ಗೋಕಾಕ: ನಾಳೆಯಿಂದ ತಾಲೂಕಿನಾದ್ಯಂತ ಕೋವಿಡ್ ಲಸಿಕಾ ಕೇಂದ್ರ ಆರಂಭವಾಗಲಿದ್ದು, ಮೊದಲಿಗೆ ಆರೋಗ್ಯಸಿಬ್ಬಂಧಿಗಳಿಗೆ ವಿತರಿಸಲಾಗುವದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ರವೀಂದ್ರ ಅಂಟಿನ ಹೇಳಿದರು.
ನಗರದಲ್ಲಿ ಶುಕ್ರವಾರದಂದು ಮಧ್ಯಾಹ್ನ ತಾಲೂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕು ಮುಖ್ಯವೈದ್ಯಾಧಿಕಾರಿ ಡಾ. ರವೀಂದ್ರ ಅಂಟಿನ, ತಾಲೂಕ ವೈದ್ಯಾಧಿಕಾರಿ ಡಾ.ಮುತ್ತಣ್ಣ ಕೊಪ್ಪದ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ತಾಲೂಕಿನಾದ್ಯಂತ ಸುಮಾರು ೪೫ ಕಡೆ ಕೋವಿಡ್ ಲಸಿಕಾ ಕೇಂದ್ರ ಆರಂಭಿಸಲಾಗುವದು ವೈದ್ಯರು, ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಸಿಬ್ಬಂದಿಗಳಿಗೆ ಪ್ರಥನ ಹಂತದಲ್ಲಿ ಲಸಿಕೆ ವಿತರಿಸುವ ಕೆಲಸ ಮಾಡಲಾಗುತ್ತದೆ, ನಂತರ ಹಂತ ಹಂತವಾಗಿ ಸಾರ್ವಜನಿಕರಿಗೆ ವಿತರಿಸಲಾಗುವದು. ಇನ್ನು ಗರ್ಭಿಣಿ ಮತ್ತು ಚಿಕ್ಕ ಮಕ್ಕಳ ಹೊರತು ಪಡಿಸಿ ೧೮ ವರ್ಷದ ಮೇಲ್ಪಟ್ಟವರಿಗೆ ಲಸಿಕೆ ವಿತರಿಸಲಾಗುತ್ತದೆ ಎಂದು ತಿಳಿಸಿದರು.
