಿತ ಭಾರತ ನಿರ್ಮಾಣಕ್ಕೆ ಪಣ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿಯವರು ವಿಬಿ- ಜೀ ರಾಮ್ …

Leave a Reply

Your email address will not be published. Required fields are marked *

18 − 8 =